ETV Bharat / bharat

ಮಹಿಳೆಯರಿಗೆ ಶಕ್ತಿಯಾಗಿ ನಿಂತಿರುವ ಮಾಜಿ ಸೇನಾಧಿಕಾರಿಯ ಪುತ್ರಿ.. - ಸಫಾ ಸಂಸ್ಥೆ

ಅಶಕ್ತ ಮಹಿಳೆಯರಿಗೆ ತರಬೇತಿ ಮತ್ತು ಉದ್ಯೋಗ ನೀಡುವ ನಿಟ್ಟಿನಲ್ಲಿ ಸಫಾ ಸಂಸ್ಥೆ ಸ್ಥಾಪಿಸಿ, ಲುಕ್ಮಾ ಕಿಚನ್​ ಸೆಂಟರ್​​ ಮೂಲಕ ಅನೇಕರಿಗೆ ಹೈದರಾಬಾದ್​ನ ರುಬಿನಾ ಆಸರೆಯಾಗಿದ್ದಾರೆ.

the-power-of-single-women-together-lukma-kitchen
ಮಹಿಳೆಯರಿಗೆ ಶಕ್ತಿಯಾಗಿ ನಿಂತಿರುವ ಮಾಜಿ ಸೇನಾಧಿಕಾರಿಯ ಪುತ್ರಿ
author img

By

Published : Nov 3, 2022, 11:05 PM IST

ಹೈದರಾಬಾದ್​ (ತೆಲಂಗಾಣ): ಬಡತನದಿಂದ ಬಳಲುವ, ಕೌಟುಂಬಿಕ ದೌರ್ಜನ್ಯದಿಂದ ನರಳುವ, ಗಂಡನ ಕಳೆದುಕೊಂಡು ಅಸಹಾಯಕರಾಗುವ ಮಹಿಳೆಯವರಿಗೆ ಹೈದರಾಬಾದ್​ನ ರುಬಿನಾ ಎಂಬ ಮಹಿಳೆ ಮಹಾ ಶಕ್ತಿಯಾಗಿ ನಿಂತಿದ್ದಾರೆ. ಜೀವನದಲ್ಲಿ ಬೆಂದ ಸಾವಿರಾರು ಮಹಿಳೆಯರಿಗೆ ಪಾಲಿಗೆ ಆಸರೆಯಾಗಿದ್ದಾರೆ. ಆ ಮಹಿಳೆಯರಿಗೆ ಉದ್ಯೋಗದ ತರಬೇತಿ ನೀಡಿ ಅವರನ್ನು ಸಶಕ್ತರನ್ನಾಗಿ ಮಾಡುವಲ್ಲಿ ಶ್ರಮಿಸುತ್ತಿರುವ ರುಬಿನಾ, ತಮ್ಮ ಅನುಭವಗಳನ್ನು 'ಈಟಿವಿ ಭಾರತ್' ಜೊತೆ ಹಂಚಿಕೊಂಡಿದ್ದಾರೆ.

ಯಾರು ಈ ರುಬಿನಾ?: ಒಬ್ಬ ಸೇನಾಧಿಕಾರಿಯಾದ ಪುತ್ರಿಯಾದ ರುಬಿನಾ, ದೇಶದ ಅನೇಕ ಭಾಗಗಳಲ್ಲಿ ಓದಿ ಬೆಳೆದರು. ಓದುವ ಸಮಯದಲ್ಲೇ ಬಡ ಮಹಿಳೆಯರಿಗಾಗಿ ಏನಾದರೂ ಮಾಡಬೇಕೆಂದು ನಿರ್ಧರಿಸಿದ್ದರು. ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಇವರು, ನಂತರ ಪ್ರವಾಸೋದ್ಯಮ ಮತ್ತು ಪ್ರಯಾಣ ಹಾಗೂ ಸಾಮಾಜಿಕ ಉದ್ಯಮಶೀಲತೆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.

