ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ರಾಣಿ ಗ್ರಾಮದಲ್ಲಿ ಹಿಮನದಿ ಒಡೆದಿದ್ದು, ಈವರೆಗೆ 8 ಜನರ ಮೃತದೇಹಗಳು ಪತ್ತೆಯಾಗಿವೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಚಮೋಲಿಯ ತಪೋವನ್ ಅಣೆಕಟ್ಟು ಬಳಿಯ ಸುರಂಗದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಎಸ್‌ಡಿಆರ್‌ಎಫ್ ಸದಸ್ಯರು ಮಂದಾಕಿನಿ ನದಿಯ ಮಟ್ಟ ಕಡಿಮೆಯಾಗಲು ಕಾಯುತ್ತಿದ್ದಾರೆ.
ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಚಮೋಲಿಯ ತಪೋವನ್ ಬಳಿ ಸುರಂಗಕ್ಕೆ ದಾರಿ ಹುಡುಕಲೆಂದು ಅಗೆಯಲು ಪ್ರಾರಂಭಿಸಿದ್ದಾರೆ.
ಚಮೋಲಿಯ ತಪೋವನ್ ಅಣೆಕಟ್ಟಿನ ಬಳಿ ಸುರಂಗವನ್ನು ತೆರೆಯಲು, ಅವಶೇಷಗಳನ್ನು ಹೊರತೆಗೆಯಲು ಭಾರಿ ಗಾತ್ರದ ಅಗೆಯುವ ಯಂತ್ರಗಳನ್ನು ತರಲಾಗಿದೆ. ಸ್ಥಳೀಯ ನದಿಯಲ್ಲಿ ಹೆಚ್ಚಿದ ನೀರು ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ.
ಇದನ್ನೂ ಓದಿ: ಕೆಂಪುಕೋಟೆ ಬಳಿ ಹಿಂಸಾಚಾರ ಪ್ರಕರಣ: ಆರೋಪಿ ಸುಖ್ದೇವ್ ಸಿಂಗ್ ಬಂಧನ
ಹಿಮನದಿ ಸ್ಫೋಟವು ಧೌಲಿ ಗಂಗಾ ನದಿಯಲ್ಲಿ ಭಾರಿ ಪ್ರವಾಹವನ್ನು ಉಂಟುಮಾಡಿತು ಮತ್ತು ಹಿಮಾಲಯದ ಮೇಲ್ಭಾಗದಲ್ಲಿ ದೊಡ್ಡ ಪ್ರಮಾಣದ ವಿನಾಶಕ್ಕೆ ಕಾರಣವಾಗಿದೆ.
ಚಮೋಲಿ ಜಿಲ್ಲೆಯ ತಪೋವನ್‌ನ ಧೌಲಿಗಂಗಾದಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ 8 ಶವಗಳನ್ನು ಹೊರತೆಗೆಯಲಾಗಿದೆ. ಐಟಿಬಿಪಿ, ಭಾರತೀಯ ಸೇನೆ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಪಡೆಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.