ETV Bharat / bharat

ಮದುವೆಗೆ ಕೇವಲ 24 ಗಂಟೆ ಬಾಕಿ.. ಯುವಕನ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ವಧು - ಯುವಕನ ಕಿರುಕುಳದಿಂದ ವಧು ಆತ್ಮಹತ್ಯೆ

ಯುವಕನ ಕಿರುಕುಳದಿಂದಾಗಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ನಾರಾಯಣಪೇಟೆಯಲ್ಲಿ ನಡೆದಿದೆ.

BRIDE COMMITS SUICIDE
BRIDE COMMITS SUICIDE
author img

By

Published : May 3, 2022, 5:11 PM IST

Updated : May 3, 2022, 6:09 PM IST

ನಾರಾಯಣಪೇಟೆ(ತೆಲಂಗಾಣ): ಪ್ರೀತಿಯ ಹೆಸರಿನಲ್ಲಿ ಯುವಕನಿಂದ ಕಿರುಕುಳಕ್ಕೊಳಗಾಗಿರುವ ಯುವತಿಯೊಬ್ಬಳು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತೆಲಂಗಾಣದ ನಾರಾಯಣಪೇಟೆಯಲ್ಲಿ ಈ ಘಟನೆ ನಡೆದಿದೆ. ಘಟನೆ ಬೆನ್ನಲ್ಲೇ ಯುವಕ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.

ನಾರಾಯಣಪೇಟೆಯ ಮುಕ್ತಲ್​ ಪುರಸಭೆ ವ್ಯಾಪ್ತಿಯ ಚಂದಾಪುರದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಪದ್ಮಮ್ಮ ಮತ್ತು ವೆಂಕಟಯ್ಯ ದಂಪತಿಯ ಎರಡನೇ ಪುತ್ರಿ ಭೀಮೇಶ್ವರಿ(19) ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ಕಳೆದ 10 ದಿನಗಳ ಹಿಂದೆ ಇದೇ ಗ್ರಾಮದ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಲಾಗಿತ್ತು. ಅಂದುಕೊಂಡಂತೆ ಎಲ್ಲವೂ ಆಗಿದ್ದರೆ ಇಂದು ಸಪ್ತಪದಿ ತುಳಿದು, ಹತ್ತಾರು ಭರವಸೆಗಳೊಂದಿಗೆ ಹೊಸ ಜೀವನ ಸಹ ಆರಂಭವಾಗಬೇಕಾಗಿತ್ತು.

ಇದನ್ನೂ ಓದಿ: 'ಮೋದಿ ಒನ್ಸ್​ ಮೋರ್'​​.. ಬರ್ಲಿನ್​​ನಲ್ಲಿ ಭಾರತೀಯ ಸಮುದಾಯದವರಿಂದ ಘೋಷಣೆ!

ಆದರೆ, ಯುವಕನೊಬ್ಬನ ಕಿರುಕುಳದಿಂದಾಗಿ ಸೋಮವಾರ ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾಯುವುದಕ್ಕೂ ಮುಂಚಿತವಾಗಿ ಭೀಮೇಶ್ವರಿ ಆತ್ಮಹತ್ಯೆ ಪತ್ರ ಬರೆದಿಟ್ಟಿದ್ದು, ಅದರಲ್ಲಿ ತಾವು ಚಂದಾಪುರದ ನರಸಿಂಹುಲು ಎಂಬಾತನಿಂದ ಪ್ರೀತಿಯ ಹೆಸರಿನಲ್ಲಿ ಕಿರುಕುಳ ಅನುಭವಿಸಿರುವ ವಿಷಯ ಹೊರಹಾಕಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಭೀಮೇಶ್ವರಿ ತಾಯಿ ದೂರು ದಾಖಲು ಮಾಡಿದ್ದಾರೆ. ಘಟನೆ ಬೆನ್ನಲ್ಲೇ ಆರೋಪಿ ಪರಾರಿಯಾಗಿದ್ದಾನೆ.

Last Updated : May 3, 2022, 6:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.