ETV Bharat / bharat

ಕೋವಿಡ್​ನಿಂದ ಸತ್ತು ಸಮಾಧಿಯಾಗಿದ್ದವ 2 ವರ್ಷಗಳ ನಂತರ ವಾಪಸ್!

author img

By

Published : Apr 16, 2023, 1:17 PM IST

ಕೋವಿಡ್​ನಿಂದ ಮೃತಪಟ್ಟಿದ್ದಾರೆ ಎನ್ನಲಾದ ವ್ಯಕ್ತಿಯೊಬ್ಬರು 2 ವರ್ಷಗಳ ನಂತರ ಮನೆಗೆ ಮರಳಿದ ಅಚ್ಚರಿಯ ಘಟನೆ ಜರುಗಿದೆ. ತನ್ನನ್ನು ಯಾರೋ ಅಪಹರಿಸಿ ಮತ್ತು ಬರಿಸುವ ಇಂಜೆಕ್ಷನ್ ನೀಡುತ್ತಿದ್ದರು ಎಂದು ಮರಳಿ ಬಂದ ವ್ಯಕ್ತಿ ಹೇಳಿಕೊಂಡಿದ್ದಾರೆ.

Covid infected man buried 2 years ago returns home alive

ಗುಶ್ (ಮಧ್ಯಪ್ರದೇಶ) : ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿ ಸಮಾಧಿಯಾದ ವ್ಯಕ್ತಿಯೊಬ್ಬರು ಶನಿವಾರ ಜೀವಂತವಾಗಿ ಮನೆಗೆ ಮರಳಿರುವ ಅಚ್ಚರಿಯ ಪ್ರಕರಣ ಮಧ್ಯ ಪ್ರದೇಶದ ಧಾರ್‌ನಲ್ಲಿ ನಡೆದಿದೆ. ಮೃತಪಟ್ಟಿದ್ದಾನೆ ಎಂದುಕೊಂಡ ವ್ಯಕ್ತಿ 2 ವರ್ಷಗಳ ನಂತರ ಹಿಂತಿರುಗಿದಾಗ ಆತನ ಕುಟುಂಬ ಸದಸ್ಯರು ಆರಂಭದಲ್ಲಿ ದಿಗ್ಭ್ರಮೆಗೊಂಡರು. ಆದರೆ ನಂತರ ಅಪಾರ ಸಂತೋಷದಿಂದ ಕುಣಿದು ಕುಪ್ಪಳಿಸಿದ್ದಾರೆ. ತಮ್ಮ ಕುಟುಂಬದ ಸದಸ್ಯ ಕಮಲೇಶ್ ಇನ್ನೂ ಬದುಕಿದ್ದಾನೆ ಎಂಬುದನ್ನು ನಂಬಲು ಅವರಿಗೆ ಸಾಕಷ್ಟು ಕಷ್ಟವಾಗಿದ್ದಂತೂ ನಿಜ.

2021 ರಲ್ಲಿ ಕೊರೊನಾ ಎರಡನೇ ಅಲೆ ಬಂದಾಗ ಧಾರ್‌ನ ಕಡೋಡ್ಕಲಾ ನಿವಾಸಿ 30 ವರ್ಷದ ಕಮಲೇಶ್ ಪಾಟಿದಾರ್ ಎಂಬುವರು ಕೂಡ ವೈರಸ್ ಸೋಂಕಿಗೆ ಒಳಗಾಗಿದ್ದರು. ಕಮಲೇಶ್ ಅವರನ್ನು ಚಿಕಿತ್ಸೆಗಾಗಿ ಬರೋಡಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಕೆಲವು ದಿನಗಳ ಚಿಕಿತ್ಸೆ ನಂತರ ಕಮಲೇಶ್ ಶ್ವಾಸಕೋಶದಲ್ಲಿ ಸೋಂಕು ಹರಡಿದ್ದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ತಿಳಿಸಿತ್ತು. ಆಗ ಕೋವಿಡ್​ ಅಲೆ ಉತ್ತುಂಗದಲ್ಲಿರುವ ಕಾರಣದಿಂದ ಕಮಲೇಶ್ ಅವರ ಕುಟುಂಬಕ್ಕೆ ಅವರ ಮೃತದೇಹವನ್ನು ನೋಡಲು ಅಥವಾ ಸ್ಪರ್ಶಿಸಲು ಅವಕಾಶ ನೀಡಿರಲಿಲ್ಲ.

ಸುಮಾರು 20 ರಿಂದ 25 ಅಡಿ ದೂರದಿಂದ ಕುಟುಂಬ ಸದಸ್ಯರಿಗೆ ಮೃತದೇಹವನ್ನು ತೋರಿಸಿ ಆಸ್ಪತ್ರೆ ಆಡಳಿತ ಮಂಡಳಿಯು ಕಮಲೇಶ್ ಅವರ ಅಂತ್ಯಕ್ರಿಯೆ ನೆರವೇರಿಸಿತ್ತು. ಹೀಗಾಗಿ ಕುಟುಂಬಸ್ಥರು ದೇಹವನ್ನು ಗುರುತಿಸಲು ಅಥವಾ ಖಚಿತಪಡಿಸಲು ಸಾಧ್ಯವಾಗಿರಲಿಲ್ಲ. ಆದಾಗ್ಯೂ ಕಮಲೇಶ್ ಸತ್ತಿದ್ದಾನೆ ಎಂದು ನಂಬಿದ ಇಡೀ ಕುಟುಂಬ ದುಃಖಿತವಾಗಿತ್ತು. ಕಮಲೇಶ್ ಪತ್ನಿ ವಿಧವೆಯಂತೆ ಬದುಕಲು ಪ್ರಾರಂಭಿಸಿದರು. ಆದರೆ ನಿನ್ನೆ ಶನಿವಾರ, ಏಪ್ರಿಲ್ 15 ರಂದು ಕಮಲೇಶ್ ತನ್ನ ತಾಯಿಯ ಚಿಕ್ಕಪ್ಪ ವಾಸಿಸುವ ಧಾರ್‌ನ ಸರ್ದಾರ್‌ಪುರ ತಹಸಿಲ್‌ನ ಬದ್ವೇಲಿ ಗ್ರಾಮಕ್ಕೆ ಹೋಗಿದ್ದು, ಅವರನ್ನು ನೋಡಿ ಎಲ್ಲರೂ ದಿಗ್ಭ್ರಮೆಗೊಳಗಾಗಿದ್ದಾರೆ.

