ಬಾರಾಮುಲ್ಲಾ (ಜಮ್ಮು-ಕಾಶ್ಮೀರ): ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಕೌನ್ಸಿಲರ್ ಇಂದು ಮೃತಪಟ್ಟಿದ್ದಾರೆ.
ನಿನ್ನೆ ಮಧಾಹ್ನ ಬಾರಾಮುಲ್ಲಾದ ಸೋಪೋರ್ ಪ್ರದೇಶದ ಬಿಡಿಸಿ (ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್) ಅಧ್ಯಕ್ಷೆ ಫರೀದಾ ಖಾನ್ ಅವರನ್ನು ಗುರಿಯಾಗಿಸಿ ಪುರಸಭೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ಘಟನೆಯಲ್ಲಿ ಓರ್ವ ಕೌನ್ಸಿಲರ್ ಮೃತಪಟ್ಟಿದ್ದು, ಓರ್ವ ಪೊಲೀಸ್ ಹುತಾತ್ಮರಾಗಿದ್ದರು. ಫರೀದಾ ಖಾನ್ ಅವರು ಅಪಾಯದಿಂದ ಪಾರಾಗಿದ್ದರು.
ಇದನ್ನೂ ಓದಿ: ಉಗ್ರರ ದಾಳಿಗೆ ಕಾಶ್ಮೀರದಲ್ಲಿ ಕೌನ್ಸಿಲರ್ ಸಾವು, ಪೊಲೀಸ್ ಹುತಾತ್ಮ
ಇನ್ನೋರ್ವ ಕೌನ್ಸಿಲರ್ ಗಾಯಗೊಂಡಿದ್ದು, ಅವರನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಹತ್ಯೆಗೀಡಾದ ಕೌನ್ಸಿಲರ್ ಹಾಗೂ ಹುತಾತ್ಮ ಪೊಲೀಸ್ಗೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗಿದೆ.