ETV Bharat / bharat

ಅಂದು ಸೇನಾ ಶಾಲೆ ವಿದ್ಯಾರ್ಥಿ, ಇಂದು ಸೇನಾ ಮೇಜರ್: 21 ವರ್ಷದ ಬಳಿಕ ​ಮೋದಿ ಭೇಟಿಯಾದ ಅಮಿತ್​

ಪ್ರಧಾನಿ ಮೋದಿ ಅವರನ್ನು ಮೇಜರ್​ ಅಮಿತ್​ ಅವರು 21 ವರ್ಷಗಳ ಬಳಿಕ ಭೇಟಿ ಮಾಡಿದ್ದಾರೆ. ಮೋದಿ ಅವರು ಗುಜರಾತ್​ ಸಿಎಂ ಆಗಿದ್ದಾಗ, ಮೇಜರ್​ ಅಮಿತ್​ ಸೇನಾ ಶಾಲೆಯ ವಿದ್ಯಾರ್ಥಿಯಾಗಿದ್ದರು.

army-officers-reunion-with-modi
21 ವರ್ಷ ಬಳಿಕ ​ಮೋದಿ ಭೇಟಿ ಮಾಡಿದ ಅಮಿತ್​
author img

By

Published : Oct 24, 2022, 4:13 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2001 ರಲ್ಲಿ ಗುಜರಾತ್​ ಮುಖ್ಯಮಂತ್ರಿಯಾಗಿದ್ದಾಗ ಸೈನಿಕ ಶಾಲೆಗೆ ಭೇಟಿ ನೀಡಿದ್ದರು. ಅಂದು ಅಲ್ಲಿದ್ದ ವಿದ್ಯಾರ್ಥಿಗೆ ಶೀಲ್ಡ್​ ನೀಡಿದ್ದರು. ಇಂದು ಅದೇ ವಿದ್ಯಾರ್ಥಿ ಯೋಧನಾಗಿ ಸೇನೆ ಸೇರಿದ್ದು, ಪ್ರಧಾನಿ ಮೋದಿ ಅವರನ್ನು 21 ವರ್ಷಗಳ ಬಳಿಕ ಭೇಟಿಯಾದರು.

ದೀಪಾವಳಿ ಹಬ್ಬವನ್ನು ಯೋಧರೊಂದಿಗೆ ಆಚರಿಸಲು ಪ್ರಧಾನಿ ಮೋದಿ ಕಾರ್ಗಿಲ್​ಗೆ ಭೇಟಿ ನೀಡಿದ್ದಾರೆ. ಈ ವೇಳೆ ಮೇಜರ್ ಅಮಿತ್​ ಅವರು ಮೋದಿ ಅವರ ಜೊತೆಗೆ 21 ವರ್ಷಗಳ ಹಿಂದೆ ಪಡೆದುಕೊಂಡಿದ್ದ ಪಾರಿತೋಷಕದ ಫೋಟೋವನ್ನು ತೋರಿಸಿದ್ದಾರೆ. ಇದು ಇಬ್ಬರ ನಡುವಣ ಭಾವನಾತ್ಮಕ ಪುನರ್ಮಿಲನವಾಗಿ ಮಾರ್ಪಟ್ಟಿತು.

ಸೇನಾ ಶಾಲೆಯ ವಿದ್ಯಾರ್ಥಿಯಾಗಿದ್ದ ಅಮಿತ್​ ಇಂದು ಭಾರತದ ಸೇನೆಯ ಮೇಜರ್​ ಆಗಿದ್ದಾರೆ. ತಮ್ಮಿಂದ ಪಾರಿತೋಷಕ ಪಡೆದ ವಿದ್ಯಾರ್ಥಿ ಇಂದು ಸೇನಾಧಿಕಾರಿ ಆಗಿರುವುದು ಪ್ರಧಾನಿ ಮೋದಿಗೆ ಹೆಮ್ಮೆ ತರಿಸಿದೆ. ಇದೇ ವೇಳೆ ಮೇಜರ್​ ಅಮಿತ್​, ಪಾರಿತೋಷಕ ಪಡೆದ ಫೋಟೋವನ್ನು ಪ್ರಧಾನಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ನರೇಂದ್ರ ಮೋದಿ ಅವರು 2014 ರಲ್ಲಿ ಪ್ರಧಾನಿಯಾದಾಗಿನಿಂದ ಪ್ರತಿ ವರ್ಷ ಸಶಸ್ತ್ರ ಪಡೆಗಳ ಜೊತೆಗೆ ದೀಪಾವಳಿ ಆಚರಿಸುತ್ತ ಬಂದಿದ್ದಾರೆ.

ಓದಿ: ನಾರಿಶಕ್ತಿಯಿಂದ ಸೇನೆಯ ಜೊತೆಗೆ ದೇಶದ ಬಲವೂ ವೃದ್ಧಿ: ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.