ETV Bharat / bharat

ಉಸಿರಾಟ ಸಮಸ್ಯೆ: ಕೊರೊನಾ ರೋಗಿಗಳಿಗೆ ಆಮ್ಲಜನಕ ಪೂರೈಸುತ್ತಿರುವ ಕೈಗಾರಿಕೆಗಳು - auto companies supply ventilator

ಈ ಮಧ್ಯೆ ವರದಿಗಳ ಪ್ರಕಾರ, ಕೋವಿಡ್ -19 ಸೋಂಕುಗಳ ಸಂಖ್ಯೆಯಲ್ಲಿ ಹಠಾತ್ ಏರಿಕೆ ಮತ್ತು ಆಸ್ಪತ್ರೆಗಳಲ್ಲಿ ಆಮ್ಲಜನಕದ ಹೆಚ್ಚಿನ ಬೇಡಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಖಾಸಗಿ ವಲಯದ ಉದ್ಯಮಗಳು ವೈದ್ಯಕೀಯ ಉದ್ದೇಶಗಳಿಗಾಗಿ ತಮ್ಮ ಆಮ್ಲಜನಕದ ಬೇಡಿಕೆ ಪೂರೈಸಲು ಕೈಗಾರಿಕೆಗಳಿಗೆ ಬಳಸುವ ಆಮ್ಲಜನಕದ ಮೇಲೆ ಅವಲಂಬಿತವಾಗಿವೆ.

ಕೊರೊನಾ ರೋಗಿಗಳಿಗೆ ಆಮ್ಲಜನಕ ಪೂರೈಸುತ್ತಿರುವ ಕೈಗಾರಿಕೆಗಳು

author img

By

Published : Apr 16, 2021, 3:44 PM IST

ಮುಂಬೈ: ಭಾರತವು ಕಳೆದ ವರ್ಷಕ್ಕಿಂತಲೂ ತೀವ್ರವಾಗಿ ಕೋವಿಡ್ -19 ಸೋಂಕಿಗೆ ತುತ್ತಾಗಿರುವುದರಿಂದ, ಹೆಚ್ಚು ಅಗತ್ಯವಿರುವ ಆಮ್ಲಜನಕದ ಪೂರೈಕೆಯೊಂದಿಗೆ ಹೆಣಗಾಡುತ್ತಿದೆ. ಈ ಮಧ್ಯೆ ವರದಿಗಳ ಪ್ರಕಾರ, ಕೋವಿಡ್ -19 ಸೋಂಕುಗಳ ಸಂಖ್ಯೆಯಲ್ಲಿ ಹಠಾತ್ ಏರಿಕೆ ಮತ್ತು ಆಸ್ಪತ್ರೆಗಳಲ್ಲಿ ಆಮ್ಲಜನಕದ ಹೆಚ್ಚಿನ ಬೇಡಿಕೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಖಾಸಗಿ ವಲಯದ ಉದ್ಯಮಗಳು ವೈದ್ಯಕೀಯ ಉದ್ದೇಶಗಳಿಗಾಗಿ ತಮ್ಮ ಆಮ್ಲಜನಕದ ಬೇಡಿಕೆಯನ್ನು ಪೂರೈಸಲು ಕೈಗಾರಿಕೆಗಳಿಗೆ ಬಳಸುವ ಆಮ್ಲಜನಕದ ಮೇಲೆ ಅವಲಂಬಿತವಾಗಿವೆ.

ಮಹಾರಾಷ್ಟ್ರವು ನಿತ್ಯವೂ ಹೆಚ್ಚುವರಿ ವೈದ್ಯಕೀಯ ಆಮ್ಲಜನಕವನ್ನು ಡಾಲ್ವಿ (ಮಹಾರಾಷ್ಟ್ರ) ದ ಜೆಎಸ್​ಡಬ್ಲ್ಯೂ, ಭಿಲೈ (ಛತ್ತೀಸ್‌ಗಢ) ದಲ್ಲಿರುವ ಎಸ್‌ಐಎಲ್ ಮತ್ತು ಬಳ್ಳಾರಿಯ ಜೆಎಸ್‌ಡಬ್ಲ್ಯೂ (ಕರ್ನಾಟಕ) ದಿಂದ ಹೆಚ್ಚುವರಿ ವೈದ್ಯಕೀಯ ಆಮ್ಲಜನಕವನ್ನು ಎತ್ತುವಲ್ಲಿ ಯಶಸ್ವಿಯಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅಂತೆಯೇ, ಮಧ್ಯಪ್ರದೇಶ ತನ್ನ ಆಮ್ಲಜನಕ ಪೂರೈಕೆಯನ್ನು ಛತ್ತೀಸ್‌ಗಢದ ಭಿಲೈ ಸ್ಟೀಲ್ ಸ್ಥಾವರದಿಂದ ಪೂರೈಸಿಕೊಳ್ಳುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಖಾಸಗಿ ವಲಯದ ಪ್ರಮುಖ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಗುಜರಾತ್‌ನ ಜಾಮ್‌ನಗರ ಘಟಕದಿಂದ ಮಹಾರಾಷ್ಟ್ರಕ್ಕೆ ಆಮ್ಲಜನಕವನ್ನು ಪೂರೈಸಲು ಪ್ರಾರಂಭಿಸಿದೆ.

ಮುಖೇಶ್ ಅಂಬಾನಿ ನೇತೃತ್ವದ ಕಂಪನಿಯು ರಾಜ್ಯಕ್ಕೆ ಸುಮಾರು 100 ಮೆಟ್ರಿಕ್ ಟನ್ ಆಮ್ಲಜನಕ ಪೂರೈಸಲಿದೆ ಎಂದು ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಏಕನಾಥ ಶಿಂಧೆ ಟ್ವಿಟ್ಟರ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಿಎಂ-ಕೇರ್ಸ್ ಫಂಡ್ ಅಡಿ 100 ಹೊಸ ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕ ಸ್ಥಾಪನೆ

"ವೈದ್ಯಕೀಯ ಆಮ್ಲಜನಕ ಹೆಚ್ಚುತ್ತಿರುವ ಬೇಡಿಕೆಯ ದೃಷ್ಟಿಯಿಂದ, ಇಜಿ 2 (ಎಂಪವರ್ಡ್ ಗ್ರೂಪ್ 2) 50,000 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕವನ್ನು ಆಮದು ಮಾಡಿಕೊಳ್ಳಲು ಟೆಂಡರ್ ತರಲು ನಿರ್ಧರಿಸಿತು. ಇದಕ್ಕಾಗಿ ಟೆಂಡರ್ ಅಂತಿಮಗೊಳಿಸಲು ಮತ್ತು ವಿದೇಶಾಂಗ ಸಚಿವಾಲಯದ ನಿಯೋಗದಿಂದ ಗುರುತಿಸಲ್ಪಟ್ಟ ಆಮದಿಗಾಗಿ ಮೂಲಗಳನ್ನು ಅನ್ವೇಷಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ನಿರ್ದೇಶಿಸಲಾಗಿದೆ" ಎಂದು ಸರ್ಕಾರ ಗುರುವಾರ ಪ್ರಕಟಿಸಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.