ಆದೂ ಯಾವ ಸಂದರ್ಭದಲ್ಲೂ ಪ್ರೀತಿ ಅರಳಬಹುದು. ಪ್ರೀತಿಗೆ ಯಾವುದೇ ಜಾತಿ, ಧರ್ಮ, ಯಾವುದೇ ಗಡಿ , ಬಡವ ಶ್ರೀಮಂತ ಎಂಬ ಭೇದವೂ ಇಲ್ಲ. ಆದರೆ, ಪ್ರೀತಿ ಹೇಗಾದರೂ ಹುಟ್ಟಲಿ, ಆದರೆ, ಫೆಬ್ರವರಿ 14 ಪ್ರೇಮಿಗಳನ್ನೂ ಪ್ರೇಮಲೋಕದಲ್ಲಿ ತೇಲಿಸುವದಂತೂ ನಿಜ. ಫೆಬ್ರವರಿ 14 ಪ್ರೇಮಿಗಳ ದಿನ’ ಪ್ರಸ್ತುತ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚು ಮೌಲ್ಯ ಪಡೆದುಕೊಳ್ಳುತ್ತಿದೆ. ಆ ದಿನ ಜಗತ್ತಿನ ಮೂಲೆ ಮೂಲೆಗಳಲ್ಲಿಯೂ ಪ್ರೇಮಿಗಳು ಆನಂದೋತ್ಸಾಹದ ಆಚರಣೆಯಲ್ಲಿ ತೊಡಗಿ ಪ್ರೇಮ ನಿವೇದನ ಮಾಡಿಕೊಳ್ಳುವುದು ವಿಶಿಷ್ಟ ಸಂಪ್ರದಾಯ.
ಚಾಕಲೇಟುಗಳು, ಆಟಿಕೆಗಳು, ಬೆಲೆಬಾಳುವ ಉಡುಗೊರೆಗಳು...ಒಂದೇ ಗುಲಾಬಿ ಹೂವಿನಿಂದಲೂ ತಮ್ಮ ಹೃದಯದಲ್ಲಿ ಪ್ರೀತಿಯನ್ನು ನಿವೇದನ ಮಾಡುವ ಪ್ರೇಮಿಗಳು.. ಅಂದಿನ ಅವರ ಖುಷಿಯನ್ನೂ ಅಕ್ಷರಗಳಲ್ಲಿ ವರ್ಣಿಸುವುದು ಸುಲಭವಲ್ಲ. ಫೆಬ್ರುವರಿ 14 ಪ್ರೇಮಿಗಳ ದಿನ ಪ್ರೇಮಿಯೂ ತನ್ನ ಪ್ರೇಯಸಿಗೆ ಪ್ರೀತಿ ನಿವೇದಿಸುವುದು ಸಾಮಾನ್ಯ ಅನಿಸಿದರೂ, ಜಗತ್ತಿನ ವಿವಿಧ ದೇಶಗಳಲ್ಲಿ ವಿಭಿನ್ನ ಆಚರಣೆಗಳಿವೆ.
