ETV Bharat / bharat

ಇಂದು ಈ ವರ್ಷದ ಮೊದಲ ಸೂರ್ಯಗ್ರಹಣ: ಇಲ್ಲಿದೆ ಮಾಹಿತಿ - ವರ್ಷದ ಮೊದಲ ಸೂರ್ಯಗ್ರಹಣ

ಭಾರತೀಯ ಕಾಲಮಾನದ ಪ್ರಕಾರ ಏಪ್ರಿಲ್ 30 ಮತ್ತು ಮೇ 1ರ ನಡುವಿನ ರಾತ್ರಿ 12:15 ನಿಮಿಷ ಮತ್ತು 3 ಸೆಕೆಂಡುಗಳಲ್ಲಿ ಭಾಗಶಃ ಸೂರ್ಯಗ್ರಹಣ ಆರಂಭವಾಗಲಿದ್ದು, ರಾತ್ರಿಯಾದ ಕಾರಣ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.

The first solar eclipse of the year will not be visible in India
ಇಂದು ಈ ವರ್ಷದ ಮೊದಲ ಸೂರ್ಯಗ್ರಹಣ: ಇಲ್ಲಿದೆ ಮಾಹಿತಿ
author img

By

Published : Apr 30, 2022, 9:03 AM IST

ನವದೆಹಲಿ: 2022ನೇ ವರ್ಷದ ಮೊದಲ ಸೂರ್ಯಗ್ರಹಣ ಇಂದು ಸಂಭವಿಸಲಿದ್ದು, ಸೂರ್ಯಗ್ರಹಣ ಸಂಭವಿಸುವ ಸಮಯ ಭಾರತದಲ್ಲಿ ರಾತ್ರಿಯಿರುವ ಕಾರಣದಿಂದ ಸೂರ್ಯಗ್ರಹಣ ಗೋಚರಿಸುವುದಿಲ್ಲ ಎಂದು ತಿಳಿದು ಬಂದಿದೆ. ಈಗ ಸಂಭವಿಸಲಿರುವ ಸೂರ್ಯಗ್ರಹಣ ಭಾಗಶಃ ಸೂರ್ಯ ಗ್ರಹಣವಾಗಿದೆ. ಭಾರತೀಯ ಕಾಲಮಾನದ ಪ್ರಕಾರ, ಸೂರ್ಯಗ್ರಹಣವು ಏಪ್ರಿಲ್ 30 ಮತ್ತು ಮೇ 1ರ ನಡುವಿನ ರಾತ್ರಿ 12:15 ನಿಮಿಷ ಮತ್ತು 3 ಸೆಕೆಂಡುಗಳಲ್ಲಿ ಪ್ರಾರಂಭವಾಗಲಿದ್ದು, ರಾತ್ರಿ 2:11 ನಿಮಿಷ ಮತ್ತು 2 ಸೆಕೆಂಡುಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪುತ್ತದೆ ಎಂದು ಖಗೋಳ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬರುವುದರಿಂದ ಸೂರ್ಯಗ್ರಹಣ ಉಂಟಾಗುತ್ತದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಸಂಭವಿಸಲಿರುವ ಭಾಗಶಃ ಸೂರ್ಯಗ್ರಹಣದಲ್ಲಿ ಶೇಕಡಾ 63.9ರಷ್ಟು ಸೂರ್ಯನು ಮರೆಯಾಗುತ್ತಾನೆ. ಭಾರತದ ಕಾಲಮಾನದ ಪ್ರಕಾರ ಮೇ 1ರ ಬೆಳಗ್ಗೆ 4.07 ನಿಮಿಷ 1 ಸೆಕೆಂಡ್​ನಲ್ಲಿ ಗ್ರಹಣ ಕೊನೆಗೊಳ್ಳುತ್ತದೆ. ಈ ಸೂರ್ಯಗ್ರಹಣವು ದಕ್ಷಿಣ ಅಮೆರಿಕದ ದಕ್ಷಿಣ ಭಾಗ, ಉತ್ತರ ಅಮೆರಿಕ, ದಕ್ಷಿಣ ಪೆಸಿಫಿಕ್ ಮಹಾಸಾಗರ ಮತ್ತು ದಕ್ಷಿಣ ಅಟ್ಲಾಂಟಿಕ್ ಸಾಗರ ಪ್ರದೇಶದಲ್ಲಿ ಕಂಡು ಬರುತ್ತದೆ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 'ಖುದ್ಸ್ ಡೇ ರ್‍ಯಾಲಿ': 2 ಹೊಸ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರದರ್ಶಿಸಿದ ಇರಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.