ಕಮಲೇಶ್ ಜೀವಂತವಾಗಿರುವುದನ್ನು ನೋಡಿದ ತಾಯಿಯ ಚಿಕ್ಕಪ್ಪ ಆರಂಭದಲ್ಲಿ ಆಘಾತಕ್ಕೊಳಗಾಗಿದ್ದರು. ನಂತರ ಸಮಾಧಾನದಿಂದ ಕಮಲೇಶ್ ತನ್ನ ಜೊತೆಗೆ ನಡೆದ ಎಲ್ಲವನ್ನೂ ಹೇಳಿದ್ದಾರೆ. ತಾಯಿಯ ಚಿಕ್ಕಪ್ಪ ಕಮಲೇಶ್ ತಂದೆಗೆ ಕರೆ ಮಾಡಿ ಆತ ಹಿಂದಿರುಗಿದ ಬಗ್ಗೆ ತಿಳಿಸಿದರೂ ಮನೆಯವರು ನಂಬಿರಲಿಲ್ಲ. ನಂತರ ಕಮಲೇಶ್ ವೀಡಿಯೊ ಕಾಲ್ ಮೂಲಕ ತಮ್ಮ ಪೋಷಕರು ಮತ್ತು ಹೆಂಡತಿಯೊಂದಿಗೆ ಮಾತನಾಡಿದ್ದಾರೆ. ಆಗ ಅವರ ಕುಟುಂಬದವರು ಕಮಲೇಶ್ ಬದುಕಿರುವುದನ್ನು ನಂಬಿದ್ದಾರೆ.

ತನ್ನ ಜೊತೆ ನಡೆದ ಘಟನಾವಳಿಗಳ ಬಗ್ಗೆ ಮಾಹಿತಿ ನೀಡಿದ ಕಮಲೇಶ್, ತನ್ನನ್ನು 5 ರಿಂದ 7 ಜನ ಕಿಡ್ನ್ಯಾಪ್ ಮಾಡಿ ಗುಜರಾತಿನ ಅಹಮದಾಬಾದ್​ನಲ್ಲಿಟ್ಟಿದ್ದರು. ಅವರು ಯಾವಾಗಲೂ ನನಗೆ ಮತ್ತು ಬರುವ ಇಂಜೆಕ್ಷನ್ ನೀಡುತ್ತಿದ್ದರು ಎಂದು ಹೇಳಿದ್ದಾರೆ. ಒಂದು ದಿನ ಮಾತ್ರ ಇಂಜೆಕ್ಷನ್ ನೀಡಿರಲಿಲ್ಲ. ಅವತ್ತು ಅಪಹರಣಕಾರರು ಕಾರಿನಲ್ಲಿ ಎಲ್ಲೋ ಹೋಗುತ್ತಿದ್ದರು. ಅವರಿಗೆ ಗೊತ್ತಾಗದಂತೆ ಕಮಲೇಶ್ ಕಾರಿನ ಡಿಕ್ಕಿಯಲ್ಲಿ ಕುಳಿತಿದ್ದರು. ಹೊಟೇಲ್ ಒಂದರ ಬಳಿ ಕಾರು ನಿಂತಾಗ ಕಮಲೇಶ್ ತಪ್ಪಿಸಿಕೊಂಡು ಅಲ್ಲೇ ಅಡಗಿಕೊಂಡಿದ್ದರು. ನಂತರ ಅಹಮದಾಬಾದ್​ನಿಂದ ಇಂದೋರ್​ ಹಾಗೂ ನಂತರ ಧಾರ್​ನ ಬಡ್ವೇಲಿಗೆ ಬಂದು ಚಿಕ್ಕಪ್ಪನ ಮನೆಗೆ ಬಂದಿರುವುದಾಗಿ ಕಮಲೇಶ್ ಹೇಳಿದ್ದಾರೆ. ಸದ್ಯ ಕಮಲೇಶ್ ಅವರನ್ನು ಸ್ಥಳೀಯ ಪೊಲೀಸ್ ಸ್ಟೇಷನ್​ಗೆ ಹಾಜರುಪಡಿಸಲಾಗಿದ್ದು, ಪೊಲೀಸರು ಘಟನಾವಳಿಗಳ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.

ಇದನ್ನೂ ಓದಿ : ಸುಡಾನ್​ನಲ್ಲಿ ಸೇನಾಪಡೆಗಳ ಘರ್ಷಣೆ: ಓರ್ವ ಭಾರತೀಯ ಸೇರಿ 56 ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.