ಅಲ್ಲದೇ, ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯದಲ್ಲಿ ಒಂಬತ್ತು ವರ್ಷಗಳ ಕಾಲ ಕೆಲಸ ಮಾಡಿರುವ ರುಬಿನಾಗೆ ಯಾವುದೂ ತೃಪ್ತಿಕರವಾಗಿರಲಿಲ್ಲ. ಆದ್ದರಿಂದ ಅವರು ಭಾರತಕ್ಕೆ ಮರಳಿದರು. ಸ್ವಲ್ಪ ಸಮಯದ ನಂತರ ಅವರು ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದರು.

ಇದರ ಭಾಗವಾಗಿಯೇ ಅವರು ವಿಶೇಷವಾಗಿ ಅಲ್ಪಸಂಖ್ಯಾತ ಮಹಿಳೆಯರ ಸ್ಥಿತಿಯನ್ನು ಅಧ್ಯಯನ ಮಾಡಲು ಹೈದರಾಬಾದ್‌ನಲ್ಲಿ ಒಂದು ಸ್ಥಳದಿಂದ ಇನ್ನೊಂದಕ್ಕೆ ಪ್ರಯಾಣಿಸಿದರು. ಕುಟುಂಬದವರು ಸೇರಿದಂತೆ ಹಲವರ ವಿರೋಧದ ನಡುವೆಯೂ ಮಹಿಳೆಯರ ಸಬಲೀಕರಣಕ್ಕಾಗಿ ಸಫಾ ಎಂಬ ಸಂಸ್ಥೆಯನ್ನು ಆರಂಭಿಸಿ ಮಹಿಳಾ ಸಬಲೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿದ್ದಾರೆ.

ಕಷ್ಟಗಳ ಮೇಲೆ ಕಷ್ಟಗಳು: ಅಶಕ್ತ ಮಹಿಳೆಯರಿಗೆ ತರಬೇತಿ ಮತ್ತು ಉದ್ಯೋಗ ಸಂಸ್ಥೆಯಾದ ಸಫಾ ಸ್ಥಾಪಿಸಿದೆ. ಸಫಾ ಎಂದರೆ ಶುದ್ಧತೆ, ಸ್ಥಿರತೆ ಎಂಬ ಅರ್ಥ. ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಪಯತ್ನಿಸಿದಾಗ ಸಂಪ್ರದಾಯಗಳು ಮತ್ತು ವಿವಿಧ ನಿರ್ಬಂಧಗಳೇ ಅವರಿಗೆ ತೊಡಕಾಗಿದ್ದವು. ಕೆಲವು ಪುರುಷರು ಬಂದು ಜಗಳವಾಡುತ್ತಿದ್ದರು... ನಮ್ಮ ಮಹಿಳೆಯರನ್ನು ದಾರಿ ತಪ್ಪಿಸಲಾಗುತ್ತಿದೆ ಎಂಬುವುದಾಗಿ ದೂರುತ್ತಿದ್ದರು ಎಂದು ರುಬಿಯಾ ಸ್ಮರಿಸಿದರು.

ಮನೆಯಲ್ಲಿ ಪುರುಷರಿಗೆ ಮನವರಿಕೆ ಮಾಡಿಕೊಡಲೆಂದೂ ಮಹಿಳೆಯರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದರು. ಕೆಲವು ತಿಂಗಳು ಒಬ್ಬಿಬ್ಬರು ಮಾತ್ರ ತರಬೇತಿಗೆ ಬರುತ್ತಿದ್ದರು. ಇಲ್ಲಿ ಅವರಿಗೆ ಹೊಲಿಗೆ, ಕಸೂತಿ, ಸೆಣಬಿನ ಚೀಲಗಳು, ಸ್ಕ್ರೀನ್ ಪ್ರಿಂಟಿಂಗ್, ಸ್ಯಾನಿಟರಿ ಪ್ಯಾಡ್ ತಯಾರಿಕೆ ಮತ್ತು ಸ್ವಉದ್ಯೋಗದಂತಹ ಕೋರ್ಸ್‌ಗಳಲ್ಲಿ ತರಬೇತಿಯನ್ನು ನೀಡಲಾಯಿತು ಎಂದು ಹೇಳಿದರು.

