ETV Bharat / bharat

ಇಸ್ಲಾಮಿಕ್ ಭಯೋತ್ಪಾದನೆಯ ಮಾನಸಿಕತೆ ನಾಶ ಮಾಡಬೇಕಿದೆ: ತಸ್ಲೀಮಾ ನಸ್ರೀನ್ - ಸಲ್ಮಾನ್ ರಶ್ದಿ ಮೇಲಿನ ದಾಳಿ

ಮುಸ್ಲಿಂ ರಾಷ್ಟ್ರಗಳ ಸರ್ಕಾರಗಳು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಹೆಚ್ಚಿಸಲು ಧರ್ಮವನ್ನು ಬಳಸುತ್ತವೆ. ಅದಕ್ಕಾಗಿಯೇ ಮುಸ್ಲಿಂ ರಾಷ್ಟ್ರಗಳು ರಾಜ್ಯ ಮತ್ತು ಧರ್ಮವನ್ನು ಪ್ರತ್ಯೇಕಿಸಲು ಪ್ರಯತ್ನಿಸಲಿಲ್ಲ. ಈ ದೇಶಗಳಲ್ಲಿ ಆಧುನಿಕ ಕಾನೂನುಗಳನ್ನು ಪರಿಚಯಿಸಲು ಯಾವುದೇ ಪ್ರಯತ್ನಗಳನ್ನು ಮಾಡಲಾಗಿಲ್ಲ ಎನ್ನುತ್ತಾರೆ ಲೇಖಕಿ ತಸ್ಲೀಮಾ ನಸ್ರೀನ್.

ತಸ್ಲೀಮಾ ನಸ್ರೀನ್
Taslima Nasreen
author img

By

Published : Aug 17, 2022, 1:42 PM IST

ನವದೆಹಲಿ: ಸಲ್ಮಾನ್ ರಶ್ದಿ ಅವರ ಮೇಲೆ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಬಾಂಗ್ಲಾದೇಶದ ಬಹಿಷ್ಕೃತ ಲೇಖಕಿ ತಸ್ಲೀಮಾ ನಸ್ರೀನ್ ಅವರ ಅಭಿಪ್ರಾಯವೇನು ಎಂಬ ಬಗ್ಗೆ ಈಟಿವಿ ಭಾರತ್ ಅವರೊಂದಿಗೆ ಮಾತನಾಡಿದೆ. ಸಂದರ್ಶನದ ಆಯ್ದ ಭಾಗಗಳು ಈ ಕೆಳಗಿನಂತಿವೆ.

ಪ್ರಶ್ನೆ: ಸಲ್ಮಾನ್ ರಶ್ದಿ ಮೇಲಿನ ದಾಳಿಗೆ ನಿಮ್ಮ ಪ್ರತಿಕ್ರಿಯೆ ಏನು? ಒಂದು ಸಮಾಜವಾಗಿ ನಾವು ಹಿಮ್ಮುಖವಾಗಿ ನಡೆಯುತ್ತಿದ್ದೇವೆಯೆ?

ತ್ತರ: ಪ್ರಪಂಚದ ಎಲ್ಲೆಡೆ ಇದು ಹೆಚ್ಚುತ್ತಿದೆ. ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಇದು ಇಲ್ಲಿಗೇ ನಿಲ್ಲಬೇಕು. ಹಾಗೆಂದು ಯಾರೋ ಯಾರನ್ನೂ ಕೊಲ್ಲಲು ಸಾಧ್ಯವಿಲ್ಲ.

ಪ್ರಶ್ನೆ: ಇದನ್ನು ನಿಲ್ಲಿಸಲು ನಾವು ಏನು ಮಾಡಬೇಕು? ಭಾರತದಲ್ಲೂ 'ಸರ್ ತನ್ ಸೆ ಜುದಾ' (ತಲೆ ಕತ್ತರಿಸುವುದು) ಎಂಬ ಘೋಷಣೆಗಳು ಕೇಳಿಬರುತ್ತಿವೆ.