ವಿವಿಧ ದೇಶ ವಿಭಿನ್ನ ಆಚರಣೆ: ವ್ಯಾಲೆಂಟೈನ್ಸ್ ಡೇ ಯನ್ನು 'ವೈನ್ ಡೇ' ಎಂಬ ಹೆಸರಿನಲ್ಲಿ ಬಲ್ಗೇರಿಯಾ ದೇಶದಲ್ಲಿ ಆಚರಿಸಲಾಗುತ್ತದೆ. ಆ ದಿನ ದಂಪತಿಗಳು ಪರಸ್ಪರ ವೈನ್ ವಿನಿಮಯ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೀತಿ ನಿವೇದನೆ ಮಾಡುವರು. ಫಿಲಿಪ್ಪಿನ್ಸ್ ದೇಶದಲ್ಲಿ ಪ್ರೇಮಿಗಳ ದಿನದಂದು ಸಾಮೂಹಿಕ ವಿವಾಹ ಆಯೋಜಿಸಲಾಗುತ್ತಿದೆ. ಅಂದು ನೂರಾರು ಮತ್ತು ಸಾವಿರಾರು ಜೋಡಿಗಳು ಹೊಸ ದಾಂಪತ್ಯ ಜೀವನಕ್ಕೆ ಕಾಲಿಡುವರು. ಆದರೆ ಈ ಸಾಮೂಹಿಕ ವಿವಾಹಯನ್ನು ಸರಕಾರವೇ ಹಮ್ಮಿಕೊಳ್ಳುವುದು
2007 ರಿಂದ ಫೆಬ್ರವರಿ 14 ಅನ್ನು ಘಾನಾ ಸರ್ಕಾರವು ರಾಷ್ಟ್ರೀಯ ಚಾಕೊಲೇಟ್ ದಿನವನ್ನಾಗಿ ಆಚರಿಸುತ್ತಿದೆ. ಚಾಕೊಲೇಟ್ ದಲ್ಲಿ ಬಳಸುವ ಕೋಕೋ ಬೀನ್ಸ್ ಹೆಚ್ಚು ಉತ್ಪಾದನೆ ದೇಶಗಳಲ್ಲಿ ಘಾನಾವೂ ಒಂದು, ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಆಚರಣೆಗಳನ್ನು ಆಯೋಜಿಸುತ್ತಿದೆ. ಫೆಬ್ರವರಿ 14 ರಂದು ದೇಶಾದ್ಯಂತ ವಿಶೇಷ ಚಾಕೊಲೇಟ್ ಮೆನುಗಳು ಮತ್ತು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ದಕ್ಷಿಣ ಕೊರಿಯಾದಲ್ಲಿ ಪ್ರತಿ ತಿಂಗಳ 14ನೇ ತಾರೀಖನ್ನು 'ಪ್ರೇಮಿಗಳ ದಿನ'ವನ್ನಾಗಿ ಆಚರಿಸಲಾಗುತ್ತದೆ. ಆದರೆ ಫೆಬ್ರವರಿ 14 ಮತ್ತು ಮಾರ್ಚ್ 14 ಹೆಚ್ಚು ವಿಶೇಷವಾಗಿದೆ. ಮಹಿಳೆಯರು ಫೆಬ್ರವರಿ 14 ರಂದು ಪುರುಷರಿಗೆ ಚಾಕೊಲೇಟ್‌ಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ, ಪುರುಷರು ತಮ್ಮ ಪ್ರೇಮಿಗಳಿಗೆ ಚಾಕೊಲೇಟ್‌ಗಳನ್ನು ಮಾರ್ಚ್ 14 ರಂದು ಹಿಂದಿರುಗಿಸುತ್ತಾರೆ. ಇದನ್ನು 'ವೈಟ್ ಡೇ' ಎಂತಲೂ ಕರೆಯಲಾಗುತ್ತದೆ. ಇದಾದ ಬಳಿಕ ಏಪ್ರಿಲ್ 14 ರಂದು 'ಬ್ಲಾಕ್ ಡೇ' ನಡೆಯಲಿದೆ. ಎರಡು ತಿಂಗಳಿನಿಂದ (ಸಿಂಗಲ್ಸ್) ಯಾವುದೇ ಉಡುಗೊರೆ ಪಡೆಯದವರೆಲ್ಲರೂ ಇಂದು ಒಟ್ಟಿಗೆ ಸೇರಿ ಕಪ್ಪು ಬೀನ್ ಸಾಸ್ ನೂಡಲ್ಸ್ ತಿನ್ನುತ್ತಾರೆ. ದಕ್ಷಿಣ ಕೊರಿಯಾ ದೇಶದಲ್ಲಿ ವ್ಯಾಲೆಂಟೈನ್ಸ್ ಡೇ ವಿಚಿತ್ರ.
