ಗುಜರಾತ್(ಸೂರತ್): ಹೆತ್ತ ತಾಯಿಯನ್ನೇ ಮಕ್ಕಳು ಸರಿಸುಮಾರು 22 ವರ್ಷಗಳ ಕಾಲ ಕೋಣೆಯಲ್ಲಿ ಕೂಡಿ ಹಾಕಿರುವ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ಪೊಲೀಸರ ಸಹಾಯದೊಂದಿಗೆ ಎನ್ಜಿಒವೊಂದು ಇದೀಗ ಮಹಿಳೆಯನ್ನು ಬಂಧಮುಕ್ತಿಗೊಳಿಸಿದೆ. ಆಕೆಯ ಸ್ಥಿತಿ ಶೋಚನಿಯವಾಗಿದೆ.
ಸೂರತ್ನ ಪಾಂಡೆಸರಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸುಮಾರು 50 ವರ್ಷದ ತಾಯಿಯನ್ನು ಕಳೆದ 22 ವರ್ಷಗಳಿಂದ ಮಗ ಹಾಗೂ ಕುಟುಂಬಸ್ಥರು ಸೇರಿಕೊಂಡು ಕೋಣೆಯಲ್ಲಿ ಕೂಡಿಹಾಕಿದ್ದಾರೆ. ಇದರ ಜೊತೆಗೆ ಆಕೆಗೆ ಸರಿಯಾದ ಸಮಯಕ್ಕೆ ಊಟ ನೀಡಿಲ್ಲ. ಹೀಗಾಗಿ, ತಾಯಿಯ ಸ್ಥಿತಿ ಶೋಚನೀಯವಾಗಿದೆ ಎಂದು ಎನ್ಜಿಒ ಮಾಹಿತಿ ನೀಡಿದೆ.
ಕಳೆದ 22 ವರ್ಷಗಳಿಂದ ಒಂದೇ ಕೋಣೆಯಲ್ಲಿ ಉಳಿದುಕೊಂಡಿರುವ ಕಾರಣ ಆಕೆ ಸೂರ್ಯನ ಬೆಳಕನ್ನೇ ನೋಡಿಲ್ಲ. ಅದೇ ಸ್ಥಳದಲ್ಲಿ ಊಟ ಮಾಡುವುದು, ಶೌಚ ಮಾಡಿರುವ ಕಾರಣ ಆಕೆಯ ಸ್ಥಿತಿ ಶೋಚನೀಯವಾಗಿದೆ. ಜೊತೆಗೆ ಕಳೆದ ಎರಡು ವರ್ಷಗಳಿಂದ ವೃದ್ದೆ ಸ್ನಾನ ಸಹ ಮಾಡಿಲ್ಲ. ಆಕೆಯ ಸ್ಥಿತಿ ನೋಡಿರುವ ಸ್ವಯಂ ಸೇವಾ ಸಂಸ್ಥೆ ಸದಸ್ಯರೂ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ದಿನಪೂರ್ತಿ 1 ರೂಪಾಯಿಗೆ 1 ಲೀಟರ್ ಪೆಟ್ರೋಲ್ ವಿತರಣೆ! ಯಾಕೆ ಗೊತ್ತೇ?
ಎನ್ಜಿಒಗೆ ಬೆದರಿಕೆ: ಗೃಹಬಂಧನದಲ್ಲಿದ್ದ ಮಹಿಳೆಯನ್ನು ಬಿಡುಗಡೆ ಮಾಡಲು ಎನ್ಜಿಒ ಸದಸ್ಯರು ಬಂದಾಗ ಕುಟುಂಬಸ್ಥರು ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಹೀಗಾಗಿ, ಪೊಲೀಸರ ಸಹಾಯದಿಂದ ಮಹಿಳೆಯನ್ನ ಅಲ್ಲಿಂದ ಹೊರತರಲಾಗಿದೆ.