: ಇದು ಪ್ರಪಂಚದಾದ್ಯಂತ ನಡೆಯುತ್ತಿದೆ. ಸಲ್ಮಾನ್ ರಶ್ದಿಗೆ ಇಷ್ಟು ಭದ್ರತೆ ಸಿಕ್ಕಿರುವ ಅಮೆರಿಕದಂಥ ಸ್ಥಳದಲ್ಲಿ ಒಂದು ವೇಳೆ ಇಂಥ ಘಟನೆ ನಡೆಯಬಹುದಾದರೆ ಅದು ಎಲ್ಲಿ ಬೇಕಾದರೂ ಆಗಬಹುದು. ಮುಸ್ಲಿಂ ಸಮುದಾಯದಲ್ಲಿ ಬೆಳೆಯುತ್ತಿರುವ ಮೂಲಭೂತವಾದಕ್ಕೆ ಕಡಿವಾಣ ಹಾಕಿದರೆ ಮಾತ್ರ ಇಂತಹ ಘಟನೆಗಳನ್ನು ತಡೆಯಲು ಸಾಧ್ಯ.

ಮೂಲಭೂತವಾದ ಹೆಚ್ಚಾಗದಿದ್ದರೆ ಭಯೋತ್ಪಾದನೆಯೂ ಬೆಳೆಯುವುದಿಲ್ಲ. ಆದರೆ, ಇದಕ್ಕಾಗಿ ಬಹಳ ಶ್ರಮ ಪಡಬೇಕಾಗುತ್ತದೆ. ಏಕೆಂದರೆ ಮೂಲಭೂತವಾದವನ್ನು ಪೋಷಿಸಲು ಬಯಸುವವರು 25-26 ವರ್ಷ ವಯಸ್ಸಿನ ಹುಡುಗರನ್ನು ಗುರಿ ಮಾಡಿಕೊಳ್ಳುತ್ತಾರೆ. ಅವರು ಸುಲಭವಾಗಿ ಬ್ರೈನ್ ವಾಶ್ ಆಗುತ್ತಾರೆ.

ಧಾರ್ಮಿಕ ಮುಖಂಡರು ಇಂಥ ಕೆಲಸಗಳನ್ನು ಬಹಳ ಸುಲಭವಾಗಿ ಮಾಡುತ್ತಾರೆ. ಅದನ್ನು ನಿಲ್ಲಿಸಿದರೆ, ಎಲ್ಲವೂ ಸರಿಯಾಗುತ್ತದೆ. ಇಂಟರ್‌ನೆಟ್‌ನಲ್ಲಿ 'ಅಪಾಯಕಾರಿ (ಆಮೂಲಾಗ್ರ) ಸಂದೇಶಗಳು' ಲಭ್ಯವಿವೆ ಎಂಬುದಂತೂ ಸತ್ಯ. ಇಂಟರ್​ನೆಟ್​ ಸೌಲಭ್ಯ ಹೊಂದಿರುವ ಯಾವುದೇ ಯುವಕರು ಸುಲಭವಾಗಿ ತೀವ್ರಗಾಮಿಯಾಗುತ್ತಾರೆ ಮತ್ತು ಭಯೋತ್ಪಾದನೆಯ ಕಡೆಗೆ ತಿರುಗುತ್ತಾರೆ.

ಪ್ರಶ್ನೆ: ಮದರಸಾಗಳು ಮೂಲಭೂತವಾದವನ್ನು ಹರಡುತ್ತವೆ ಎಂದು ನೀವು ಭಾವಿಸುತ್ತೀರಾ?

ಉ: ಶಿಕ್ಷಣವನ್ನು ಕಲಿಸುವ ಬದಲಿಗೆ ಧಾರ್ಮಿಕ ವಿಷವನ್ನು ಕಲಿಸುವ ಕೆಲವು ಮದರಸಾಗಳಿವೆ. ಈಗ ಸರ್ಕಾರ ಈ ವಿಷಯದ ಮೇಲೆ ನಿಗಾ ಇಡಬೇಕಾಗಿದೆ. ಈ ಬಗ್ಗೆ ಸರ್ಕಾರದ ನಿಯಂತ್ರಣ ಅಗತ್ಯ.

ಪ್ರಶ್ನೆ: ಈ ಸರ್ಕಾರಕ್ಕೆ ಇಂಥ ವಿಷಯಗಳ ಮೇಲೆ ನಿಯಂತ್ರಣವಿದೆ ಎಂದು ನೀವು ನಂಬುತ್ತೀರಾ?

