ETV Bharat / bharat

ಬಿಹಾರದಲ್ಲಿ ನಕಲಿ ಮದ್ಯ ಸೇವನೆ ಪ್ರಕರಣ: ಮೃತರ ಸಂಖ್ಯೆ 37ಕ್ಕೆ ಏರಿಕೆ - ಹೂಚ್ ದುರಂತ

ಬಿಹಾರದಲ್ಲಿ ವಿಷಪೂರಿತ ಮದ್ಯ ಕುಡಿದು ಸಾವನ್ನಪ್ಪಿರುವವರ ಸಂಖ್ಯೆ 26 ಕ್ಕೆ ಏರಿಕೆಯಾಗಿದ್ದು, ಈ ಕುರಿತು ತನಿಖೆ ಮುಂದುವರೆದಿದೆ ಎಂದು ಎಸ್​ಪಿ ಕಾಂತೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

hooch tragedy
ನಕಲಿ ಮದ್ಯ ಸೇವನೆ ಪ್ರಕರಣ
author img

By

Published : Apr 17, 2023, 2:25 PM IST

Updated : Apr 17, 2023, 8:47 PM IST

ಮೋತಿಹಾರಿ (ಬಿಹಾರ): ಕಳೆದ ಮೂರು ದಿನದ ಹಿಂದೆ ಬಿಹಾರದ ಚಂಪಾರಣ್‌ನಲ್ಲಿ ಶಂಕಿತ ನಕಲಿ ಮದ್ಯ ಸೇವಿಸಿ 22 ಮಂದಿ ಸಾವನ್ನಪ್ಪಿದ್ದರು. ಇದೀಗ ಮತ್ತೆ ಚಿಕಿತ್ಸೆ ಫಲಕಾರಿಯಾದೇ ಮತ್ತಷ್ಟು ಜನ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 37 ಕ್ಕೆ ತಲುಪಿದೆ. ಜೊತೆಗೆ, ಅಸ್ವಸ್ಥಗೊಂಡ ಸುಮಾರು 20 ಕ್ಕೂ ಅಧಿಕ ಜನ ಜಿಲ್ಲಾದ್ಯಂತ ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಎಸ್​ಪಿ ಕಾಂತೇಶ್ ಕುಮಾರ್ ಮಿಶ್ರಾ, "ಕರ್ತವ್ಯಲೋಪ ಆರೋಪದ ಮೇಲೆ ತುರ್ಕೌಲಿಯಾ, ಹರಸಿದ್ಧಿ, ಸುಗೌಲಿ ಮತ್ತು ಪಹಾರ್‌ಪುರ ಪೊಲೀಸ್ ಠಾಣೆಗಳ ಎಸ್‌ಎಚ್‌ಒಗಳನ್ನು ಅಮಾನತುಗೊಳಿಸಲಾಗಿದೆ. ಒಂಬತ್ತು ಚೌಕಿದಾರ್‌ಗಳು ಸೇರಿದಂತೆ 11 ಪೊಲೀಸ್ ಸಿಬ್ಬಂದಿ ವಿರುದ್ಧ ಭಾನುವಾರ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಜಿಲ್ಲಾ ಪೊಲೀಸರು ಇದುವರೆಗೆ ಐದು ಪ್ರಕರಣಗಳನ್ನು ದಾಖಲಿಸಿದ್ದಾರೆ, ತನಿಖೆ ಮುಂದುವರೆಯುತ್ತಿದೆ. ಕಳೆದ ಹತ್ತು ಗಂಟೆಗಳಲ್ಲಿ ಮತ್ತೆ ನಾಲ್ವರು ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 26 ಕ್ಕೆ ಏರಿದೆ. ಅಲ್ಲದೇ, ಘಟನೆಯ ನಂತರ ಸಂಬಂಧಿಸಿದ ಪೊಲೀಸ್ ಠಾಣೆಗಳ ಐದು ಸ್ಟೇಷನ್ ಹೌಸ್ ಅಧಿಕಾರಿಗಳನ್ನು ಸಹ ಅಮಾನತುಗೊಳಿಸಲಾಗಿದೆ" ಎಂದು ಹೇಳಿದರು.

