ETV Bharat / bharat

ತಡರಾತ್ರಿ ಗುಜರಾತ್ ಪ್ರವೇಶಿಸಿದ ತೌಕ್ತೆ: ಕರಾವಳಿ ದಾಟಿ ದುರ್ಬಲಗೊಂಡ ದೈತ್ಯ ಚಂಡಮಾರುತ

ಹವಾಮಾನ ಇಲಾಖೆಯ ಪ್ರಕಾರ, ಚಂಡಮಾರುತದ ಸಂಪೂರ್ಣ ದೃಷ್ಟಿ ಕರಾವಳಿಯನ್ನು ದಾಟಿ ಭೂಪ್ರದೇಶದ ಮೇಲಿದೆ. ಪರಿಣಾಮ, ಮುಂದಿನ 3 ಗಂಟೆಗಳಲ್ಲಿ ಇದರ ತೀವ್ರತೆ ದುರ್ಬಲಗೊಳ್ಳುವ ನಿರೀಕ್ಷೆಯಿದೆ.

Cyclone TAUKTAE
ಕರಾವಳಿ ದಾಟಿ ದುರ್ಬಲಗೊಂಡ ದೈತ್ಯ ಚಂಡಮಾರುತ
author img

By

Published : May 18, 2021, 9:13 AM IST

Updated : May 18, 2021, 10:12 AM IST

ನವದೆಹಲಿ: ತೌಕ್ತೆಯ ಅಬ್ಬರ ಕ್ಷೀಣಿಸುತ್ತಿದೆ. ಮಂಗಳವಾರ ಮುಂಜಾನೆ ಚಂಡಮಾರುತ ಗುಜರಾತ್ ಕರಾವಳಿಯಿಂದ ದೇಶದ ಉತ್ತರದೆಡೆಗೆ ಸಾಗಿ ದುರ್ಬಲ ಪ್ರವೃತ್ತಿ ತೋರಿಸುತ್ತಿದೆ. ಚಂಡಮಾರುತದ ಸಂಪೂರ್ಣ ದೃಷ್ಟಿ ಕರಾವಳಿಯನ್ನು ದಾಟಿ ಭೂಪ್ರದೇಶದ ಮೇಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

  • VERY SEVERE CYCLONIC STORM ‘TAUKTAE’ WOULD MOVE NORTH-NORTHEAST WARDS AND WEAKEN GRADUALLY INTO A CYCLONIC STORM DURING NEXT 03 HOURS.

    — India Meteorological Department (@Indiametdept) May 18, 2021 " class="align-text-top noRightClick twitterSection" data=" ">

ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ, ತಮಿಳುನಾಡು ಮತ್ತು ಗುಜರಾತ್‌ ಕರಾವಳಿ ಪ್ರದೇಶಗಳಲ್ಲಿ ಗಾಳಿಸಹಿತ ಭಾರಿ ಮಳೆಯಾಗಿದೆ. ಹಲವೆಡೆ ಕಡಲ್ಕೊರೆತ ಉಂಟಾಗಿದ್ದು, ತೀರ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.

  • THE VERY SEVERE CYCLONIC STORM ‘TAUKTAE’ MOVED NORTH-NORTHEAST WARDS WITH A SPEED OF 10 KMPH DURING PAST 06 HOURS.

ತಡರಾತ್ರಿ ಗುಜರಾತ್ ಪ್ರವೇಶಿಸಿದ ತೌಕ್ತೆ:

ತಡರಾತ್ರಿ ತೌಕ್ತೆ ಚಂಡಮಾರುತವು ಗುಜರಾತ್ ಪ್ರವೇಶಿಸಿದ್ದು, ಸೌರಾಷ್ಟ್ರದ ಉನಾ ಹಾಗೂ ದಿಯು ನಡುವಿನ ಕರಾವಳಿಯಿಂದ ಹಾದು ಹೋಗಿದೆ. ಈ ವೇಳೆ ಗಂಟೆಗೆ 120 ರಿಂದ 150 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ. ಧಾರಾಕಾರ ಮಳೆಯೂ ಆಗಿದೆ. ಈ ಸಂದರ್ಭದಲ್ಲಿ ಉನಾ ನಗರದಲ್ಲಿ 200ಕ್ಕೂ ಹೆಚ್ಚು ಮರಗಳು, ವಿದ್ಯುತ್​ ಕಂಬಗಳು ಹಾಗು ಮೊಬೈಲ್ ಟವರ್​​ಗಳು ಧರೆಗುರುಳಿವೆ. ದಿಯು ಸಮೀಪದ ಸೌರಾಷ್ಟ್ರದ ಉನಾ ಪಟ್ಟಣದಲ್ಲಿ ಮಳೆ ಮತ್ತು ಗಾಳಿ ಬೀಸುತ್ತಿದೆ. ಗುಜರಾತ್‌ನ ಅಮ್ರೆಲಿಯಲ್ಲಿ ಬಲವಾದ ಗಾಳಿ ಮತ್ತು ಮಳೆ ಮುಂದುವರೆದಿದೆ.