ಉ: ನಾನು ಈ ಸರ್ಕಾರದ ಬಗ್ಗೆ ಮಾತನಾಡುವುದಿಲ್ಲ. ಪ್ರಪಂಚದಾದ್ಯಂತ ಇರುವ ಸರ್ಕಾರಗಳಿಗೆ ನಾನು ಇದನ್ನು ಹೇಳುತ್ತಿದ್ದೇನೆ. ಪ್ರಪಂಚದಾದ್ಯಂತ ಮದರಸಾಗಳ ಮೂಲಕ ಬ್ರೈನ್ ವಾಶ್ ಮಾಡುವುದರಿಂದ ಪ್ರತಿಯೊಂದು ದೇಶದ ಸರ್ಕಾರವೂ ಈ ಮದರಸಾಗಳ ಮೇಲೆ ನಿಗಾ ಇಡಬೇಕು. ಅವುಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕು.

ಏಕೆಂದರೆ ಭಯೋತ್ಪಾದನೆಯು ಒಂದು ಮಾನಸಿಕತೆ, ಇದನ್ನು ಈ ರೀತಿಯಲ್ಲಿ ಕೊನೆಗೊಳಿಸಬಹುದು. ಭಯೋತ್ಪಾದಕನನ್ನು ಕೊಲ್ಲುವ ಮೂಲಕ ಭಯೋತ್ಪಾದನೆ ಎಂದಿಗೂ ಕೊನೆಗೊಳ್ಳುವುದಿಲ್ಲ. ಆ ಮಾನಸಿಕತೆಯನ್ನು ನಾಶ ಮಾಡಬೇಕು. ಬಹುಶಃ ಮದರಸಾಗಳನ್ನು ನಿಯಂತ್ರಿಸುವ ಮೂಲಕ ಇದನ್ನು ಸಾಧಿಸಬಹುದು. ಭಯೋತ್ಪಾದನೆಯು ಸಾಂಕ್ರಾಮಿಕವಾಗಿದೆ. ಇದರ ಕಲ್ಪನೆಯು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ತಲುಪುತ್ತದೆ ಮತ್ತು ಅದೇ ರೀತಿಯಲ್ಲಿ ಅದು ಹರಡುತ್ತದೆ.

ಪ್ರಶ್ನೆ: ನಾವು ಭಯೋತ್ಪಾದನೆಯ ಬಗ್ಗೆ ಮಾತನಾಡುವಾಗ, ನಾವು ಯಾವಾಗಲೂ ಇಸ್ಲಾಂಗೇ ಬಂದು ನಿಲ್ಲುತ್ತೇವೆ ಏಕೆ?

ಉ: ವಾಸ್ತವವಾಗಿ ಇಸ್ಲಾಂ ಸುಧಾರಣೆಯಾಗಲಿಲ್ಲ, ವಿಕಾಸವಾಗಲಿಲ್ಲ. ಅದರಲ್ಲಿ ಯಾವುದೇ ವಿಮರ್ಶಾತ್ಮಕ ಪರಿಶೀಲನೆ ಸಾಧ್ಯವಿಲ್ಲ. ನಾವು ಯಾವುದೇ ರೀತಿಯ ಸುಧಾರಣೆಯ ಬಗ್ಗೆ ಮಾತನಾಡಿದರೆ, ನಮ್ಮನ್ನು ಕೊಲ್ಲಲಾಗುತ್ತದೆ. ಹಾಗಿರುವಾಗ ಪುರುಷ ಮತ್ತು ಮಹಿಳೆಯ ನಡುವೆ ಸಮಾನತೆಯ ಮಾತು ಹೇಗೆ ಸಾಧ್ಯ? ಧಾರ್ಮಿಕ ಕಾನೂನುಗಳು ಮಾನವ ಹಕ್ಕುಗಳು ಮತ್ತು ನ್ಯಾಯವನ್ನು ಆಧರಿಸಿರಬೇಕು.

ಈ ಸುಧಾರಣೆಗಳ ಬಗ್ಗೆ ಯಾರಾದರೂ ಮಾತನಾಡಿದರೆ, ಅವರನ್ನು ಕೊಲ್ಲಲು ಕೋಮುವಾದಿ ಶಕ್ತಿಗಳು ಬರುತ್ತವೆ. ಅವರನ್ನು ಸರಕಾರ ಎಂದಿಗೂ ತಡೆಯುವುದಿಲ್ಲ. ಮುಸ್ಲಿಂ ರಾಷ್ಟ್ರಗಳ ಸರ್ಕಾರಗಳು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಹೆಚ್ಚಿಸಲು ಧರ್ಮವನ್ನು ಬಳಸುತ್ತವೆ. ಅದಕ್ಕಾಗಿಯೇ ಮುಸ್ಲಿಂ ರಾಷ್ಟ್ರಗಳು ರಾಜ್ಯ ಮತ್ತು ಧರ್ಮವನ್ನು ಪ್ರತ್ಯೇಕಿಸಲು ಪ್ರಯತ್ನಿಸಲಿಲ್ಲ.