ಕೆಲವು ಸ್ಥಳೀಯ ಮೂಲಗಳು ದುರಂತದಲ್ಲಿ ಉಂಟಾದ ಸಾವಿನ ಸಂಖ್ಯೆಯನ್ನು ಮರೆಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಆರೋಪಿಸಿದೆ. ಏಕೆಂದರೆ, ಕೆಲ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ಅಥವಾ ಅಧಿಕಾರಿಗಳ ಗಮನಕ್ಕೆ ತಾರದೇ ಮೃತರ ಕುಟುಂಬಗಳು ಅಂತ್ಯಸಂಸ್ಕಾರ ಮಾಡಿದ್ದಾರೆ. ಆಡಳಿತದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಮೃತರನ್ನು ಧ್ರುಪ್ ಪಾಸ್ವಾನ್ (48), ಅಶೋಕ್ ಪಾಸ್ವಾನ್ (44), ರಾಮೇಶ್ವರ್ ರಾಮ್ (35) ಮತ್ತು ಅವರ ತಂದೆ ಮಹೇಂದ್ರ ರಾಮ್, ಚೋಟು ಕುಮಾರ್ (19), ವಿಂದೇಶ್ವರಿ ಪಾಸ್ವಾನ್, ಜೋಖು ಸಿಂಗ್ ಎಂದು ಗುರುತಿಸಲಾಗಿದೆ.

ಲಕ್ಷ್ಮೀಪುರ ಗ್ರಾಮದ ಅಭಿಷೇಕ್ ಯಾದವ್ (22), ಗೋಕುಲ, ಜಾಸಿನ್‌ಪುರ, ಧ್ರುವ ಯಾದವ್ (23), ಜಸಿನ್‌ಪುರದ ಧ್ರುವ ಯಾದವ್ (23), ಸಾಹ್ನಿ (32) ಮತ್ತು ಅವರ ತಂದೆ ಗಣೇಶ್ ಪಾಸ್ವಾನ್, ಲಕ್ಷ್ಮಣ್ ಮಾಂಝಿ (33), ನರೇಶ್ ಪಾಸ್ವಾನ್ (24) ತುರ್ಕೌಲಿಯಾ, ಸೋನಾ ಲಾಲ್ ತುರ್ಕೌಲಿಯದ ಪಟೇಲ್ (48) ಮತ್ತು ಪರಮೇಂದ್ರ ದಾಸ್ ಮತ್ತು ನವಲ್ ದಾಸ್ ಎಂದು ಗುರುತಿಸಲಾಗಿದೆ.

ಜಿಲ್ಲೆಯಲ್ಲಿ ಅಕ್ರಮ ಮದ್ಯದ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಪೂರ್ವ ಚಂಪಾರಣ್ ಪೊಲೀಸರು 80 ಜನರನ್ನು ಬಂಧಿಸಿದ್ದಾರೆ. ಏಪ್ರಿಲ್ 15 ರಂದು ಮೊದಲ ಬಾರಿಗೆ ಮೋತಿಹಾರಿಯ ವಿವಿಧ ಭಾಗಗಳ 600 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ ವೇಳೆ ಭಾರಿ ಪ್ರಮಾಣದ ನಕಲಿ ಮದ್ಯ ಮತ್ತು ಇತರ ರಾಸಾಯನಿಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. "ಪೊಲೀಸರು ಬರೋಬ್ಬರಿ 370 ಲೀಟರ್ ಮದ್ಯ, 50 ಲೀಟರ್ ಸ್ಪಿರಿಟ್ ಮತ್ತು 1,150 ಲೀಟರ್ ನಕಲಿ ಮದ್ಯ ತಯಾರಿಕೆಯಲ್ಲಿ ಬಳಸಲಾದ ಇತರೆ ರಾಸಾಯನಿಕಗಳನ್ನು ವಶಪಡಿಸಿಕೊಂಡಿದ್ದಾರೆ" ಎಂದು ಆಡಳಿತವು ನಿನ್ನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ವಿಷಪೂರಿತ ಮದ್ಯ ಸೇವಿಸಿ 8 ಜನರ ಸಾವು.. ಬಿಹಾರದಲ್ಲಿ ಮತ್ತೆ ದುರಂತ

ಇನ್ನು ಪ್ರತಿಪಕ್ಷ ಬಿಜೆಪಿ ಮೋತಿಹಾರಿಯಲ್ಲಿ ನಡೆದ ಹೂಚ್ ದುರಂತವನ್ನು "ನಿತೀಶ್ ಕುಮಾರ್ ಸರ್ಕಾರದ ಸಾಮೂಹಿಕ ಹತ್ಯೆ" ಎಂದು ಬಣ್ಣಿಸಿದೆ. ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ಕುಮಾರ್ ಸಿನ್ಹಾ ಅವರು ಭಾನುವಾರ ರಾಜ್ಯ ಸರ್ಕಾರವು "ಜೆಡಿಯು ಮತ್ತು ಆರ್‌ಜೆಡಿಯೊಂದಿಗೆ ಸಂಬಂಧ ಹೊಂದಿರುವ ಮದ್ಯ ಮಾಫಿಯಾಗಳನ್ನು ರಕ್ಷಿಸುತ್ತಿದೆ" ಎಂದು ಆರೋಪಿಸಿದ್ದಾರೆ.

Last Updated : Apr 17, 2023, 8:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.