ಉಳಿದ ಮಹಿಳೆಯರೂ ಬರತೊಡಗಿದರು: ತರಬೇತಿ ಪಡೆದು ಆರ್ಥಿಕವಾಗಿ ಸದೃಢರಾದವರನ್ನು ನೋಡಿದ ಬಳಿಕ ಉಳಿದ ಮಹಿಳೆಯರೂ ಬರತೊಡಗಿದರು. 140ಕ್ಕೂ ಹೆಚ್ಚು ಅನಾಥ ಮತ್ತು ನಿರ್ಗತಿಕ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ, ವೃತ್ತಿ ಮಾರ್ಗದರ್ಶನ, ಸಂವಹನ ಕೌಶಲ್ಯ ಮತ್ತು ಉದ್ಯೋಗವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಫಾ ಕೇಂದ್ರಕ್ಕೆ ಬರುವ ಕೆಲವರು ಅದ್ಭುತ ಅಡುಗೆ ಮಾಡುವ ಬಗ್ಗೆ ತಿಳಿಯಿತು. ಇದೇ ಪ್ರೇರಣೆಯಿಂದ ಒಂಟಿ ಮಹಿಳೆಯರೊಂದಿಗೆ ಕ್ಲೌಡ್ ಕಿಚನ್ ಸ್ಥಾಪಿಸಲಾಯಿತು. ಮೊದಲಿಗೆ 15 ಮಂದಿಯನ್ನು ಆಯ್ಕೆ ಮಾಡಿ, ಉತ್ತಮ ಬಾಣಸಿಗರೊಂದಿಗೆ ಅಡುಗೆ ಮಾಡುವುದರ ಜೊತೆಗೆ ಅಡುಗೆ ನಿರ್ವಹಣೆ, ಶುಚಿಗೊಳಿಸುವಿಕೆ ಮತ್ತು ಪ್ಯಾಕಿಂಗ್ ತರಬೇತಿ ನೀಡಲಾಯಿತು. ಹಾಗೆ ಅವರೊಂದಿಗೆ ಲುಕ್ಮಾ ಕಿಚನ್ ಸೆಂಟರ್​​ ಸ್ಥಾಪಿಸಲಾಯಿತು ಎಂದು ವಿವರಿಸಿದರು.

ಲುಕ್ಮಾ ಕಿಚನ್​ ಸೆಂಟರ್​​ಅನ್ನು ಮೊದಲು ಬಹದ್ದೂರ್​ ಪುರದಲ್ಲಿ ಸ್ಥಾಪಿಸಲಾಯಿತು. ಈಗ ಇದು ಇತರ ಆರು ಸ್ಥಳಗಳಿಗೆ ಹರಡಿದೆ. ಅಂತೆಯೇ, ಮೌಲಾನಾ ಆಜಾದ್ ವಿಶ್ವವಿದ್ಯಾಲಯದಲ್ಲಿ ಲುಕ್ಮಾ ಕೆಫೆಟೇರಿಯಾವನ್ನು ಸಹ ಸ್ಥಾಪಿಸಲಾಯಿತು. ಮಹಿಳೆಯರೇ ಅಡುಗೆ ಮಾಡುವುದು ಮತ್ತು ಆರ್ಡರ್ ತೆಗೆದುಕೊಳ್ಳುವುದು ಹಾಗೂ ಡೋರ್ ಡೆಲಿವರಿ ಎಲ್ಲವನ್ನೂ ಮಾಡುತ್ತಾರೆ. ಸಫಾ ಸಂಸ್ಥೆಯಲ್ಲಿ 75 ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ಸಾವಿರಾರು ಜನರ ಬಾಳಿಗೆ ಬೆಳಕಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಮೆಕ್ಕೆಜೋಳದಿಂದ ಆಹಾರ ಉತ್ಪನ್ನ ಮಾತ್ರವಲ್ಲ..ಕವರ್,ಬ್ಯಾಗ್ ಕೂಡ ಸಿದ್ದವಾಗುತ್ತೆ: ಜಿಮ್ ನಲ್ಲಿ ಗಮನ ಸೆಳೆದ ಬಯೋ ಪ್ಲಾಸ್ಟಿಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.