ಈ ದೇಶಗಳಲ್ಲಿ ಆಧುನಿಕ ಕಾನೂನುಗಳನ್ನು ಪರಿಚಯಿಸಲು ಯಾವುದೇ ಪ್ರಯತ್ನಗಳನ್ನು ಮಾಡಲಾಗಿಲ್ಲ. ಅವರು ಏಳನೇ ಶತಮಾನದ ಕಾನೂನನ್ನು ಅನುಸರಿಸುತ್ತಾರೆ ಮತ್ತು ಸರ್ಕಾರಗಳು ಅದನ್ನು ಬದಲಾಯಿಸಲು ಎಂದಿಗೂ ಪ್ರಯತ್ನಿಸುವುದಿಲ್ಲ ಏಕೆಂದರೆ ಅವರು ಆ ಧಾರ್ಮಿಕ ಕಾನೂನುಗಳನ್ನು ರಾಜಕೀಯವಾಗಿ ಬಳಸಿಕೊಳ್ಳಬೇಕು. ಹಾಗಾಗಿ ಇಸ್ಲಾಂ ಕೇವಲ ಇಸ್ಲಾಂ ಅಲ್ಲ, ಅದು 'ರಾಜಕೀಯ ಇಸ್ಲಾಂ' ಆಗಿ ಮಾರ್ಪಟ್ಟಿದೆ ಮತ್ತು ಈ ಬದಲಾವಣೆಯು ತುಂಬಾ ಅಪಾಯಕಾರಿಯಾಗಿದೆ. ಅವರ ಧರ್ಮವನ್ನು ಜೀವಂತವಾಗಿಡಲು ರಕ್ತದ ಅವಶ್ಯಕತೆ ಇದೆ.

ಪ್ರಶ್ನೆ: ಸಲ್ಮಾನ್ ರಶ್ದಿ ಮೇಲಿನ ದಾಳಿಯನ್ನು ಇಡೀ ಭ್ರಾತೃತ್ವದ ಮೇಲಿನ ದಾಳಿ ಎಂದು ನೀವು ಪರಿಗಣಿಸುತ್ತೀರಾ?

ಉ: ಎಲ್ಲ ಬರಹಗಾರರ ಮೇಲೆ ದಾಳಿ ನಡೆಯುವುದಿಲ್ಲ. ಇಸ್ಲಾಂ ಧರ್ಮವನ್ನು ಸುಧಾರಿಸಲು, ಅದನ್ನು ವಿಕಾಸಗೊಳಿಸಲು ಬಯಸುವ ಬರಹಗಾರರ ಮೇಲೆ ದಾಳಿ ನಡೆಯುತ್ತಿದೆ. ನನ್ನನ್ನೂ ಕೊಲ್ಲಲು ಫತ್ವಾ ಹೊರಡಿಸಲಾಯಿತು, ನನ್ನ ತಲೆಯ ಮೇಲೆ ಬಹುಮಾನವನ್ನೂ ಘೋಷಿಸಲಾಯಿತು. ಆದ್ದರಿಂದ ಕೆಲವರು ಅಪಾಯದಲ್ಲಿದ್ದಾರೆ.

ರಶ್ದಿ ಮೇಲಿನ ದಾಳಿಯ ನಂತರ ಕೆಲವು ಮುಸ್ಲಿಂ ದೇಶಗಳಲ್ಲಿ ಸಂಭ್ರಮಾಚರಣೆಗಳು ನಡೆದವು. ಅದು ಕೆಟ್ಟದ್ದು. ಪಾಕಿಸ್ತಾನದ ಬಲಪಂಥೀಯ ತೆಹ್ರೀಕ್-ಎ-ಲಬ್ಬೈಕ್ ನಾಯಕ ಸಾದ್ ರಿಜ್ವಿ "ನಾವು ಸಲ್ಮಾನ್‌ನನ್ನು ಮುಗಿಸಿದ್ದೇವೆ. ಈಗ ತಸ್ಲೀಮಾ ಅವರನ್ನು ಕೊಲ್ಲಬೇಕಿದೆ ಎಂದು ಹೇಳುತ್ತಾರೆ.

