ETV Bharat / bharat

ನೀರು ಕುಡಿಯಲು ಹೋಗಿ ಕೊಡದಲ್ಲಿ ತಲೆ ಸಿಕ್ಕಿಸಿಕೊಂಡ ಚಿರತೆ... 3 ದಿನಗಳ ಬಳಿಕ ಸಿಕ್ತು ಮುಕ್ತಿ

author img

By

Published : Feb 16, 2022, 10:41 PM IST

ಮೂರು ದಿನಗಳ ಹಿಂದೆ ಚಿರತೆ ರಾತ್ರಿ ನೀರು ಕುಡಿಯಲು ಬಂದಾಗ ಈ ಘಟನೆ ನಡೆದಿದೆ. ಮೂರು ದಿನಗಳಿಂದ ಚಿರತೆ ಪ್ಲಾಸ್ಟಿಕ್​​ ಕೊಡವನ್ನು ಹಾಗೇ ಇಟ್ಟುಕೊಂಡು ನರಾಳಿಡಿದೆ. ಮೂರು ದಿನದ ಹಿಂದೆ ರಸ್ತೆ ಮಧ್ಯದಲ್ಲೇ ಚಿರತೆ ನರಾಡುತ್ತಿದ್ದು, ಆ ದಾರಿಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೋಬ್ಬರು ಚಿರತೆಯ ವಿಡಿಯೋ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಿದ್ದರು.

ಕೊಡದಲ್ಲಿ ತಲೆ ಸಿಕ್ಕಿಸಿಕೊಂಡ ಚಿರತೆ
ಕೊಡದಲ್ಲಿ ತಲೆ ಸಿಕ್ಕಿಸಿಕೊಂಡ ಚಿರತೆ

ಥಾಣೆ( ಮಹಾರಾಷ್ಟ್ರ): ಕಾಡಿನಿಂದ ನಾಡಿಗೆ ಬಂದ ಚಿರತೆ ಮರಿಯೊಂದು ನೀರು ಕುಡಿಯಲು ಹೋಗಿ ಪ್ಲಾಸ್ಟಿಕ್​ ನೀರಿನ ಕೊಡದಲ್ಲಿ ತೆಲೆ ಸಿಕ್ಕಿಸಿಕೊಂಡು ಪರದಾಡಿದ ಘಟನೆ ಬದ್ಲಾಪುರ - ಕರ್ಜಾತ್ ರಸ್ತೆಯ ಗೋರೆಗಾಂವ್ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಚಿರತೆ ಮರಿ ಹೀಗೆ ತಲೆಯನ್ನು ಸಿಕ್ಕಿಸಿಕೊಂಡು ಒದ್ದಾಡುವ ಪರಿಯನ್ನ ನೋಡಿದ ಗ್ರಾಮಸ್ಥರು, ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ಚಿರತೆಯನ್ನ ಹಿಡಿದು ಪ್ಲಾಸ್ಟಿಕ್​ ಕೊಡವನ್ನು ಕತ್ತರಿಸಿ ತೆಗೆದಿದ್ದಾರೆ. ನಂತರ ಚಿರತೆ ಮರಿಗೆ ಸಣ್ಣ ಪುಟ್ಟ ಗಾಯಗಾಳಿಗಿದ್ದು, ಚಿಕಿತ್ಸೆ ನೀಡಿ ಕಾಡಿಗೆ ಮರಳಿ ಬಿಟ್ಟಿದ್ದಾರೆ.

ಮೂರು ದಿನಗಳ ಹಿಂದೆ ಚಿರತೆ ರಾತ್ರಿ ನೀರು ಕುಡಿಯಲು ಬಂದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೂರು ದಿನಗಳಿಂದ ಚಿರತೆ ಪ್ಲಾಸ್ಟಿಕ್​​ ಕೊಡವನ್ನು ಹಾಗೇ ಇಟ್ಟುಕೊಂಡು ನರಾಳಿಡಿದೆ. ಮೂರು ದಿನದ ಹಿಂದೆ ರಸ್ತೆ ಮಧ್ಯದಲ್ಲೇ ಚಿರತೆ ನರಳಾಡುತ್ತಿದ್ದು, ಆ ಮಾರ್ಗವಾಗಿ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಕಣ್ಣಿಗೆ ಬಿದ್ದಿದೆ. ತಕ್ಷಣ ಅವರು ಚಿರತೆಯ ವಿಡಿಯೋ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಿದ್ದರು.

ಇದಾದ ಬಳಿಕ ಈ ವಿಡಿಯೋ ಆಧರಿಸಿ ನಿನ್ನೆ ರಾತ್ರಿಯಿಂದ ಚಿರತೆಗಾಗಿ ಹುಡುಕಾಟ ಆರಂಭಿಸಿದ್ದು, ಕೊನೆಗೂ 3 ದಿನಗಳ ಶೋಧ ಕಾರ್ಯಾಚರಣೆ ಬಳಿಕ ಬದ್ಲಾಪುರ ಸಮೀಪದ ಗೋರೆಗಾಂವ್ ಅರಣ್ಯ ಪ್ರದೇಶದಲ್ಲಿ ಚಿರತೆ ಸಿಕ್ಕಿದ್ದು, ಗ್ರಾಮಸ್ಥರ ಸಹಾಯದಿಂದ ಅಧಿಕಾರಿಗಳು ಚಿಕಿತ್ಸೆ ನೀಡಿ ನಂತರ ಕಾಡಿಗೆ ಮರಳಿ ಬಿಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.