ETV Bharat / bharat

ಮುಸ್ಲಿಂ ಬಾಹುಳ್ಯ ವಾರಣಾಸಿಯ ಈ ಕ್ಷೇತ್ರದಲ್ಲಿ ಬಿಜೆಪಿಯದ್ದೇ ಪಾರುಪತ್ಯ..ಇಲ್ಲಿ 8 ಬಾರಿ ಅರಳಿದೆ ಕಮಲ! - ಮುಸ್ಲಿಮರಿದ್ದರೂ ಬಿಜೆಪಿ ಗೆಲ್ಲುವ ಕ್ಷೇತ್ರ

ಪ್ರಸ್ತುತ ಈ ಕ್ಷೇತ್ರದ ಶಾಸಕ, ದತ್ತಿ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವರಾದ ನೀಲಕಂಠ ತಿವಾರಿ ಒಂದು ಬಾರಿ ಗೆದ್ದಿದ್ದರೆ, ಶ್ಯಾಮದೇವ್ ರೈ ಚೌಧರಿ ಈ ಕ್ಷೇತ್ರದಿಂದ 7 ಬಾರಿ ವಿಜಯ ಸಾಧಿಸಿದ್ದಾರೆ. ಇವರಿಗೆ ಬೇರೆ ಧರ್ಮದ ಮತಗಳಿಗಿಂತಲೂ ಮುಸ್ಲಿಂ ಮತಗಳೇ ಹೆಚ್ಚು ಚಲಾವಣೆಯಾಗಿದ್ದವು ಎಂಬುದು ವಿಶೇಷ..

varanasi
ಯಾವುದು ಆ ಕ್ಷೇತ್ರ
author img

By

Published : Jan 28, 2022, 4:10 PM IST

Updated : Jan 28, 2022, 4:33 PM IST

ವಾರಣಾಸಿ(ಉತ್ತರ ಪ್ರದೇಶ): ಉತ್ತರಪ್ರದೇಶದ ವಾರಣಾಸಿ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. 8 ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ಮುಸ್ಲಿಂ ಮತದಾರರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳೇ ಸತತವಾಗಿ ಗೆಲುವು ಸಾಧಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆ ಹಲವು ರಾಜಕೀಯ ಪಕ್ಷಗಳ ಭವಿಷ್ಯವನ್ನು ನಿರ್ಧರಿಸಲಿದೆ. ಬಹುಶಃ ಇದೇ ಕಾರಣಕ್ಕಾಗಿಯೇ ಆಡಳಿತಾರೂಢ ಬಿಜೆಪಿ ಪಕ್ಷ ಅಳೆದು ತೂಗಿ ತನ್ನ ಅಭ್ಯರ್ಥಿಗಳನ್ನು ಘೋಷಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಂಸದರಾಗಿ ಪ್ರತಿನಿಧಿಸುವ ಕ್ಷೇತ್ರವಾದ ವಾರಣಾಸಿಯಲ್ಲಿ ಬರುವ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಒಂದಲ್ಲ, ಎರಡಲ್ಲ ಸತತ 8 ವಿಧಾನಸಭಾ ಚುನಾವಣೆಗಳಲ್ಲಿ ವಿಜಯ ಸಾಧಿಸುತ್ತಾ ಬಂದಿದ್ದಾರೆ.

ಪ್ರಸ್ತುತ ಈ ಕ್ಷೇತ್ರದ ಶಾಸಕ, ದತ್ತಿ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವರಾದ ನೀಲಕಂಠ ತಿವಾರಿ ಒಂದು ಬಾರಿ ಗೆದ್ದಿದ್ದರೆ, ಶ್ಯಾಮದೇವ್ ರೈ ಚೌಧರಿ ಈ ಕ್ಷೇತ್ರದಿಂದ 7 ಬಾರಿ ವಿಜಯ ಸಾಧಿಸಿದ್ದಾರೆ. ಇವರಿಗೆ ಬೇರೆ ಧರ್ಮದ ಮತಗಳಿಗಿಂತಲೂ ಮುಸ್ಲಿಂ ಮತಗಳೇ ಹೆಚ್ಚು ಚಲಾವಣೆಯಾಗಿದ್ದವು ಎಂಬುದು ವಿಶೇಷ.

ಇದನ್ನೂ ಓದಿ: ಜಮ್ಮು-ಕಾಶ್ಮೀರದ ಯುವಕನಿಂದ 6 ಸೀಟುಗಳ ವಿಮಾನಯಾನ ಸಂಸ್ಥೆ ಆರಂಭ

ಶ್ಯಾಮದೇವ್ ರೈ ಚೌಧರಿ ಅವರು 2012, 1991, 1993, 1996, 2002, 2007 ಮತ್ತು 2012ರ ವಿಧಾನಸಭಾ ಚುನಾವಣೆಗಳಲ್ಲಿ ಸತತವಾಗಿ ಗೆದ್ದಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಚೌಧರಿ ಅವರ ಬದಲಾಗಿ ನೀಲಕಂಠ ತಿವಾರಿ ಅವರನ್ನು ಪಕ್ಷ ಕಣಕ್ಕಿಳಿಸಿತ್ತು. ಅವರೂ ಕೂಡ ಗೆದ್ದು ಸಚಿವರಾಗಿ ಇತಿಹಾಸ ನಿರ್ಮಿಸಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಜಾತಿ ಸಮೀಕರಣಗಳು ಏನೇ ನಡೆಯುತ್ತಿದ್ದರೂ ವಾರಣಾಸಿ ಕ್ಷೇತ್ರದಲ್ಲಿ ಮಾತ್ರ ಬೇರೆಯದ್ದೇ ಆಟ ನಡೆದಿದೆ. ಇಲ್ಲಿನ ಮುಸ್ಲಿಮರು ಬಿಜೆಪಿಗೇ ಜೈ ಎನ್ನುತ್ತಾ ಬಂದಿದ್ದಾರೆ.

ಇಲ್ಲಿನ ಮತದಾರರ ಸಂಖ್ಯೆಯನ್ನು ಗಮನಿಸುವುದಾದರೆ, ಬ್ರಾಹ್ಮಣ ಮತಗಳು ಶೇ.8ರಷ್ಟಿದ್ದರೆ, ಮುಸ್ಲಿಂ ಮತದಾರರು ಶೇ.13ಕ್ಕಿಂತ ಹೆಚ್ಚಿದ್ದಾರೆ. ಶೇ.6 ರಷ್ಟು ಕ್ಷತ್ರೀಯ ಮತದಾರರು, ಶೇ.8 ಷ್ಟು ವೈಶ್ಯ ಮತದಾರರು ಇದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ವಾರಣಾಸಿ ದಕ್ಷಿಣ ವಿಧಾನಸಭೆ ಕ್ಷೇತ್ರ ಯಾರ ಪಾಲಾಗಲಿದೆ ಎಂಬುದು ಎಲ್ಲರ ಕುತೂಹಲ ಕೆರಳಿಸಿದೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 28, 2022, 4:33 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.