ಅವರ ಈ ಹೇಳಿಕೆಯನ್ನು ಪಾಕಿಸ್ತಾನದ ಸುಮಾರು 20 ಲಕ್ಷ ಜನರು ಕೇಳಿದ್ದಾರೆ. ಅಂದಿನಿಂದ ಟ್ವಿಟರ್‌ನಲ್ಲಿ ಮತ್ತೆ ನನಗೆ ಕೊಲೆ ಬೆದರಿಕೆ ಬರುತ್ತಿವೆ. ಮುಂದಿನ ಬಾರಿ ನನ್ನದು ಎಂದು ಹೇಳಲಾಗುತ್ತಿದೆ. ಸಲ್ಮಾನ್ ರಶ್ದಿ ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ಸಂಪೂರ್ಣ ಪೊಲೀಸ್ ರಕ್ಷಣೆಯಲ್ಲಿ ವಾಸಿಸುತ್ತಿದ್ದಾರೆ, ಆದ್ದರಿಂದ ಅವರು ಬದುಕುಳಿದರು.

ಇಸ್ಲಾಂ ಅನ್ನು ಸುಧಾರಿಸಲು ಅಥವಾ ಅದನ್ನು ಆಧುನಿಕ-ಮನಸ್ಸಿನ ಆಧುನಿಕ ಇಸ್ಲಾಂ ಮಾಡಲು ಬಯಸುವ ಹೆಚ್ಚಿನ ಬರಹಗಾರರು ಅಪಾಯವನ್ನು ಎದುರಿಸುತ್ತಾರೆ ಏಕೆಂದರೆ ಅವರಿಗೆ ಯಾವುದೇ ಪೊಲೀಸ್ ರಕ್ಷಣೆ ಇಲ್ಲ ಮತ್ತು ಸುಲಭವಾಗಿ ಮೂಲಭೂತವಾದಿಗಳ ಗುರಿಯಾಗಬಹುದು.

ಪ್ರಶ್ನೆ: ನೂಪುರ್ ಶರ್ಮಾ ವಿರುದ್ಧ ಭಾರತದಲ್ಲಿ ಇಂಥ ಬೆದರಿಕೆಗಳನ್ನು ಹಾಕಲಾಗುತ್ತಿದೆ. ಅದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಉ: ನೋಡಿ, ನನ್ನ ಮೇಲೆ ಅನೇಕ ದಾಳಿಗಳು ನಡೆದಿವೆ ಮತ್ತು ನನ್ನನ್ನು ಕೊಲ್ಲುವ ಹಲವಾರು ಬೆದರಿಕೆಗಳು ಬಂದಿವೆ. ಇಸ್ಲಾಂ ಅನ್ನು ಸುಧಾರಿಸುವ ಬಗ್ಗೆ ಮಾತನಾಡುವವರು ಹೆಚ್ಚು ಗುರಿಯಾಗುತ್ತಾರೆ. ನೂಪುರ್ ಶರ್ಮಾ ವಿಷಯದಲ್ಲೂ ಅದೇ ಆಗುತ್ತಿದೆ. ಉದಯಪುರದಲ್ಲಿ ಈ ಜನರು ಕನ್ಹಯ್ಯನನ್ನು ಕೊಂದ ರೀತಿ ತುಂಬಾ ಅಪಾಯಕಾರಿ. ಅವರ ಧರ್ಮವು ಎಷ್ಟು ದುರ್ಬಲವಾಗಿದೆ ಎಂದರೆ ಅದನ್ನು ಉಳಿಸಲು ಅವರು ಇತರರನ್ನು ಕೊಲ್ಲುತ್ತಾರೆ. ಇದು ಅವರ ಧರ್ಮ ಬಲವಾಗಿಲ್ಲ ಎಂಬುದರ ಸಾಕ್ಷಿ. ಇದು ಇಸ್ಲಾಂ ಧರ್ಮಕ್ಕೆ ಒಳ್ಳೆಯದಲ್ಲ.

ಪ್ರಶ್ನೆ: ನೀವು ಸಲ್ಮಾನ್ ರಶ್ದಿಗೆ ಏನಾದರೂ ಸಂದೇಶವನ್ನು ನೀಡಲು ಬಯಸುವಿರಾ?

ಉ: ಈ ರೀತಿಯ ಹಿಂಸೆಯನ್ನು ನಾನು ವಿರೋಧಿಸುತ್ತೇನೆ. ನಾನು ಯಾವಾಗಲೂ ಹಿಂಸೆಯನ್ನು ವಿರೋಧಿಸುತ್ತೇನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.