ತೇಜಪುರ್: ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆ ಮತ್ತು ಬೌದ್ಧ ನಗರ ತವಾಂಗ್ ಜಿಲ್ಲೆಗಳಲ್ಲಿನ ಎತ್ತರದ ಸುರಂಗಗಳಲ್ಲಿ ಒಂದಾದ ಸೆಲಾ ಸುರಂಗವು ಮುಕ್ತಾಯದ ಹಂತದಲ್ಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಇಲ್ಲಿಗೆ ಭೇಟಿ ನೀಡಲಿದ್ದಾರೆ. ಈ ಸುರಂಗವು ಸಮುದ್ರ ಮಟ್ಟದಿಂದ 13,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ವಿಶ್ವದ ಮೊದಲ ದ್ವಿಪಥ ರಸ್ತೆ ಸುರಂಗವಾಗಿದೆ.
ಈ ಸುರಂಗವು ಒಟ್ಟು 11.204 ಕಿಮೀ ಉದ್ದವಾಗಿದ್ದು, 9.220 ಕಿಮೀ ಪಾದಚಾರಿ ಮಾರ್ಗವನ್ನು ಹೊಂದಿದೆ. ದಿರಾಂಗ್ ಅನ್ನು ಪಶ್ಚಿಮ ಅರುಣಾಚಲ ಪ್ರದೇಶದ ತವಾಂಗ್‌ಗೆ ಇದು ಸಂಪರ್ಕಿಸುತ್ತದೆ, ಸೆಲಾ ಪಾಸ್‌ನ ಸಂಪೂರ್ಣ ಹಿಮದಿಂದ ಆವೃತವಾದ ಪರ್ವತ ಶ್ರೇಣಿ ದಾಟಿ 9.220 ಕಿಮೀ ದಾಟಿ ಇಂಡೋ-ಚೀನಾ ಗಡಿಯನ್ನು ತಲುಪುತ್ತದೆ.
ಎರಡು ಸುರಂಗಗಳಲ್ಲಿ ಒಂದು ಟ್ಯೂಬ್‌ನ 8.8 ಕಿಮೀ ಉದ್ದದ ಜೊತೆಗೆ, ಎರಡು ಟ್ಯೂಬ್‌ಗಳನ್ನು ಸಂಪರ್ಕಿಸಿದೆ, 1,555 ಮೀಟರ್ ಡಬಲ್-ಸೈಡೆಡ್ ಟ್ಯೂಬ್ ಮತ್ತು 90 ಮೀಟರ್ ಔಟ್-ಆಫ್-ಟ್ಯೂಬ್ ಕನೆಕ್ಟಿಂಗ್ ಸೆಲ್ ಟನಲ್ ಸುರಂಗದಲ್ಲಿ ಅತ್ಯಾಧುನಿಕ ಬೆಳಕಿನ ಸಿಸಿಟಿವಿ ಕ್ಯಾಮೆರಾಗಳು ಮತ್ತು ನಿರ್ಗಮನ ಬಾಗಿಲುಗಳು ಇರಲಿವೆ. ನಿರ್ಗಮನ ದ್ವಾರಗಳನ್ನು ಗಡಿ ರಸ್ತೆಗಳ ಸಂಸ್ಥೆಯ ಉಸ್ತುವಾರಿ ಅಧಿಕಾರಿಯು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಯಾವುದೇ ಸಮಯದಲ್ಲಿ ಸಂಭವಿಸಬಹುದಾದ ಯಾವುದೇ ಘಟನೆಗಳ ಬಗ್ಗೆ ತೀವ್ರ ನಿಗಾ ಇಡಲಾಗುತ್ತದೆ.
ಜನವರಿಯಲ್ಲಿ ಸೇನಾ ದಿನದಂದು ತನ್ನ ಭೇಟಿಯ ಸಂದರ್ಭದಲ್ಲಿ DGBR ಎಸ್ಕೇಪ್ ಟ್ಯೂಬ್‌ನ ಮೊದಲ ಸ್ಫೋಟ ಪ್ರಾರಂಭಿಸಿತು, ಸುರಂಗವು ಈಗಾಗಲೇ ಸಂಪೂರ್ಣ ಅಗೆತವನ್ನು ಮುಗಿಸಿದೆ. ಬಲಿಪರಾ-ಚಾರ್ದ್ವಾರ್-ತವಾಂಗ್ ರಸ್ತೆಯ ಮೂಲಕ ಅರುಣಾಚಲ ಪ್ರದೇಶದ ತವಾಂಗ್‌ಗೆ ಎಲ್ಲಾ ಹವಾಮಾನಗಳಲ್ಲೂ ಸಂಪರ್ಕ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 9, 2019 ರಂದು ಸೆಲಾ ಸುರಂಗದ ಶಂಕುಸ್ಥಾಪನೆ ಮಾಡಿದ್ದರು.
