ETV Bharat / bharat

ಪೊಲೀಸ್ ಕ್ವಾರ್ಟರ್ಸ್​​ನಲ್ಲಿ 40 ತೊಲೆ ಚಿನ್ನಾಭರಣ, ಲಕ್ಷಾಂತರ ನಗದು ಕಳವು: ಪರಿಹಾರಕ್ಕಾಗಿ ಬಾಬಾನ ಮೊರೆ ಹೋದ ಎಎಸ್‌ಐ! - ಎಎಸ್‌ಐ ಕೃಷ್ಣ ಕುಮಾರ್

ಹರಿಯಾಣದಲ್ಲಿ ಕಳ್ಳರನ್ನು ಹಿಡಿಯಲು ಬಾಬಾ ಮೊರೆ ಹೋದ ಪೊಲೀಸರು- ಅಚ್ಚರಿಯ ವಿಷಯ ಬಯಲು- ಸೇವೆ, ಭದ್ರತೆ, ಸಹಕಾರ ಎಂಬ ಘೋಷವಾಕ್ಯವನ್ನು ಅಳವಡಿಸಿಕೊಂಡಿರುವ ಪೊಲೀಸರೇ ಈಗ ಅಸಹಾಯಕರೆಂಬ ಚರ್ಚೆ ಜೋರು

theft-in-panipat-police-reached-pandokhar-baba-court-for-knowing-thieves
ಪೊಲೀಸ್ ಕ್ವಾರ್ಟರ್ಸ್​​ನಲ್ಲಿ 40 ತೊಲೆ ಚಿನ್ನಾಭರಣ, ಲಕ್ಷಾಂತರ ನಗದು ಕಳವು: ಪರಿಹಾರಕ್ಕಾಗಿ ಬಾಬಾನ ಮೊರೆ ಹೋದ ಎಎಸ್‌ಐ!
author img

By

Published : Dec 31, 2022, 11:09 PM IST

ಪೊಲೀಸ್ ಕ್ವಾರ್ಟರ್ಸ್​​ನಲ್ಲಿ 40 ತೊಲೆ ಚಿನ್ನಾಭರಣ, ಲಕ್ಷಾಂತರ ನಗದು ಕಳವು: ಪರಿಹಾರಕ್ಕಾಗಿ ಬಾಬಾನ ಮೊರೆ ಹೋದ ಎಎಸ್‌ಐ!

ಪಾಣಿಪತ್ (ಹರಿಯಾಣ): ಕಾನೂನು ಸುವ್ಯವಸ್ಥೆಯನ್ನು ಶಿಸ್ತುನಿಂದ ಪೊಲೀಸರು ಪಾಲನೆ ಮಾಡುತ್ತಾರೆ. ಪೊಲೀಸರಿದ್ದರೆ ಯಾವುದೇ ಅಪರಾಧಗಳು ನಡೆಯಲು ಸಾಧ್ಯವಾಗಲ್ಲ. ಆರೋಪಿಗಳನ್ನು ಹೆಡೆಮುರಿ ಕಟ್ಟಿ ನಮಗೆ ತಕ್ಷಣೆ ನೀಡುತ್ತಾರೆ ಎಂಬ ಭಾವನೆ ಸಾರ್ವಜನಿಕರಲ್ಲಿದೆ. ಸಾಕಷ್ಟು ಪೊಲೀಸರು ತಮ್ಮ ದಕ್ಷತೆಯಿಂದ ಜನರಲ್ಲಿ ವಿಶ್ವಾಸವನ್ನೂ ಗಳಿಸಿದ್ದಾರೆ. ಆದರೆ, ಅದೇ ಪೊಲೀಸರು ಕಳ್ಳರನ್ನು ಹಿಡಿಯಲು ಬಾಬಾಗಳ ಸಹಾಯ ಪಡೆಯತೊಡಗಿದರೆ ಜನಸಾಮಾನ್ಯರ ಗತಿಯೇನು?.

ಇಂತಹದ್ದೊಂದು ಪ್ರಶ್ನೆ ಹುಟ್ಟಲು ಹರಿಯಾಣದ ಪೊಲೀಸ್​ ಅಧಿಕಾರಿಯೊಬ್ಬರ ನಡೆಯೇ ಕಾರಣವಾಗಿದೆ. ಪೊಲೀಸ್​ ವಸತಿ ಗೃಹದಲ್ಲಿ ಇಬ್ಬರು ಪೊಲೀಸರ ಮನೆಯಲ್ಲಿ ಕಳ್ಳತನವಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಇದರಲ್ಲಿ ಸಹಾಯಕ ಸಬ್​ ಇನ್ಸ್​ಪೆಕ್ಟರ್​ (ಎಎಸ್‌ಐ) ಆಗಿರುವ ಕೃಷ್ಣ ಕುಮಾರ್ ಮನೆಯಲ್ಲೂ ಅಪಾರ ಪ್ರಮಾಣದ ಸ್ವತ್ತುಗಳು ಕಳವು ಆಗಿದೆ.

