ETV Bharat / bharat

'ಲೋಕಸಭೆ ಕೆಲಸ ಮಾಡಲು ಆಕರ್ಷಕ ತಾಣವಲ್ಲ ಅಂತ ಯಾರು ಹೇಳ್ತಾರೆ?' ತರೂರ್‌ಗೆ ನೆಟ್ಟಿಗರ ಚಾಟಿ, ಕ್ಷಮೆಯಾಚನೆ

ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್​ ಪಕ್ಷದ ಹಿರಿಯ ಮುಖಂಡ ಶಶಿ ತರೂರ್​​ ಅವರು ಮಹಿಳಾ ಸಂಸದರೊಂದಿಗೆ ಸೆಲ್ಫಿ ತೆಗೆದು ಟ್ವಿಟರ್​ನಲ್ಲಿ ಪೋಸ್ಟ್‌ ಮಾಡಿ ಟೀಕೆಗೊಳಗಾಗಿದ್ದಾರೆ. ಈ ಬೆನ್ನಲ್ಲೇ ಅವರು ಕ್ಷಮೆಯಾಚಿಸಿದ್ದಾರೆ.

Shashi Tharoor Selfie with Women MPs
Shashi Tharoor Selfie with Women MPs
author img

By

Published : Nov 29, 2021, 4:55 PM IST

ನವದೆಹಲಿ: ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗಿದೆ. ಇದರ ನಡುವೆ, ಕಾಂಗ್ರೆಸ್ ಹಿರಿಯ ಸಂಸದ ಶಶಿ ತರೂರ್ ಅವರು​​​ ಮಹಿಳಾ ಸಂಸದರ ಜೊತೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ, ಟೀಕೆಗೊಳಗಾಗಿದ್ದಾರೆ.

  • The whole selfie thing was done (at the women MPs' initiative) in great good humour & it was they who asked me to tweet it in the same spirit. I am sorry some people are offended but i was happy to be roped in to this show of workplace camaraderie. That's all this is. https://t.co/MfpcilPmSB

    — Shashi Tharoor (@ShashiTharoor) November 29, 2021 " class="align-text-top noRightClick twitterSection" data=" ">

ಮಹಿಳಾ ಸಂಸದರಾದ ಸುಪ್ರಿಯಾ ಸುಳೆ, ಪ್ರಣೀತ್ ಕೌರ್​, ತಮಿಳ್ಸಾಚಿ, ಮಿಮಿ ಚಕ್ರವರ್ತಿ, ನುಸ್ರತ್​ ಜಹಾನ್​, ಜ್ಯೋತಿ ಮಣಿ ಜೊತೆ ಸೆಲ್ಫಿ ತೆಗೆದುಕೊಂಡಿದ್ದ ಶಶಿ ತರೂರ್,​ ತಮ್ಮ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದರು. ಜೊತೆಗೆ, 'ಕೆಲಸ ಮಾಡುವ ಜಾಗ ಸಂಸತ್ತು ಆಕರ್ಷಕವಲ್ಲ ಎಂದು ಹೇಳಿದವರು ಯಾರು?' ಎಂಬ ಶೀರ್ಷಿಕೆಯನ್ನು ನೀಡಿದ್ದರು. ಹೀಗಾಗಿ, ನೆಟ್ಟಿಗರು ಸೇರಿದಂತೆ ಹಲವರಿಂದ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿ: ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಅಶಿಸ್ತು: ರಾಜ್ಯಸಭೆಯ 12 ವಿಪಕ್ಷ ಸಂಸದರು ಅಮಾನತು

ಕ್ಷಮೆಯಾಚನೆ

ತಮ್ಮ ಟ್ವಿಟರ್ ಪೋಸ್ಟ್‌ಗೆ ದೊಡ್ಡ ಮಟ್ಟದ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಶಶಿ ತರೂರ್, ಇದೀಗ ಕ್ಷಮೆಯಾಚನೆ ಮಾಡಿದ್ದಾರೆ. ಒಳ್ಳೆಯ ಭಾವನೆಯಿಂದ ಮಹಿಳಾ ಸಂಸದರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದೇನೆ. ಅವರು ಟ್ವಿಟರ್​​ನಲ್ಲಿ ಹಾಕಿ ಎಂದಿರುವುದಕ್ಕಾಗಿ ನಾನು ಶೇರ್ ಮಾಡಿಕೊಂಡಿದ್ದೆ. ಇದರಿಂದ ಕೆಲವರಿಗೆ ನೋವಾಗಿದ್ದು, ಕ್ಷಮೆ ಕೇಳುತ್ತೇನೆ. ನಾವು ಕೆಲಸ ಮಾಡುವ ಜಾಗ ಸೌಹಾರ್ದತೆಯಿಂದ ಕೂಡಿದೆ ಎಂದು ತಿದ್ದಿ ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.