ಸುರಂಗದ ನಿರ್ಮಾಣವು ಏಪ್ರಿಲ್ 1, 2019 ರಂದು ಪ್ರಾರಂಭವಾಯಿತು ಮತ್ತು ಅಕ್ಟೋಬರ್ 31 ರಂದು ಮೊದಲ ಬಾರಿಗೆ ಸ್ಫೋಟ ಮಾಡಲಾಗಿತ್ತು. ಸೆಲಾ ಸುರಂಗದ ನಿರ್ಮಾಣ ಕಾಮಗಾರಿಯು ಪ್ರಸ್ತುತ ನಡೆಯುತ್ತಿದೆ. 1,555 ಮೀಟರ್ ಸುರಂಗದ ಎಸ್ಕೇಪ್ ಟ್ಯೂಬ್‌ನ ಅಂತಿಮ ಬ್ಲಾಸ್ಟಿಂಗ್ ಅನ್ನು ಸಹ ಪೂರ್ಣಗೊಳಿಸಲಾಗಿದೆ. ಈ ಕೆಲಸ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣವಾಗುತ್ತಿದೆ. COVID-19 ಮತ್ತು ಪ್ರತಿಕೂಲ ಹವಾಮಾನಗಳ ಹೊರತಾಗಿಯೂ ಕಳೆದ 6-10 ತಿಂಗಳುಗಳಲ್ಲಿ ಕೆಲಸದ ವೇಗವು ಗಮನಾರ್ಹವಾಗಿ ಹೆಚ್ಚಾಗಿದೆ.
ಆದರೆ, ಈ ವರ್ಷ ಜನವರಿಯಿಂದ ಪಶ್ಚಿಮ ಅರುಣಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ ಹಾಗೂ ನಂತರದ ಭಾರಿ ಮಳೆಯಿಂದಾಗಿ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಸಂಪರ್ಕ ರಸ್ತೆಯು ಇದೇ ಅಕ್ಟೋಬರ್ ಬದಲಿಗೆ ಏಪ್ರಿಲ್ 2023 ರಲ್ಲಿ ಪೂರ್ಣಗೊಳ್ಳಲಿದೆ.
ಒಮ್ಮೆ ಪೂರ್ಣಗೊಂಡ ನಂತರ ಸೆಲಾ ಸುರಂಗವು 13,000 ಅಡಿಗಳಷ್ಟು ಎತ್ತರದಲ್ಲಿ ವಿಶ್ವದ ಅತಿ ಉದ್ದದ ಎರಡು - ಪಥದ ರಸ್ತೆ ಸುರಂಗವಾಗಲಿದೆ, ಇತ್ತೀಚಿನ ಹೊಸ ಆಸ್ಟ್ರಿಯನ್ ಸುರಂಗ ಮಾರ್ಗ (N A T M ) ತಂತ್ರಜ್ಞಾನ ಬಳಸಿ ಇದನ್ನು ನಿರ್ಮಿಸಲಾಗಿದೆ. ಇದು ಅರುಣಾಚಲ ಪ್ರದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದಲ್ಲದೇ, ನೈಸರ್ಗಿಕ ವಿಕೋಪಗಳು ಮತ್ತು ಈಶಾನ್ಯದಾದ್ಯಂತ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಸಂದರ್ಭದಲ್ಲಿ ಸಿಬ್ಬಂದಿಗಳ ಸ್ಥಳಾಂತರಕ್ಕೆ ಪ್ರಮುಖ ಕೊಂಡಿಯಾಗಲಿದೆ. ವಿಶೇಷವಾಗಿ ವಿವಿಧ ಭದ್ರತಾ ಪಡೆಗಳಿಗೆ ಮತ್ತು ಗಡಿಯಲ್ಲಿ ನಿಯೋಜಿಸಲಾದ ಭಾರತೀಯ ಸೇನೆಗೆ ತುಂಬಾ ಅನುಕೂಲಕರವಾಗಲಿದೆ ಸೆಲಾ ಸುರಂಗ.
ಇದನ್ನು ಓದಿ: ಗೃಹಬಂಧನ ವದಂತಿ ಮಧ್ಯೆಯೇ ಸಾರ್ವಜನಿಕವಾಗಿ ಕಾಣಿಸಿಕೊಂಡ ಚೀನಾ ಅಧ್ಯಕ್ಷ