ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಗೆ ತೆರೆಯ ಹಿಂದೆ ಸದ್ದಿಲ್ಲದೆ ತಯಾರಿ ನಡೆಯುತ್ತಿದೆ. ಎರಡು ಬಾರಿ ತಮಿಳುನಾಡು ಆಡಳಿತ ನಡೆಸಿರುವ ಎಐಎಡಿಎಂಕೆ ಪಕ್ಷವು ಅಧಿಕಾರ ಉಳಿಸಿಕೊಳ್ಳಲು ತೀವ್ರ ಹೋರಾಟ ನಡೆಸುತ್ತಿದ್ದರೆ. ಇತ್ತ ವಿರೋಧ ಪಕ್ಷ ಡಿಎಂಕೆಯು ಪ್ರತಿಸ್ಪರ್ಧೆಯೊಡ್ಡಿ ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೇರುವ ಸವಾಲು ಒಡ್ಡಿದೆ. ಇದಕ್ಕಾಗಿ ಹಳೆಯ ಮುಖಗಳನ್ನೇ ಮತ್ತೆ ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿದೆ.
ಇದು ಎರಡು ದ್ರಾವಿಡ ಪಕ್ಷಗಳಿಗೆ ಮಾಡು ಇಲ್ಲವೇ ಮಡಿ ಎಂಬ ಯುದ್ಧವಾಗಿದೆ. ಸಾಮಾಜಿಕ ನ್ಯಾಯದ ಹಾದಿ ಅನುಸರಿಸಲು ಹೆಸರುವಾಸಿಯಾದ ರಾಜ್ಯವು ಭವಿಷ್ಯದ ರಾಜಕೀಯ ಹೋರಾಟ ದಾರಿಗೆ ನಿರ್ಣಾಯಕವಾಗಲಿದೆ.
ಚುನಾವಣಾ ಕಣದಲ್ಲಿ ಡಿಎಂಕೆಯ ಎಂ.ಕೆ ಸ್ಟಾಲಿನ್ ಮತ್ತು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಜೊತೆಗೆ ನಟ ಕಮಲ್ ಹಾಸನ್ ಸಹ ಈ ಬದಲಾವಣೆ ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ. 2021ರ ವಿಧಾನಸಭೆ ಚುನಾವಣೆ ದಿನಾಂಕ ಶೀಘ್ರದಲ್ಲೇ ಪ್ರಕಟವಾಗಲಿದ್ದು, ಈಗಾಗಲೇ ಚುನಾವಣಾ ಜ್ವರ ಕೂಡಾ ಹೆಚ್ಚಾಗುತ್ತಿದೆ.
ಎಐಎಡಿಎಂಕೆಯ ನಾಯಕ ಪಳನಿಸ್ವಾಮಿ ಪ್ರತಿಕೂಲ ಸಮಯದಲ್ಲಿ ಸಿಎಂ ಸ್ಥಾನಕ್ಕೇರಿ 4 ವರ್ಷ ಯಶಸ್ವಿಯಾಗಿ ಆಡಳಿತ ನಡೆಸಿದ್ದಾರೆ. ಇದು ಪಕ್ಷಕ್ಕೆ ಮುಖ್ಯ ಶಕ್ತಿ ಸಿಕ್ಕಂತಾಗಿದೆ. ಆದರೆ ಎಐಎಡಿಎಂಕೆಯನ್ನು ಬಿಜೆಪಿ ಬಳಿಸಿಕೊಂಡು ಕೇಸರಿ ಪಸರಿಸಲು ಸಿದ್ಧತೆ ನಡೆದಿದೆ. ಆದರೆ, ಇದುವರೆಗೆ ಬಿಜೆಪಿ ಪಡೆದಿರುವುದು ಕೇವಲ ಶೇ.2ರಷ್ಟು ಮತಗಳನ್ನು ಮಾತ್ರ. ಹೀಗಿದ್ದರೂ ಅದರ ಮಹಅತ್ವಾಕಾಂಕ್ಷೆಗೆ ಯಾವುದೇ ಮಿತಿಯಿಲ್ಲ ಮತ್ತು ಡಿಎಂಕೆಯನ್ನು ಅಧಿಕಾರದಿಂದ ದೂರವಿಡುವಂತೆ ಮಾಡುವುದೇ ಅಥವಾ ದುರ್ಬಲಗೊಳಿಸುವುದೇ ಅದರ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.
ಕೇಸರಿ ಬ್ರಿಗೇಡ್ ಪ್ರಕಾರ ದ್ರಾವಿಡ ಪಾರ್ಟಿಗಳ ವಿಭಜಿಸುವುದರಲ್ಲೇ ಬಿಜೆಪಿಯ ಜಯ ಅಡಗಿದೆ.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಹೊರತುಪಡಿಸಿ ಸಹ ನಾಲ್ವರು ಸ್ಪರ್ಧಿಗಳು ಕಣದಲ್ಲಿದ್ದಾರೆ. ಡಿಎಂಕೆ ಪಕ್ಷದ ಎಂ.ಕೆ ಸ್ಟಾಲಿನ್ ಸ್ವಲ್ಪದರಲ್ಲೇ ಸಿಎಂ ಆಗುವ ಅವಕಾಶ ಕಳೆದುಕೊಂಡು ಎಐಎಡಿಎಂಕೆಗೆ ಅವಕಾಶ ಮಾಡಿಕೊಟ್ಟರು.
