ಸಹರಾನ್‌ಪುರ : ಕಾಶಿ ಮತ್ತು ಮಥುರಾದ ಧಾರ್ಮಿಕ ಸ್ಥಳಗಳ ಹಕ್ಕುಗಳ ನಡುವೆ ಜಮೀಯತ್ ಉಲೇಮಾ-ಎ-ಹಿಂದ್ ರಾಷ್ಟ್ರೀಯ ಸಮ್ಮೇಳನ ಫತ್ವಾ ನಗರದ ದೇವಬಂದ್‌ನಲ್ಲಿ ಭಾನುವಾರ ಮುಕ್ತಾಯಗೊಂಡಿತು. ಈ ವೇಳೆ ಜಮೀಯತ್ ಪ್ರಧಾನ ಕಾರ್ಯದರ್ಶಿ ಮಹ್ಮದ್ ಮದನಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವಾಗ ಭಾವುಕರಾದರು.
ದಿಯೋಬಂದ್‌ನ ಈದ್ಗಾ ಮೈದನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮದನಿ, ಎಲ್ಲಾ ಮುಸ್ಲಿಮರು ಭಯ, ಹತಾಶೆ ಮತ್ತು ಭಾವೋದ್ವೇಗದಿಂದ ದೂರವಿದ್ದು ತಮ್ಮ ಭವಿಷ್ಯದ ಒಳಿತಿಗಾಗಿ ಶ್ರಮಿಸಬೇಕು. ಮುಸ್ಲಿಮರು ಯಾವಾಗಲೂ ತ್ಯಾಗ ಮಾಡಲು ಸಿದ್ಧರಿದ್ದಾರೆ. ಈ ವಿಷಯದಲ್ಲಿ ಅವರು ಯಾರಿಗೂ ಕಡಿಮೆಯಿಲ್ಲ ಎಂದು ಹೇಳಿದರು.
ಕೊನೆಯ ದಿನದಲ್ಲಿ ವಿಶೇಷವಾಗಿ ಸಾಂವಿಧಾನಿಕ ಹಕ್ಕುಗಳ ಹರಣ ಮತ್ತು ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನ, ಜ್ಞಾನವಾಪಿ ಮಸೀದಿ ಮತ್ತು ಮಥುರಾ ಈದ್ಗಾ, ಪವಿತ್ರ ಪ್ರವಾದಿ (ಸ) ನಿಂದನೆ ಮತ್ತು ಹಿಂದಿ ಭಾಷೆ ಅಳವಡಿಕೆಗೆ ಸಂಬಂಧಿಸಿದಂತೆ ಹಲವಾರು ಪ್ರಮುಖ ಪ್ರಸ್ತಾಪಗಳನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.
ಓದಿ: ಬುಲ್ಡೋಜರ್ ರಾಜಕಾರಣದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಜಮೀಯತ್ ಉಲೇಮಾ-ಎ-ಹಿಂದ್
ಈ ದೇಶದ ರಕ್ಷಣೆಗಾಗಿ ನಮ್ಮ ಪ್ರಾಣ ಹೋದರೂ ಅದು ನಮಗೆ ಸಂತೋಷದ ಸಂಗತಿಯಾಗಿದೆ. ದೇಶಕ್ಕಾಗಿ ನಮ್ಮ ಜವಾಬ್ದಾರಿಯನ್ನು ನಾವು ನಿರ್ವಹಿಸುತ್ತೇವೆ. ನಮ್ಮ ಅಸ್ಮಿತೆ ಮತ್ತು ನಮ್ಮ ತಾಯ್ನಾಡಿನ ಮೇಲಿನ ಪ್ರೀತಿಯನ್ನು ಸಹಿಸದಿದ್ದರೆ ಅವರು ಬೇರೆಡೆ ಹೋಗಬಹುದು. ನಾನು ಈ ತಾಯ್ನಾಡು ನಮ್ಮದು ಎಂದು ಹೇಳುತ್ತೇನೆ. ನಮ್ಮ ಪುರ್ವಜರು ಬಹುಪಾಲು ಇಲ್ಲೇ ವಾಸಿಸುತ್ತಿದ್ದರು ಎಂದು ಸ್ಪಷ್ಟವಾಗಿ ಹೇಳಿದರು.
ನಾವು ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಕಳುಹಿಸಲು ನಿಮಗೆ ಆಸಕ್ತಿ ಇದ್ದರೆ ನೀವೇ ಹೋಗಿ ಎಂದು ಮೌಲಾನಾ ಮಹಮೂದ್ ಮದನಿ ಮುಸ್ಲಿಮರ ಸಾಂವಿಧಾನಿಕ ಹಕ್ಕುಗಳ ಬಗ್ಗೆ, ವಿಶೇಷವಾಗಿ ಮುಸ್ಲಿಂ ವೈಯಕ್ತಿಕ ಕಾನೂನನ್ನು ಕೊನೆಗೊಳಿಸಲು ಯುಸಿಸಿಯ ಪ್ರಯತ್ನಗಳ ಬಗ್ಗೆ ಮಾತಾನಡಿದರು. ಕಾನೂನು ಏನೇ ಇರಲಿ ಮುಸ್ಲಿಮರು ತಮ್ಮ ನಂಬಿಕೆಗಳು ಮತ್ತು ಷರಿಯಾಗಳನ್ನು ಹೊಂದಿದ್ದರೆ ಸಾಕು, ಅವರು ಅದರಿಂದ ಯಾವುದೇ ಹಾನಿಯಾಗುವುದಿಲ್ಲ ಎಂದರು.۔