ETV Bharat / bharat

ಭಾರತದಲ್ಲಿ ರೂಪಾಂತರಿ ಕೊರೊನಾ ಆತಂಕ: ಈವರೆಗೆ ಪತ್ತೆಯಾದ ಕೇಸ್​ಗಳೆಷ್ಟು ಗೊತ್ತು? - The total number of persons found infected with the mutant UK strain of corona is 109

ಜನವರಿ 16ರಿಂದ ಭಾರತದಾದ್ಯಂತ ಕೊರೊನಾ ಲಸಿಕೆಗಳನ್ನು ವಿತರಿಸಲಾಗುತ್ತಿದ್ದು, ಇತ್ತ ದೇಶದಲ್ಲಿ 109 ಜನರಿಗೆ ಬ್ರಿಟನ್​ ಸೋಂಕು ಅಂಟಿರುವುದು ದೃಢವಾಗಿದೆ.

mutant UK strain of corona cases in India
ರೂಪಾಂತರ ಕೊರೊನಾ
author img

By

Published : Jan 14, 2021, 4:43 PM IST

ನವದೆಹಲಿ: ಇಂಗ್ಲೆಂಡ್​ನಲ್ಲಿ ಹೊಸ ರೂಪ ತಾಳಿರುವ ಕೊರೊನಾ ವೈರಸ್​ ಭಾರತದಲ್ಲಿ ಮತ್ತೆ ಏಳು ಜನರಲ್ಲಿ ಪತ್ತೆಯಾಗಿದೆ. ದೇಶದಲ್ಲಿನ ರೂಪಾಂತರಿ ಕೋವಿಡ್​ ಪ್ರಕರಣಗಳ ಸಂಖ್ಯೆ 109ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

  • The total number of persons found infected with the mutant UK strain of #COVID19 is 109: Ministry of Health and Family Welfare

    — ANI (@ANI) January 14, 2021 " class="align-text-top noRightClick twitterSection" data=" ">

ಕೊರೊನಾಗಿಂತ ಶೇ.70ರಷ್ಟು ವೇಗವಾಗಿ ರೂಪಾಂತರಗೊಂಡಿರುವ ಕೊರೊನಾ ವೈರಸ್​ ಹರಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಪುಣೆಯ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್ ವೈರಾಲಜಿ (NIV), ಬೆಂಗಳೂರಿನ ನಿಮ್ಹಾನ್ಸ್, ದೆಹಲಿಯ ಇನ್​ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಆ್ಯಂಡ್ ಇಂಟಿಗ್ರೇಟಿವ್ ಬಯಾಲಜಿ (IGIB) ಹಾಗೂ ಹೈದರಾಬಾದ್​ನ ಪ್ರಯೋಗಾಲಯ ಸೇರಿದಂತೆ ದೇಶಾದ್ಯಂತ ಒಟ್ಟು 10 ಲ್ಯಾಬ್​​ಗಳಲ್ಲಿ ಬ್ರಿಟನ್​ ಸೋಂಕು ಪತ್ತೆ ಹಚ್ಚಲು ಪರೀಕ್ಷೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಎಲ್ಲ 109 ಸೋಂಕಿತರನ್ನು ಆರೋಗ್ಯ ಕೇಂದ್ರದಲ್ಲಿ ಒಂದೇ ಕೋಣೆಯಲ್ಲಿ ಐಸೋಲೇಷನ್​ನಲ್ಲಿರಿಸಲಾಗಿದೆ. ಅವರ ಸಂಪರ್ಕಕ್ಕೆ ಬಂದವರನ್ನೂ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇಂಗ್ಲೆಂಡ್​ನಲ್ಲಿ ಹೊಸ ಪ್ರಬೇಧದ ಕೋವಿಡ್ ವೈರಸ್ ಪತ್ತೆಯಾದ ಹಿನ್ನೆಲೆ ಡಿಸೆಂಬರ್​ 23ರಿಂದ ಜನವರಿ 7ರವರೆಗೆ ಭಾರತ ಹಾಗೂ ಯುಕೆ ನಡುವೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿತ್ತು.

ಜನವರಿ 8ರಿಂದ ಮತ್ತೆ ಉಭಯ ರಾಷ್ಟ್ರಗಳ ನಡುವೆ ವಿಮಾನ ಸೇವೆ ಪುನಾರಂಭಗೊಂಡಿದೆ. ಬ್ರಿಟನ್​ನಿಂದ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲೇ ಆರ್​ಟಿ-ಪಿಸಿಆರ್​ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.