ಹಮೀರ್‌ಪುರ: ಉತ್ತರ ಪ್ರದೇಶವು ಕೊರೊನಾ ಹೊಡೆತಕ್ಕೆ ತತ್ತರಿಸಿದ್ದು, ಸೋಂಕಿತರಿಗೆ ಆಮ್ಲಜನಕದ ಪೂರೈಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಮಧ್ಯೆ ಉದ್ಯಮಿಯೊಬ್ಬರು ಕೇವಲ ಒಂದು ರೂಪಾಯಿಯಲ್ಲಿ ಆಮ್ಲಜನಕ ಮರುಭರ್ತಿ ಮಾಡಿಕೊಡುವ ಮಾನವೀಯ ಕಾರ್ಯಕ್ಕೆ ಮುಂದಾಗಿದ್ದಾರೆ.
ರಿಮ್ಜಿಮ್ ಇಸ್ಪತ್ ಕಾರ್ಖಾನೆಯಲ್ಲಿನ ಆಮ್ಲಜನಕ ಅನಿಲ ಸ್ಥಾವರವು 24 ಗಂಟೆಗಳಲ್ಲಿ 1,000 ಆಮ್ಲಜನಕ ಸಿಲಿಂಡರ್‌ಗಳನ್ನು ಪುನಃ ತುಂಬಿಸುವ ಸಾಮರ್ಥ್ಯ ಹೊಂದಿದೆ. ಜೀವಾಮೃತ ಆಮ್ಲಜನಕದ ಅಗತ್ಯವಿರುವ ತಮ್ಮ ಕುಟುಂಬ ಸದಸ್ಯರಿಗೆ ತಮ್ಮ ಆಮ್ಲಜನಕ ಸಿಲಿಂಡರ್ ಅನ್ನು ಪುನಃ ತುಂಬಿಸಲು ಹಲವಾರು ಜನರು ಕಾರ್ಖಾನೆಯ ಹೊರಗೆ ಸಾಲುಗಟ್ಟಿ ನಿಂತಿದ್ದಾರೆ. ಇನ್ನು ಕೈಗಾರಿಕಾ ಅಭಿವೃದ್ಧಿ ಸಚಿವ ಸತೀಶ್ ಮಹಾನಾ ಅವರು ರಿಮ್ಜಿಮ್ ಇಸ್ಪತ್ ಕಾರ್ಖಾನೆಗೆ ಭೇಟಿ ನೀಡಿ ಆಮ್ಲಜನಕ ಸಿಲಿಂಡರ್‌ಗಳನ್ನು ಮರು ತುಂಬಿಸುವುದನ್ನು ತಪಾಸಣೆ ಮಾಡಿದ್ದು, ಈ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಪನಿ ಮಾಲೀಕ ಸಮರಿತನ್ ಮನೋಜ್ ಗುಪ್ತಾ ಕಳೆದ ವರ್ಷ ನಾನು ಕೊರೊನಾ ಸೋಂಕಿಗೆ ಒಳಗಾಗಿದ್ದರಿಂದ ಇದರ ನೋವು ಮತ್ತು ಆಮ್ಲಜನಕದ ಅನಿವಾರ್ಯತೆ ಎಷ್ಟಿದೆ ಎಂಬುದು ತಿಳಿದಿದೆ ಎಂದರು. ಹೀಗಾಗಿ ಜನರಿಗೆ 1 ರೂಪಾಯಿಯಲ್ಲಿ ಆಕ್ಸಿಜನ್ ಪೂರೈಕೆಗೆ ಮುಂದಾಗಿದ್ದು, ಜನರು ತಮ್ಮ ಆಮ್ಲಜನಕ ಸಿಲಿಂಡರ್‌ಗಳನ್ನು ಕಡಿಮೆ ವೆಚ್ಚದಲ್ಲಿ ರೀಫಿಲ್ ಮಾಡಿಸಿಕೊಳ್ಳಲು ದೂರ ದೂರುಗಳಿಂದ ಬರುತ್ತಿದ್ದಾರೆ ಎಂದು ಹೇಳಿದ್ರು.
ಆಕ್ಸಿಜನ್ ಸಿಲಿಂಡರ್ ಮರುಭರ್ತಿಗೆ ಬರುವ ಹೋಮ್ ಐಸೋಲೇಷನ್ನಲ್ಲಿ ಇರುವ ಎಲ್ಲಾ ಕೋವಿಡ್ ರೋಗಿಗಳ ಸಂಬಂಧಿಕರು ತಮ್ಮ ಆರ್‌ಟಿ-ಪಿಸಿಆರ್ ವರದಿಯನ್ನು ಸಲ್ಲಿಸಿ ನಂತರ ಸಿಲಿಂಡರ್‌ಗಳನ್ನು ಪುನಃ ತುಂಬಿಸಬಹುದು, ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಂದ ಪ್ರಮಾಣಪತ್ರ ಮತ್ತು ಆಧಾರ್ ಕಾರ್ಡ್ ಪ್ರತಿ ನೀಡಿ ಆಕ್ಸಿಜನ್ ಸಿಲಿಂಡರ್ ಪಡೆಯಬಹುದು.
ಇನ್ನು ಕೇವಲ ಒಂದು ರೂಪಾಯಿಗೆ ಆಮ್ಲಜನಕವನ್ನು ಒದಗಿಸುವ ರಿಮ್ಜಿಮ್ ಇಸ್ಪತ್ ಕಾರ್ಖಾನೆಯ ನಿರ್ಧಾರವನ್ನು ರೋಗಿಗಳು ಮತ್ತು ಸ್ಥಳೀಯರು ಶ್ಲಾಘಿಸಿದ್ದಾರೆ.