ಬಾಬಾನ ಮೊರೆ ಹೋದ ಎಎಸ್ಐ: ಇಲ್ಲಿನ ಚಾಂದಿನಿಬಾಗ್ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕೃಷ್ಣ ಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಮನೆಯಲ್ಲಿ ನಡೆದ ಕಳ್ಳತನ ಆರೋಪಿಗಳನ್ನು ಪತ್ತೆ ಹಚ್ಚಲು ಓರ್ವ ಪೊಲೀಸ್​ ಅಧಿಕಾರಿಯಾಗಿ ಎಲ್ಲ ರೀತಿಯ ಕ್ರಮಕೈಗೊಳ್ಳಲು ಅವಕಾಶವಾಗಿದೆ. ತೀವ್ರವಾದ ಶೋಧ ಕಾರ್ಯ ನಡೆಸಿ ಆರೋಪಿಗಳನ್ನು ಸೆರೆ ಹಿಡಿಯಬಹುದು. ಆದರೆ, ಖದೀಮರ ಸುಳಿವು ಪಡೆಯಲು ಎಎಸ್​ಐ, ಸಮೀಪದ ಪಾಂಡೋಖರ್ ಬಾಬಾನ ಮೊರೆ ಹೋಗಿ ಅಚ್ಚರಿಗೆ ಕಾರಣವಾಗಿದ್ದಾರೆ. ಅಲ್ಲದೇ, ಬಾಬಾನ ಮುಂದೆ ಕುಳಿತು ಪರಿಹಾರ ಕೇಳುತ್ತಿರುವ ವಿಡಿಯೋ ಸಾಕಷ್ಟು ಸದ್ದು ಸಹ ಮಾಡುತ್ತಿದೆ.

ಕಳ್ಳತನದ ಬಗ್ಗೆ ಬಾಬಾ ಹೇಳಿದ್ದೇನು?: ಪಾಂಡೋಖರ್ ಬಾಬಾ ಬಳಿಗೆ ಎಎಸ್​ಐ ಕೃಷ್ಣ ಕುಮಾರ್ ಬಂದು ಕಳ್ಳತನದ ಬಗ್ಗೆ ವಿವರಿಸಿದ್ದಾರೆ. ಆಗ ಪಾಂಡೋಖರ್ ಬಾಬಾ ಕಳ್ಳತನದ ಸುಳಿವು ನಿಮ್ಮ ಕ್ವಾರ್ಟರ್ಸ್​​ನಲ್ಲೇ ಅಡಗಿದೆ ಎಂದು ಹೇಳಿದ್ದಾರೆ. ಅಲ್ಲದೇ, ಪಂಜಾಬ್ ಗಡಿಯಲ್ಲಿ ಅಪರಾಧಿಗಳು ಅಡಗಿದ್ದಾರೆ. ಶೀಘ್ರದಲ್ಲೇ ಇಬ್ಬ, ಇಲ್ಲವೇ ಮೂವರು ಆರೋಪಿಗಳು ಸಿಕ್ಕಿಬೀಳುತ್ತಾರೆ ಎಂದೂ ಬಾಬಾ ಎಎಸ್​ಐಗೆ ತಿಳಿಸಿದ್ದಾರೆ.

ಆದರೆ, ಇದೇ ವೇಳೆ ಕದ್ದ ಮಾಲು ಸಿಗುತ್ತದೆಯೋ, ಇಲ್ಲವೋ ಎಂಬುದಕ್ಕೆ ಯಾವ ಗ್ಯಾರಂಟಿ ಇಲ್ಲ ಎಂದು ಪಾಂಡೋಖರ್ ಬಾಬಾ ಹೇಳಿದ್ದಾರೆ. ಅಷ್ಟೇ ಅಲ್ಲ, ಮತ್ತೊಮ್ಮೆ ಪೊಲೀಸ್​ ಅಧಿಕಾರಿ ಕಳ್ಳರ ಸಂಖ್ಯೆಯನ್ನು ಬಾಬಾ ಬಳಿ ಕೇಳಿದ್ದಾರೆ. ಇದಕ್ಕೆ ಬಾಬಾ ಉತ್ತರಿಸುತ್ತಾ, ಯಾರಿಗೆ ಗೊತ್ತು?. ಅವನು ಕೊಲೆಯಾಗಿರಬಹುದು ಎಂದಿದ್ದಾರೆ. ಜೊತೆಗೆ, ಆಮೇಲೆ ನೀವು ನನ್ನನ್ನೇ ದೂರುತ್ತೀರಿ ಎಂದು ಬಾಬಾ ಹೇಳಿಕೆ ಕೊಟ್ಟಿದ್ದಾರೆ.