ಫೆಬ್ರವರಿ 14 ರಂದು ಇಡೀ ಜಗತ್ತು 'ಪ್ರೇಮಿಗಳ ದಿನ' ಆಚರಣೆಯಲ್ಲಿ ತೊಡಗಿಕೊಳ್ಳುತ್ತದೆ. ಆದರೆ ಉತ್ತರ ಯುರೋಪಿನ ಎಸ್ಟೋನಿಯಾ ದೇಶದಲ್ಲಿ ಈ ದಿನ 'ಫ್ರೆಂಡ್‌ಶಿಪ್ ಡೇ' ಎಂದು ಆಚರಿಸಲ್ಪಡುತ್ತದೆ. ಆ ದಿನ ಸ್ನೇಹಿತರು ಪರಸ್ಪರ ಶುಭಾಶಯ ಪತ್ರ, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವರು. ಸ್ನೇಹಿತರು ಮಾತ್ರವಲ್ಲದೇ ಸಂಬಂಧಿಕರು ಪರಸ್ಪರ ಶುಭ ಹಾರೈಸುವರು.
ವೇಲ್ಸ್ ದೇಶದಲ್ಲಿ ಪ್ರೇಮಿಗಳ ದಿನವನ್ನು ಜನವರಿ 25 ರಂದು 'ಸ್ಯಾನ್ ಡ್ವೈನ್ವೆನ್ ದಿನ' ಎಂದು ಆಚರಿಸಲಾಗುತ್ತದೆ. ಅಂದು ಪ್ರೇಮಿಗಳು ವಿವಿಧ ಆಕಾರದ ಮರದ ಚಮಚಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವರು. ಹೃದಯ ಹೋಲುವ ಆಕಾರದ ಸ್ಪೂನ್‌ಗಳನ್ನು ವಿತರಿಸಿ, ಹೃದಯದಲ್ಲಿರುವ ಪ್ರೀತಿಯನ್ನು ಹೇಳಿ ನೀಡವುದು ಒಂದು ವಿಶೇಷ ಆಚರಣೆ ಇದೆ. ಇದು 16ನೇ ಶತಮಾನದಿಂದಲೂ ಪ್ರೇಮಿಗಳ ದಿನ ಆಚರಿಸಲಾಗುತ್ತಿದೆ.
ಸೆಂಟ್ರಲ್ ಯುರೋಪ್‌ನ ಜೆಕ್ ರಿಪಬ್ಲಿಕ್‌ನಲ್ಲಿ ವ್ಯಾಲೆಂಟೈನ್ಸ್ ಡೇ ಅನ್ನು ಮೇ 1 ರಂದು ಆಚರಿಸಲಾಗುತ್ತದೆ. ಆ ದಿನ ಪ್ರೇಮಿಗಳೆಲ್ಲರೂ ದೇಶದ ಪ್ರಸಿದ್ಧ ಕವಿ ಕರೇಲ್ ಹೈನೆಕ್ ಮಚಾ ಅವರ ಪ್ರತಿಮೆ ಸಮೀಪದ ಬಂದೂ ಆರಾಧಿಸುವರು. ಅಂದು ಚೆರ್ರಿ ಮರಗಳ ಕೆಳಗೆ ತಮ್ಮ ಗೆಳತಿ,ಗೆಳೆಯನನ್ನು ಪ್ರೀತಿಯಿಂದ ಚುಂಬಿಸುವರು. ಹೀಗೆ ಮಾಡುವುದರಿಂದ ಪ್ರೀತಿ ಅಮರವಾಗಿರುತ್ತದೆ ಎಂಬ ನಂಬಿಕೆ ಇದೆ.
ಇದನ್ನೂಓದಿ:ವ್ಯಾಲೆಂಟೈನ್ಸ್ ಡೇ 2023: ಸೆಲೆಬ್ರಿಟಿ ದಂಪತಿಗಳ ಲವ್ ಮೆಸೇಜ್ ಇಲ್ಲಿವೆ..