ಜೈಪುರ(ರಾಜಸ್ಥಾನ): ಪಾಕಿಸ್ತಾನದ ಬೇಹುಗಾರಿಕೆಗಾಗಿ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಮಿಲಿಟರಿ ಎಂಜಿನಿಯರಿಂಗ್ ಸೇವೆಯ ಜೋಧಪುರ ವಲಯದಲ್ಲಿ ಕೆಲಸ ಮಾಡುತ್ತಿದ್ದ ನಾಲ್ಕನೇ ಶ್ರೇಣಿಯ ಉದ್ಯೋಗಿ ರಾಮ್ ಸಿಂಗ್ ಎಂಬಾತನನ್ನು ರಾಜಸ್ಥಾನ ಪೊಲೀಸರ ವಶಕ್ಕೆ ನೀಡಲಾಗಿದೆ.
ರಾಜಸ್ಥಾನ ಗುಪ್ತಚರ ಇಲಾಖೆ ಗುರುವಾರ ರಾಮ್ ಸಿಂಗ್ನನ್ನು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಲಯದ ಅನುಮತಿ ಪಡೆದು ಎರಡು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ.
ಪೊಲೀಸರು ಎರಡು ದಿನಗಳ ಕಾಲ ರಾಮ್ ಸಿಂಗ್ನನ್ನು ವಿಚಾರಣೆ ಮಾಡಲಿದ್ದು, ಈ ವೇಳೆ ಅಘಾತಕಾರಿ ವಿಚಾರಗಳು ಹೊರಬರುವ ಸಾಧ್ಯತೆಗಳು ದಟ್ಟವಾಗಿವೆ. ಪಾಕಿಸ್ತಾನಿ ಮಹಿಳಾ ಏಜೆಂಟ್ ಮೂಲಕ ರಾಮ್ಸಿಂಗ್ನನ್ನು ಹನಿ ಟ್ರ್ಯಾಪ್ನಲ್ಲಿ ಸಿಲುಕಿಸಿ ಭಾರತೀಯ ಸೇನೆಯ ಬಗ್ಗೆ ಮಾಹಿತಿಯನ್ನು ಪಾಕಿಸ್ತಾನ ಪಡೆಯುತ್ತಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.
ಮೊಬೈಲ್ನಲ್ಲಿದ್ದ ರಹಸ್ಯಗಳು!
ಆರೋಪಿ ರಾಮ್ಸಿಂಗ್ನ ಮೊಬೈಲ್ ಅನ್ನು ತಪಾಸಣೆ ನಡೆಸಿದಾಗ ಅನೇಕ ರಹಸ್ಯಗಳು ಬೆಳಕಿಗೆ ಬಂದಿವೆ. ಪಾಕಿಸ್ತಾನಿ ಮಹಿಳೆಯೊಂದಿಗೆ ಅಶ್ಲೀಲವಾಗಿ ಚಾಟ್ ಮಾಡಿರುವುದು ಬೆಳಕಿಗೆ ಬಂದಿದೆ. ತುಂಬಾ ದಿನಗಳವರೆಗೆ ಆರೋಪಿ ಭಾರತೀಯ ಸೇನೆಯ ವಿಚಾರವನ್ನು ತಿಳಿದುಕೊಂಡು ಪಾಕಿಸ್ತಾನದ ಮಹಿಳೆಗೆ ನೀಡುತ್ತಿದ್ದನು.
ಮಿಲಿಟರಿ ಎಂಜಿಯರಿಂಗ್ ಸೇವೆಯಲ್ಲಿರುವ ಓರ್ವ ವ್ಯಕ್ತಿ ಪಾಕಿಸ್ತಾನಕ್ಕೆ ಮಾಹಿತಿಯನ್ನುರವಾನೆ ಮಾಡುತ್ತಿದ್ದಾನೆ ಎಂದು ತಿಳಿದ ರಾಜಸ್ಥಾನ ಗುಪ್ತಚರ ಇಲಾಖೆ ಹಲವು ದಿನಗಳವರೆಗೆ ರಾಮ್ ಸಿಂಗ್ ಮೇಲೆ ನಿಗಾ ಇರಿಸಿ, ಕೊನೆಗೆ ಬಂಧಿಸಿದೆ.
ಪಾಕಿಸ್ತಾನಿ ಮಹಿಳೆಯೊಂದಿಗೆ ಅಶ್ಲೀಲವಾಗಿ ಚಾಟ್ ಮಾಡುವುದು ಮಾತ್ರವಲ್ಲದೇ ಸೇನೆಯ ಮಾಹಿತಿಯನ್ನೂ ಕೂಡಾ ರಾಮ್ಸಿಂಗ್ ಹಂಚಿಕೊಂಡಿದ್ದನು ಎಂಬುದು ಬಹಿರಂಗವಾಗಿದೆ. ಸದ್ಯಕ್ಕೆ ಆರೋಪಿಯ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಪರಿಶೀಲಿಸಲಾಗುತ್ತಿದೆ.
ಇದನ್ನೂ ಓದಿ: ಕಳೆದ ವಾರವಷ್ಟೇ ಚಾಲನೆಗೊಂಡಿದ್ದ Toy trainನಲ್ಲಿ ಬೆಂಕಿ.. 45 ಮಂದಿ ಕೂದಲೆಳೆ ಅಂತರದಲ್ಲಿ ಪಾರು