ಕಳ್ಳತನ ಪ್ರಕರಣದ ಹಿನ್ನೆಲೆ: ಕಳೆದ ಕೆಲ ದಿನಗಳ ಹಿಂದೆ ಎಂದರೆ ಡಿಸೆಂಬರ್ 23ರಂದು ರಾತ್ರಿ ಚಾಂದಿನಿಬಾಗ್‌ನಲ್ಲಿರುವ ಪೊಲೀಸ್​ ವಸತಿ ಗೃಹದಲ್ಲಿ ಇಬ್ಬರು ಪೊಲೀಸರ ಮನೆಗೆ ಖದೀಮರು ಕನ್ನ ಹಾಕಿದ್ದರು. ಎಎಸ್‌ಐ ಕೃಷ್ಣ ಕುಮಾರ್ ಮನೆಯಲ್ಲಿ 40 ತೊಲೆ ಚಿನ್ನಾಭರಣ ಮತ್ತು 3.75 ಲಕ್ಷ ರೂ. ನಗದು ಕಳ್ಳತನವಾಗಿದೆ ಎನ್ನಲಾಗಿದೆ.

ಮೂಲತಃ ಜಿಂದ್‌ ಜಿಲ್ಲೆಯ ಸಿವಾಹ್ ಗ್ರಾಮದ ನಿವಾಸಿ ಎಎಸ್‌ಐ ಕೃಷ್ಣ ಕುಮಾರ್ ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಪೊಲೀಸ್ ಕ್ವಾರ್ಟರ್ಸ್​​ನಲ್ಲೇ ವಾಸಿಸುತ್ತಿದ್ದಾರೆ. ಮನೆಯಲ್ಲಿ ಕಳ್ಳತನವಾಗಿರುವ ಮಾಹಿತಿ ಪಡೆದು ಎಎಸ್ಐ, ತಮ್ಮ​ ಮನೆಗೆ ಬಂದಾಗ ಮುಖ್ಯ ಬಾಗಿಲಿನ ಬೀಗ ತೆರೆದಿತ್ತು. ಒಳಗಿನ ಕೊಠಡಿಯ ಬೀಗವನ್ನೂ ಒಡೆದು, ಬೀರುವಿನಲ್ಲಿದ್ದ ವಸ್ತುಗಳು, ಬಟ್ಟೆಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಪತ್ತೆಯಾಗಿತ್ತು. ನಂತರ ಈ ಬಗ್ಗೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಎಷ್ಟೊಂದು ಸ್ವತ್ತು ಕಳ್ಳತನ?: ಮನೆಯಲ್ಲಿ ಪರಿಶೀಲಿಸಿದಾಗ ಬೀರುವಿನಲ್ಲಿದ್ದ 3.75 ಲಕ್ಷ ರೂಪಾಯಿ ನಗದು, ಲಾಕೆಟ್ ಸೇರಿದಂತೆ 10 ತೊಲೆ ಚಿನ್ನದ ಸರ, 15 ತೊಲೆ ತೂಕದ 3 ಬಳೆಗಳು, 3 ತೊಲೆ ತೂಕದ ಸರ, 3 ತೊಲೆ ತೂಕದ ಮಂಗಳಸೂತ್ರ ನಾಪತ್ತೆಯಾಗಿದೆ. ಅಲ್ಲದೇ, 1 ತೊಲೆ ತೂಕದ ಮಗುವಿನ ಚಿನ್ನದ ಸರ, 1 ತೊಲೆ ತೂಕದ ಗಲ್ಸಾರಿ, 8 ತೊಲೆ ತೂಕದ 12 ಚಿನ್ನದ ಉಂಗುರಗಳು, 2 ತೊಲೆ ತೂಕದ 1 ಚೈನ್ ಲಾಕೆಟ್ ಮತ್ತು 4 ತೊಲೆ ತೂಕದ 5 ಜೊತೆ ಕಿವಿಯೋಲೆಗಳು ಮತ್ತು ಸುಮಾರು 1 ಕೆಜಿ ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ಎಎಸ್‌ಐ ಕೃಷ್ಣ ಕುಮಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್​ ಠಾಣೆಯಿಂದ 100 ಮೀ​ಟರ್ ದೂರದಲ್ಲಿದ್ದ ಸಂಸದರ ಮನೆಯಲ್ಲಿ ಕಳ್ಳರ ಕೈಚಳಕ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.