ಥಾಣೆ(ಮಹಾರಾಷ್ಟ್ರ): ಸಿಕ್ಕೀಂನ ಆಳವಾದ ಕಣಿವೆಯಲ್ಲಿ ಕಾರು ಅಪಘಾತಕ್ಕೀಡಾಗಿ ಥಾಣೆಯ ಐದು ಜನರು ಸಾವಿಗೀಡಾಗಿದ್ದಾರೆ. ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
ಪುನ್ಮಿಯಾ ಕುಟುಂಬ ಥಾಣೆಯ ಸಿವಿಲ್ ಆಸ್ಪತ್ರೆ ಎದುರು ವಾಸವಾಗಿತ್ತು. ಕುಟುಂಬದ ನಾಲ್ವರು ಗುರುವಾರ ಸಿಕ್ಕೀಂ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿ ಅವರು ಕಾರನ್ನು ಬಾಡಿಗೆಗೆ ಪಡೆದು ಸಂಚರಿಸುವಾಗ ಕಾರು ಕಮರಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ.
ಅಪಘಾತ ಎಷ್ಟು ಗಂಭೀರವಾಗಿದೆ ಎಂದರೆ ಕಾರಿನಲ್ಲಿದ್ದ ಐವರೂ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಎಲ್ಲರ ಮೃತದೇಹಗಳನ್ನು ನಾಳೆ ಥಾಣೆಗೆ ತರಲಾಗುವುದು ಎಂದು ಜೈನ್ ಸಾಮಾಜಿಕ ಕಾರ್ಯಕರ್ತ ನರೇಂದ್ರ ಜೈನ್ ತಿಳಿಸಿದ್ದಾರೆ.
ಸುರೇಶ್ ಪನ್ನಲಾಲ್ಜಿ ಪುನ್ಮಿಯಾ ಅವರೊಂದಿಗೆ ಅವರ ಪತ್ನಿ ತೋರನ್, ಮಗಳು ಹಿರಾಲ್ (14) ಮತ್ತು ಮಗಳು ದೇವಾಂಶಿ (10) ಮತ್ತು ಜಯನ್ ಅಮಿತ್ ಪರ್ಮಾರ್ ಅವರೊಂದಿಗೆ ಥಾಣೆಯ ಇತರ ಪ್ರವಾಸಿಗರು ಸಿಕ್ಕೀಂಗೆ ಭೇಟಿ ನೀಡಿದ್ದರು.
ಇದನ್ನೂ ಓದಿ: ಶೈಕ್ಷಣಿಕ ವರ್ಷದಿಂದ ಶಾಲಾ ಕಾಲೇಜುಗಳಲ್ಲಿ ಪಠ್ಯವಾಗಿ ಯೋಗ: ಸಿಎಂ