ಮುಂಬೈ(ಮಹಾರಾಷ್ಟ್ರ): ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ವಿರುದ್ಧ ನೂರು ಕೋಟಿ ರೂಪಾಯಿ ವಸೂಲಿ ಆರೋಪ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಏಳು ಮಂದಿ ಪೊಲೀಸರ ವಿಚಾರಣೆ ನಡೆಸಿ, ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ.
ಅನಿಲ್ ದೇಶಮುಖ್ ಮಹಾರಾಷ್ಟ್ರದ ಗೃಹ ಸಚಿವರಾಗಿದ್ದ ವೇಳೆ ಬಾರ್ ಮತ್ತು ರೆಸ್ಟೋರೆಂಟ್ಗಳಿಂದ ಸುಮಾರು ನೂರು ಕೋಟಿ ರೂಪಾಯಿಯನ್ನು ಸುಲಿಗೆ ಮಾಡಿದ್ದಾರೆಂದು ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಂಬೀರ್ ಸಿಂಗ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸುತ್ತಿದೆ.
ಪ್ರಸ್ತುತ ಅನಿಲ್ ದೇಶಮುಖ್ ಡಿಸೆಂಬರ್ 13ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಲಿದ್ದು, ಮಹಾರಾಷ್ಟ್ರ ಸರ್ಕಾರ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಕೈಲಾಶ್ ಉತ್ತಮ್‌ಚಂದ್ ಚಾಂಡಿವಾಲ್ ಅವರ ನೇತೃತ್ವದಲ್ಲಿ ಏಕ ಸದಸ್ಯ ತನಿಖಾ ಸಮಿತಿಯ ಕೂಡಾ ವಿಚಾರಣೆ ನಡೆಸುತ್ತಿದೆ.
ಅಕ್ರಮ ಹಣ ವರ್ಗಾವಣೆ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 2ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ಅನಿಲ್ ದೇಶಮುಖ್ ಅವರ ವಿಚಾರಣೆಯನ್ನು ಸಿಬಿಐ ಮುಂದುವರೆಸಿದೆ.
ಇದನ್ನೂ ಓದಿ: ಮುಂಬೈನಲ್ಲಿ ಎನ್ಸಿಬಿ ದಾಳಿ : ಆಸ್ಟ್ರೇಲಿಯಾಗೆ ಕೋರಿಯರ್ನಲ್ಲಿ ರವಾನೆಯಾಗುತ್ತಿದ್ದ ಡ್ರಗ್ಸ್ ಜಪ್ತಿ