ತಡರಾತ್ರಿ ಗುಜರಾತ್ ಪ್ರವೇಶಿಸಿದ ತೌಕ್ತೆ

ಸಮುದ್ರದಲ್ಲಿ ಉಬ್ಬರವಿಳಿತದ ಅಲೆಗಳು ಮತ್ತು ಪ್ರವಾಹದ ಬಗ್ಗೆ ಭಾರತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ನಂತರ ಗುಜರಾತ್ ಸರ್ಕಾರ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿತು. ದಕ್ಷಿಣ ಜಿಲ್ಲೆಗಳಾದ ಸೌರಾಷ್ಟ್ರ ಮತ್ತು ದಿಯುಗಳಲ್ಲಿ ಇಂದು ಸಹ ಭಾರಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಇದು ಮಧ್ಯಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್​ ಅಲರ್ಟ್​ ಘೋಷಿಸಲಾಗಿದೆ. ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ.

ಗುಜರಾತ್ ಸರ್ಕಾರ ರಕ್ಷಣೆ ಮತ್ತು ಪರಿಹಾರ ನೀಡಲು ಹಲವಾರು ಇಲಾಖೆಗಳ ತಂಡಗಳನ್ನು ನಿಯೋಜಿಸಿದೆ. ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ನಿರಂತರ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಸ್ಥಳಾಂತರಿಸಲು ನೂರಾರು ಆಂಬ್ಯುಲೆನ್ಸ್‌ಗಳನ್ನು ಸುಸ್ಥಿತಿಯಲ್ಲಿ ಇರಿಸಲಾಗಿದೆ.

ಮಹಾರಾಷ್ಟ್ರದಲ್ಲಿ 6 ಜನರು ಬಲಿ:

ಮಹಾರಾಷ್ಟ್ರದಲ್ಲಿ ಚಂಡಮಾರುತದ ಆರ್ಭಟಕ್ಕೆ ಆರು ಜನರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಚಂಡಮಾರುತದಿಂದ ಉಂಟಾದ ಹಾನಿಯ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪರಿಶೀಲನೆ ನಡೆಸಿದ್ದಾರೆ. ಮುಂಬೈನಲ್ಲಿ ಸೋಮವಾರ ಗಂಟೆಗೆ 114 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಿದೆ. ಭಾರಿ ಮಳೆ ಸುರಿದಿದ್ದು, ವಿಮಾನ ಕಾರ್ಯಾಚರಣೆಯನ್ನು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು.

ಕರ್ನಾಟಕದಲ್ಲಿ 121 ಗ್ರಾಮಗಳನ್ನು ಕಾಡಿದ ತೌಕ್ತೆ:

ಕರ್ನಾಟಕದಲ್ಲಿ ಚಂಡಮಾರುತ ಸಂಬಂಧಿತ ಘಟನೆಗಳಿಂದ 8 ಜನರು ಸಾವನ್ನಪ್ಪಿದ್ದಾರೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಲೂರು, ಹಾಸನ ಮತ್ತು ಬೆಳಗಾವಿ ಏಳು ಜಿಲ್ಲೆಗಳ 121 ಗ್ರಾಮಗಳು ಚಂಡಮಾರುತದಿಂದ ಪ್ರಭಾವಿತವಾಗಿವೆ.

ಕೇರಳದಲ್ಲಿ 1,500 ಮನೆಗಳಿಗೆ ಹಾನಿ:

ಕೇರಳದಲ್ಲಿ 7 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 1,500 ಮನೆಗಳಿಗೆ ಹಾನಿಯಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಟ್ವೀಟ್ ಮಾಡಿದ್ದಾರೆ.

ಮುಂಬೈನಲ್ಲಿ ಮುಂದುವರೆದ ರಕ್ಷಣಾ ಕಾರ್ಯಾಚರಣೆ:

ಮುಂಬೈ ಕರಾವಳಿಯ ಬೋಟ್‌ನಲ್ಲಿದ್ದ ಒಟ್ಟು146 ಜನರನ್ನು ರಕ್ಷಿಸಲಾಗಿದೆ. ಸೋಮವಾರ ತೌಕ್ತೆ ಚಂಡಮಾರುತದಿಂದಾಗಿ 273 ಜನರಿದ್ದ ಬಾರ್ಜ್ ಪಿ 305 ಎಂಬ ಬೋಟ್‌ ಬಾಂಬೆ ಹೈ ಪ್ರದೇಶದಲ್ಲಿ ನಾಪತ್ತೆಯಾಗಿತ್ತು. ಉಳಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಮುಂದಿನ 3 ಗಂಟೆಗಳಲ್ಲಿ ದುರ್ಬಲಗೊಳ್ಳುವ ನಿರೀಕ್ಷೆ:

ಹವಾಮಾನ ಇಲಾಖೆಯ ಪ್ರಕಾರ, ಮುಂದಿನ 3 ಗಂಟೆಗಳಲ್ಲಿ ಇದರ ತೀವ್ರತೆ ದುರ್ಬಲಗೊಳ್ಳುವ ನಿರೀಕ್ಷೆಯಿದೆ.

Last Updated : May 18, 2021, 10:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.