ಸೂರತ್(ಗುಜರಾತ್): ಬರೋಬ್ಬರಿ 12 ವರ್ಷಗಳ ಹಿಂದೆ ಪ್ರೇಮ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯೊಂದು ಇದೀಗ ದೀಕ್ಷೆ ಪಡೆದುಕೊಂಡಿದೆ. ತಮ್ಮ 36ನೇ ವಯಸ್ಸಿನಲ್ಲಿ ಇಂತಹ ನಿರ್ಧಾರ ಕೈಗೊಂಡಿದ್ದಾರೆ. ಪ್ರಿಯಾಂಕ್ ಕಿರಣ್ ಮತ್ತು ಭವ್ಯತಾ ಪ್ರಿಯಾಂಕ್ ವೊಹೆರಾ ಈ ನಿರ್ಧಾರ ಕೈಗೊಂಡಿದ್ದು, ಪತ್ನಿ ಜೊತೆ ಸೇರಿ ಸೂರತ್ನ ವೆಸು ರಾಮ್ ವಿಹಾರ್ನಲ್ಲಿ ದೀಕ್ಷೆ ಪಡೆದುಕೊಂಡಿದ್ದಾರೆ. ಈ ಹಿಂದೆ ಇವರ ಇಬ್ಬರು ಮಕ್ಕಳು ದೀಕ್ಷೆ ಪಡೆದುಕೊಂಡಿದ್ದಾರೆ.

ಮೂರು ದಿನಗಳ ಕಾಲ ದೀಕ್ಷಾ ಉತ್ಸವ: ರಾಮ್ ವಿಹಾರ್ನಲ್ಲಿ ಮೂರು ದಿನಗಳ ಕಾಲ ದೀಕ್ಷಾ ಉತ್ಸವ ಆಯೋಜನೆ ಮಾಡಲಾಗಿದ್ದು, ಇದರಲ್ಲಿ ಗುಜರಾತ್ ಮತ್ತು ಮುಂಬೈನ ಪ್ರಸಿದ್ಧ ಸಂಗೀತಗಾರರು, ಬರಹಗಾರರು ಮತ್ತು ಕವಿಗಳು ಭಾಗಿಯಾಗಿದ್ದರು. ಪ್ರಿಯಾಂಕ್ ವೊಹೆರಾ ಅಹಮದಾಬಾದ್ನಲ್ಲಿ ಉದ್ಯಮಿಯಾಗಿದ್ದು, ಅವರ ಪತ್ನಿ ಗೃಹಣಿಯಾಗಿದ್ದಾರೆ. ಇದೀಗ ಇಬ್ಬರು ದೀಕ್ಷೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿರಿ: ನಡು ರಸ್ತೆಯಲ್ಲೇ ಮುದ್ದಾದ ಮರಿಗೆ ಜನ್ಮ ನೀಡಿದ ಆನೆ.. ಗಂಟೆಗಳ ಕಾಲ ಸಂಚಾರ ಬಂದ್!
12 ವರ್ಷಗಳ ಹಿಂದೆ ಪ್ರೀತಿಸಿ ಮದುವೆ: ಈ ಜೋಡಿ ಬರೋಬ್ಬರಿ 12 ವರ್ಷಗಳ ಹಿಂದೆ ಒಟ್ಟಿಗೆ ಪರಸ್ಪರ ಪ್ರೀತಿಸಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಇದೀಗ ದೀಕ್ಷೆ ಪಡೆದುಕೊಂಡಿದ್ದಾರೆ. ಈ ಜೋಡಿಗೆ ಒಟ್ಟು 47 ದೀಕ್ಷೆಗಳು ನಡೆದಿವೆ.
ಕೋಟ್ಯಂತರ ರೂಪಾಯಿ ವ್ಯವಹಾರ, ಅಪಾರವಾದ ವೈಭೋಗ, ಯೌವನ, ಸ್ನೇಹಿತರು ಹಾಗೂ ಸಂಬಂಧಿ ಇತ್ಯಾದಿಗಳನ್ನ ಬಿಟ್ಟು ಜೋಡಿ ಈ ನಿರ್ಧಾರ ಕೈಗೊಂಡಿದ್ದು, ಅನೇಕರಲ್ಲಿ ಆಶ್ಚರ್ಯ ಮೂಡಿಸಿದೆ. ಈ ಜೋಡಿಗೆ ಇಬ್ಬರು ಮಕ್ಕಳಿದ್ದು, ಕಳೆದ ಎರಡೂವರೆ ವರ್ಷಗಳ ಹಿಂದೆ ದೀಕ್ಷೆ ಪಡೆದುಕೊಂಡಿದ್ದಾರೆ. ಸುರ್ ಮತ್ತು ಸಿರಿನ್ ಸಂಸ್ಕೃತ, ಗುಜರಾತಿ, ಹಿಂದೆ ಮತ್ತು ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ.