ETV Bharat / bharat

ಹಾವನ್ನೇ ಹಗ್ಗವಾಗಿಸಿಕೊಂಡು ಸ್ಕಿಪ್ಪಿಂಗ್​ ಮಾಡಿದ ಯುವಕ.. ವಿಡಿಯೋ ವೈರಲ್​ - ಸತ್ತ ಹಾವನ್ನು ಸ್ಕಿಪ್ಪಿಂಗ್​ ಮಾಡಿದ ವಿಡಿಯೋ ವೈರಲ್​

ಹಾವು ಹಿಡಿದು ಸ್ಕಿಪ್ಪಿಂಗ್​ ಮಾಡಿದ ಮುಂಬೈ ಯುವಕನ ವಿರುದ್ಧ ಪ್ರಾಣಿದಯಾ ಸಂಘದವರು ಕಿಡಿಕಾರಿದ್ದಾರೆ. ಪ್ರಾಣಿಯನ್ನು ಈ ರೀತಿ ಹಿಂಸಿಸಿದ್ದಕ್ಕೆ ಯುವಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.

snake skipping
ಸ್ಕಿಪ್ಪಿಂಗ್​
author img

By

Published : Dec 20, 2021, 3:01 PM IST

ಹೈದರಾಬಾದ್​: ಹಾವನ್ನು ಕಂಡರೆ ಗಾವುದ ದೂರ ಓಡೋ ಜನರ ಮಧ್ಯೆ ಇಲ್ಲೊಬ್ಬ ಯುವಕ ಸತ್ತ ಹಾವಿನಿಂದ ಸ್ಕಿಪ್ಪಿಂಗ್​(ಜಿಗಿತ)​ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮುಂಬೈ ಸಮೀಪದ ಬಾಳ್ಕರ್​ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಾರುದ್ದದ ಹಾವನ್ನು ಕೈಯಲ್ಲಿ ಹಿಡಿದ ಯುವಕನೊಬ್ಬ ರಸ್ತೆಯ ಮೇಲೆ ಸ್ಕಿಪ್ಪಿಂಗ್​ ಮಾಡುತ್ತಿದ್ದಾನೆ. ಇದನ್ನು ಇನ್ನೊಬ್ಬರು ವಿಡಿಯೋ ಮಾಡಿದ್ದಾರೆ. ಸ್ಕಿಪ್ಪಿಂಗ್​ ಮಾಡಿದ ಬಳಿಕ ಯುವಕ ಹಾವನ್ನು ಕಸದ ರಾಶಿಯಲ್ಲಿ ಬಿಸಾಡಿದ್ದಾನೆ. ಈ ಹಾವನ್ನು ಯುವಕರೇ ಸಾಯಿಸಿ, ಈ ರೀತಿ ಸ್ಕಿಪ್ಪಿಂಗ್​ ಮಾಡಿದ್ದಾರಾ ಎಂಬುದರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.

ಹಾವನ್ನೇ ಸ್ಕಿಪ್ಪಿಂಗ್ ಹಗ್ಗವನ್ನಾಗಿ ಮಾಡಿಕೊಂಡ ಈ ಯುವಕನ ಕುಚೇಷ್ಟೆಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹಾಸ್ಯ ಚಟಾಕಿ ಹಾರಿಸುತ್ತಿದ್ದರೆ, ಇನ್ನು ಕೆಲವರು ಯುವಕನ ನಡೆಯನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: OMICRON: ರಾಜ್ಯದಲ್ಲಿ ಮತ್ತೆ ಐವರಿಗೆ ಒಮಿಕ್ರಾನ್ ಸೋಂಕು ದೃಢ : 19ಕ್ಕೆ ಏರಿದ ಸೋಂಕಿತರ ಸಂಖ್ಯೆ

ವಿಡಿಯೋ ವೈರಲ್​ ಆಗುತ್ತಿದ್ದಂತೆ ಯುವಕನ ಕೃತ್ಯದ ವಿರುದ್ಧ ಪ್ರಾಣಿ ದಯಾ ಸಂಘದವರು ಕಿಡಿಕಾರಿದ್ದಾರೆ. ಅಲ್ಲದೇ ಹಾವನ್ನು ಸಾಯಿಸಿದ ಬಗ್ಗೆ ಮತ್ತು ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.