ಪಠಾಣ್‌ಕೋಟ್(ಪಂಜಾಬ್): ಅನಾಮಿಕ ವ್ಯಕ್ತಿಯೋರ್ವ 1 ಕೋಟಿ ರೂ.ಗಳ ಬೇಡಿಕೆಯಿಟ್ಟಿದ್ದು, ಹಣ ನೀಡದಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಕರೆ ಮಾಡಿದ್ದಾನೆ ಎಂದು ವೃದ್ಧರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಕೇಸ್ ದಾಖಲಿಸಿಕೊಂಡು ಕಾರ್ಯಾಚರಣೆ ಆರಂಭಿಸಿದ ಪೊಲೀಸರು, ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಮೊಮ್ಮಗನಿಂದಲೇ ಬೆದರಿಕೆ ಕರೆ: ವೃದ್ಧನಿಗೆ ಕರೆ ಬಂದ ಸಂಖ್ಯೆಯ ಬೆನ್ನು ಹಿಡಿದ ಪೊಲೀಸರು, ಬೆದರಿಕೆ ಕರೆ ಮಾಡಿದ ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆ ತಂದಿದ್ದಾರೆ. ನಂತರ ಠಾಣೆಗೆ ಆಗಮಿಸಿದ ವೃದ್ಧ ತನ್ನ ಮೊಮ್ಮಗನೆ ಕರೆ ಮಾಡಿದ್ದನ್ನು ತಿಳಿದು ಬೇಸರ ವ್ಯಕ್ತಪಡಿಸಿದರು. ದುಡ್ಡಿಗಾಗಿ ಮೊಮ್ಮಗನೇ ತನ್ನ ತಾತನಿಗೆ ಬೆದರಿಕೆ ಕರೆ ಮಾಡಿ ದುಡ್ಡು ಗಳಿಸುವ ಯೋಜನೆ ರೂಪಿಸಿದ್ದ, ಆದರೆ, ಈಗ ಮೊಮ್ಮಗನೇ ಪೊಲೀಸರ ಅತಿಥಿಯಾಗಿದ್ದಾನೆ.
ಈ ಹಿಂದೆಯೂ ಕಳ್ಳತನ ಪ್ರಕರಣ ದಾಖಲಾಗಿತ್ತು: ಈ ಕುರಿತು ಪೊಲೀಸರನ್ನು ಮಾತನಾಡಿ ಸಂಪೂರ್ಣ ತನಿಖೆ ನಡೆಸಿದಾಗ ವೃದ್ಧನ ಮೊಮ್ಮಗ ಎಂದು ತಿಳಿದು ಆಶ್ಚರ್ಯವಾಯಿತು. ಆದರೂ ನಾವು ಅವನನ್ನು ಬಂಧಿಸಿ ಕ್ರಮ ಕೈಗೊಂಡಿದ್ದೇವೆ , ಈ ಹಿಂದೆಯೂ ಕಳ್ಳತನ ಆರೋಪದ ಮೇಲೆ ಪೋಲಿಸರು ಮೊಮ್ಮಗನನ್ನು ಬಂಧಿಸಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: 2020ರ ದೆಹಲಿ ಗಲಭೆ: ಕಲ್ಲು ತೂರಾಟ ಪ್ರಕರಣದಿಂದ ಉಮರ್ ಖಾಲಿದ್, ಖಾಲಿದ್ ಸೈಫಿ ಖುಲಾಸೆ