ETV Bharat / bharat

ತಬ್ಬಲಿ - ಮಾನಸಿಕ ಅಸ್ವಸ್ಥ ಯುವತಿ ಮೇಲೆ ದೊಡ್ಡಪ್ಪ, ಪೊಲೀಸ್​ ಪೇದೆಯಿಂದ ರೇಪ್​: ಈಗ ತುಂಬು ಗರ್ಭಿಣಿ!

author img

By

Published : Apr 29, 2022, 1:11 PM IST

Updated : Apr 29, 2022, 1:18 PM IST

ಮಾನಸಿಕ ಅಸ್ವಸ್ಥ ಯುವತಿ ಮೇಲೆ ದೊಡ್ಡಪ್ಪ ಮತ್ತು ಓರ್ವ ಪೊಲೀಸ್​ ಕಾನ್​ಸ್ಟೇಬಲ್​​ ಅತ್ಯಾಚಾರ ಎಸೆಗಿದ್ದು, ಅವರೀಗ ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದಾಳೆ.

ಯುವತಿ ಮೇಲೆ ದೊಡ್ಡಪ್ಪ, ಪೊಲೀಸ್​ ಪೇದೆಯಿಂದ ಅತ್ಯಾಚಾರ

ನಿಜಾಮಾಬಾದ್(ತೆಲಂಗಾಣ): ನೆರೆಯ ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಅಮಾನವೀಯ ಘಟನೆಯೊಂದು ನಡೆದಿದೆ. ತಂದೆ - ತಾಯಿ ಇಲ್ಲದ ತಬ್ಬಲಿ ಯುವತಿ ಮೇಲೆ ಆಕೆಯ ದೊಡ್ಡಪ್ಪ ಮತ್ತು ಓರ್ವ ಪೊಲೀಸ್​ ಕಾನ್​​ಸ್ಟೇಬಲ್​ ಬಲತ್ಕಾರ ಎಸಗಿದ್ದು, ಸದ್ಯ ಆ ಯುವತಿ ಎಂಟು ತಿಂಗಳು ಗರ್ಭಿಣಿಯಾಗಿದ್ದಾಳೆ. ಅದರಲ್ಲೂ ಸಂತ್ರಸ್ತೆ ಮಾನಸಿಕ ಅಸ್ವಸ್ಥಗಳಾಗಿದ್ದು, ತನೊಂದಿಗೆ ಏನು ನಡೆದಿದೆ ಎಂಬ ಪ್ರಜ್ಞೆಯೂ ಆಕೆಗೆ ಇಲ್ಲ!.

ಎಂಟು ವರ್ಷಗಳ ಹಿಂದೆ ತಾಯಿ ಮತ್ತು ತಂದೆ ಇಬ್ಬರನ್ನೂ ಕಳೆದುಕೊಂಡಿದ್ದ ಇಬ್ಬರು ಬಾಲಕಿಯರು ತಮ್ಮ ದೊಡ್ಡಪ್ಪ ಮತ್ತು ದೊಡ್ಡಮ್ಮನ ಪಾಲನೆಯಲ್ಲಿ ಇದ್ದರು. ಆದರೆ, ದೊಡ್ಡಮ್ಮ ಹಣಕ್ಕಾಗಿ ಹಿರಿಯ ಬಾಲಕಿಯನ್ನು ಕಾನ್​ಸ್ಟೇಬಲ್​​ ಆದ ಚಂದ್ರಕಾಂತ್​ ಎಂಬಾತನ ಬಳಿ ಬಿಟ್ಟಿದ್ದಳು. ಪ್ರಸ್ತುತ 22 ವರ್ಷದ ಆ ಯುವತಿ ಮಾನಸಿಕ ಅಸ್ವಸ್ಥಗಳಾಗಿದ್ದು, ಆಕೆ ಮೇಲೆ ಕಾನ್​ಸ್ಟೇಬಲ್​​ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ.

ಅಲ್ಲದೇ, ಈ ಕೃತ್ಯ ಬೆಳಕಿಗೆ ಬಾರದಂತೆ ನೋಡಿಕೊಳ್ಳಲು ದೊಡ್ಡಪ್ಪ ಮತ್ತು ದೊಡ್ಡಮ್ಮ ಇಬ್ಬರೂ ಸೇರಿಕೊಂಡು ಬಾಲಕಿಯನ್ನು ಮನೆಯಲ್ಲಿ ಕೂಡಿ ಹಾಕಿದ್ದರು. ಆದರೆ, ಸಂತ್ರಸ್ತೆಯ ತಂಗಿ ತನ್ನ ಅಕ್ಕನ ಪರಿಸ್ಥಿತಿಯ ಬಗ್ಗೆ ಅಕ್ಕ - ಪಕ್ಕದವರಿಗೆ ಮಾಹಿತಿ ನೀಡಿದ್ದಾಳೆ. ಇದರಿಂದ ಇದೀಗ ಈ ದುಷ್ಕೃತ್ಯ ಬಯಲಿಗೆ ಬಂದಿದೆ.

ದೊಡ್ಡಪ್ಪನಿಂದಲೂ ನೀಚ ಕೃತ್ಯ: ಯುವತಿಯು ಎಂಟು ತಿಂಗಳ ಗರ್ಭಿಣಿಯಾದ ವಿಷಯ ತಿಳಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಅಂತೆಯೇ ಪೊಲೀಸರು ತನಿಖೆ ನಡೆಸಿದಾಗ 61 ವರ್ಷದ ದೊಡ್ಡಪ್ಪ ಕೂಡ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ತನ್ನ ಪತ್ನಿ ಮನೆಯಲ್ಲಿ ಇರದೇ ಇದ್ದ ಸಂದರ್ಭದಲ್ಲಿ ಈತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಪೊಲೀಸ್​ ತನಿಖೆಯಲ್ಲಿ ತಿಳಿದು ಬಂದಿದೆ.

ಆರೋಪಿ ಕಾನ್​ಸ್ಟೇಬಲ್ ಅಮಾನತು: ಇತ್ತ, ಈ ಪ್ರಕರಣದಲ್ಲಿ ಭಾಗಿಯಾದ 56 ವರ್ಷದ ಪೊಲೀಸ್​ ಕಾನ್​ಸ್ಟೇಬಲ್​​ ಚಂದ್ರಕಾಂತ್​ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆರೋಪಿಯನ್ನು ಪೊಲೀಸ್​ ಸೇವೆಯಿಂದ ಅಮಾನತುಗೊಳಿಸಿ ಗುರುವಾರ ಆದೇಶಿಸಲಾಗಿದೆ. ಇನ್ನು ಸಂತ್ರಸ್ತ ಬಾಲಕಿಯನ್ನು ಸಖಿ ಕೇರ್​ ಸೆಂಟರ್​ಗೆ ಸ್ಥಳಂತರಿಸಲಾಗಿದೆ.

ಇದನ್ನೂ ಓದಿ: ಅನಧಿಕೃತ ಚಿನ್ನದ ಗಣಿಯಲ್ಲಿ ಕುಸಿತ: 12 ಮಹಿಳೆಯರ ದುರ್ಮರಣ

Last Updated : Apr 29, 2022, 1:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.