ಟಿಕಮ್‌ಗಢ್(ಮಧ್ಯಪ್ರದೇಶ): ತಮಿಳುನಾಡು, ಪಂಜಾಬ್ನಲ್ಲಿ ಅತ್ಯಾಕರ್ಷಕ ಗೋಲ್ಡನ್ ಟೆಂಪಲ್ಗಳಿವೆ. ಆದ್ರೆ ಪ್ರಪಂಚದಲ್ಲೇ ಬೆಳ್ಳಿ ನಿರ್ಮಿತ ದೇವಾಲಯ ಎಲ್ಲೂ ಇಲ್ಲ. ಈಗ ಪ್ರಪಂಚದಲ್ಲೇ ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ಜೈನ ರಜತ ಮಂದಿರ ನಿರ್ಮಾಣವಾಗುತ್ತಿದೆ.
200 ಕೋಟಿ ರೂ ವೆಚ್ಚ
ಈ ದೇವಾಲಯದ ನಿರ್ಮಾಣ ಕಾರ್ಯಗಳು ಟಿಕಮ್‌ಗಢ್ ಜಿಲ್ಲಾ ಕೇಂದ್ರ ಕಚೇರಿಯಿಂದ 45 ಕಿ.ಮೀ ದೂರದಲ್ಲಿರುವ ಬಂಧದಲ್ಲಿ ನಡೆಯುತ್ತಿದೆ. ಇದು ಜೈನ ಮುನಿ ಆಚಾರ್ಯ ವಿದ್ಯಾಸಾಗರ್ ಮಹಾರಾಜ್ ಅವರ ಪರಿಕಲ್ಪನೆಯಾಗಿದೆ. ಈ ಜೈನ ದೇಗುಲಕ್ಕೆ ಅಡಿಪಾಯ ಹಾಕುವ ಕಾರ್ಯ ನವೆಂಬರ್ 18, 2018 ರಂದು ನಡೆದಿದ್ದು, ಮಂದಿರಕ್ಕೆ 200 ಕೋಟಿ ರೂಪಾಯಿ ವೆಚ್ಚವಾಗಲಿದೆ. ಜೈಸಲ್ಮೇರ್‌ನಿಂದ ಬಹು ಬೇಡಿಕೆಯ ಹಳದಿ ಅಮೃತಶಿಲೆಯಿಂದ ಈ ದೇಗುಲದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಐದು ವರ್ಷಗಳಲ್ಲಿ ದೇವಾಲಯ ಸಿದ್ಧ:
ಬೆಳ್ಳಿಯಲ್ಲಿ ತೀರ್ಥಂಕರ ಮೂರ್ತಿಗಳ ನಿಮಾಣ
25 ಇಂಚು ಎತ್ತರ ಮತ್ತು 2-2 ಕ್ವಿಂಟಲ್ ಬೆಳ್ಳಿ ಲೋಹದಲ್ಲಿ ಸಿದ್ಧಗೊಳ್ಳುವ 24 ತೀರ್ಥಂಕರರ ಪ್ರತಿಮೆಗಳನ್ನು ಈ ದೇವಾಲಯದಲ್ಲಿ ಇರಿಸಲಾಗುತ್ತೆ. ಪ್ರಸ್ತುತ ಬೆಲೆಯ ಪ್ರಕಾರ, ಈ ಪ್ರತಿಮೆಯ ಒಟ್ಟಾರೆ ಮೌಲ್ಯವು ಸುಮಾರು 1 ಕೋಟಿ 32 ಲಕ್ಷ ರೂಪಾಯಿ ಆಗುತ್ತದೆ.
ಈ ಬಗ್ಗೆ ಮಂದಿರ ಸ್ಥಾಪನಾ ಸಮಿತಿ ಸದಸ್ಯ ಪ್ರದೀಪ್ ಜೈನ್ ಮಾತನಾಡಿ, ಬೆಳ್ಳಿ ದೇವಾಲಯದ ನಕ್ಷೆಯನ್ನು ಅಹಮದಾಬಾದ್ ವಾಸ್ತುಶಿಲ್ಪಿ ವಿಪುಲ್ ಮಾಡಿದ್ದಾರೆ. ದೇವಾಲಯದ ಮುಂಭಾಗದಲ್ಲಿ ಸಹಸ್ರ ಕೂಟ ಜಿನಾಲಯ ನಿರ್ಮಾಣವೂ ನಡೆಯಲಿದೆ. ಇದರಲ್ಲಿ 1008 ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ದೇವಾಲಯವು ಐದು ವರ್ಷಗಳಲ್ಲಿ ಸಿದ್ಧವಾಗಲಿದೆ ಎಂದರು.
ಆಚಾರ್ಯ ವಿದ್ಯಾಸಾಗರ್ ಪರಿಕಲ್ಪನೆ
ಸಮಿತಿಯ ಮತ್ತೋರ್ವ ಅಧ್ಯಕ್ಷ ಮುರಳಿ ಮನೋಹರ್ ಜೈನ್ ಮಾತನಾಡಿ, ದೇವರು ನನ್ನನ್ನು ಇಲ್ಲಿ ನಿಲ್ಲಿಸುತ್ತಿದ್ದಾನೆ ಎಂದು ನಾನು ಭಾವಿಸಿದ್ದೇನೆ ಎಂದು ಆಚಾರ್ಯ ಶ್ರೀಯವರು ಪ್ರವಚನದಲ್ಲಿ ಹೇಳಿದ್ದರು. ಅದೇ ಸಮಯದಲ್ಲಿ, ಅವರ ಮನಸ್ಸಿನಲ್ಲಿ ಒಂದು ವಿಶೇಷವಾದ ಆಲೋಚನೆ ಹುಟ್ಟಿತು ಎಂದು ಹೇಳಿದರು.