ಎಐಎಡಿಎಂಕೆ ಮತ್ತು ಡಿಎಂಕೆ ನಡುವಿನ ಮತ ಹಂಚಿಕೆಯ ವ್ಯತ್ಯಾಸವು 2016 ರ ವಿಧಾನಸಭಾ ಸಮೀಕ್ಷೆಯಲ್ಲಿ ಕೇವಲ 1.1% ನಷ್ಟಿತ್ತು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 39 ಸ್ಥಾನಗಳಲ್ಲಿ 38 ಸ್ಥಾನಗಳನ್ನು ಡಿಎಂಕೆ 52.39 ರಷ್ಟು ಮತಹಂಚಿಕೆ ಮೂಲಕ ಗೆದ್ದುಕೊಂಡಿತು. ಈ ಮೂಲಕ ಎಐಎಡಿಎಂಕೆಗೆ ಕೇವಲ 1 ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಪ್ರಸ್ತುತ ಅಧಿಕಾರದಲ್ಲಿರುವ ಎಐಎಡಿಎಂಕೆಗೆ ಈ ಸಮಯ ಹೆಚ್ಚು ಹಿಡಿತ ಸಾಧಿಸಲು ಸಹಾಯವಾಗಲಿದೆ. ಇದೇ ರೀತಿ ಲೋಕಸಭೆಯಲ್ಲಿ ಶೇ.5ರಷ್ಟು ಮತ ಪಡೆದಿದ್ದ ಕಮಲ್ ಹಾಸನ್ ಪಕ್ಷವು ಭ್ರಷ್ಟಾಚಾರ ವಿರೋಧಿ ಎಂಬ ಹಲಗೆ ಹಿಡಿದು ಪ್ರಚಾರ ಕಣಕ್ಕೆ ಧುಮುಕಿದೆ.
ಇನ್ನೋರ್ವ ನಟ ರಜನಿಕಾಂತ್ ರಾಜಕೀಯ ಪ್ರವೇಶದ ಸೂಚನೆ ನೀಡಿ ಬಳಿಕ ಅನಾರೋಗ್ಯ ಸಮಸ್ಯೆಯಿಂದ ದೂರ ಉಳಿದಿರುವುದು ಬಿಜೆಪಿಯ ಮತಗಳಿಕೆಗೆ ಹೊಡೆತ ಬಿದ್ದಂತಾಗಿದೆ.
ಆದರೆ ಎಐಎಡಿಎಂಕೆಗೆ ಉತ್ಸಾಹ ತುಂಬಲು ಹಾಗೂ ಅದರಲ್ಲಿ ನ್ಯೂನತೆಗಳ ನಿವಾರಿಸಲು ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಮರಳಿರುವುದು ಪಕ್ಷಕ್ಕೆ ಚೈತನ್ಯ ತಂದಿದೆ.
ಮೈತ್ರಿಕೂಟಗಳೇ ನಿರ್ಣಾಯಕ
ಮೈತ್ರಿ ತಮಿಳುನಾಡು ಚುನಾವಣೆಯಲ್ಲಿ ಗೆಲುವಿನ ಕೀಲಿಯನ್ನು ಹೊಂದಿದೆ. ಕಾಂಗ್ರೆಸ್, ಸಿಪಿಐ (ಎಂ), ಸಿಪಿಐ, ವಿದೂಲೈ ಚಿರುಥೈಗಲ್ ಕಚ್ಚಿ (ವಿಸಿಕೆ) ದಲಿತ ಪಕ್ಷ, ವೈಕೊದ ಎಂಡಿಎಂಕೆ, ಐಯುಎಂಎಲ್ ಮತ್ತು ಇತರರನ್ನು ಒಳಗೊಂಡ ಮೈತ್ರಿಗೆ ಡಿಎಂಕೆ ಮುಖ್ಯಸ್ಥವಾಗಿದ್ದರೆ. ಎಐಎಡಿಎಂಕೆಯು ಎನ್‌ಡಿಎ ಅಡಿಯಲ್ಲಿ ಬಿಜೆಪಿ, ಒಬಿಸಿ ವನ್ನಿಯಾರ್ ಪಿಎಂಕೆ, ನಟ ವಿಜಯಕಾಂತ್ ಅವರ ಡಿಎಂಡಿಕೆ, ಜಿಕೆ ವಾಸನ್ ಅವರ ತಮಿಳು ಮನಿಲಾ ಕಾಂಗ್ರೆಸ್ (ಟಿಎಂಸಿ) ಜೊತೆ ಮೈತ್ರಿಯಡಿ ಚುನಾವಣೆ ಎದುರಿಸಲಿದೆ.