ಡೆಹ್ರಾಡೂನ್(ಉತ್ತರಾಖಂಡ): ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ನಾಲ್ಕು ವರ್ಷಗಳ ಕಾಲ ರಾಜ್ಯದ ಸೇವೆ ಸಲ್ಲಿಸಲು ಪಕ್ಷ ನನಗೆ ಸುವರ್ಣಾವಕಾಶ ನೀಡಿತು. ಇಂತಹ ಅವಕಾಶ ನನಗೆ ಸಿಗುತ್ತದೆ ಎಂದು ಎಂದಿಗೂ ಯೋಚಿಸಿರಲಿಲ್ಲ. ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸುವ ಅಧಿಕಾರವನ್ನು ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳಲಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು. ಸಣ್ಣ ಹಳ್ಳಿಯಲ್ಲಿ ಹುಟ್ಟಿದ ನನಗೆ ಬಿಜೆಪಿ ಮಾತ್ರ ಇಂತಹ ಅವಕಾಶ ನೀಡಲು ಸಾಧ್ಯ. ಅದಕ್ಕಾಗಿ ನಾನು ಋಣಿಯಾಗಿರುತ್ತೇನೆ ಎಂದು ರಾವತ್ ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡ್: ಸಿಎಂ ಸ್ಥಾನಕ್ಕೆ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ
ಇದೇ ವೇಳೆ ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದೀರಿ ಎಂದು ಸುದ್ದಿಗಾರರು ಕೇಳಿರುವ ಪ್ರಶ್ನೆಗೆ ಉತ್ತರ ನೀಡಲು ರಾವತ್ ಹಿಂದೇಟು ಹಾಕಿದ್ದು, ಇದಕ್ಕೆ ದೆಹಲಿಯವರ(ಬಿಜೆಪಿ ಹೈಕಮಾಂಡ್) ಬಳಿ ಉತ್ತರ ಕೇಳಿ ಎಂದಿದ್ದಾರೆ.
-
I can see a change in power happening. Even the BJP's central leadership has admitted that its present govt in the State could not do much. No matter who they bring now they will not come back to power in 2022: Former Uttarakhand CM and Congress leader Harish Rawat pic.twitter.com/xk1T0ye93w
— ANI (@ANI) March 9, 2021 " class="align-text-top noRightClick twitterSection" data="
">I can see a change in power happening. Even the BJP's central leadership has admitted that its present govt in the State could not do much. No matter who they bring now they will not come back to power in 2022: Former Uttarakhand CM and Congress leader Harish Rawat pic.twitter.com/xk1T0ye93w
— ANI (@ANI) March 9, 2021I can see a change in power happening. Even the BJP's central leadership has admitted that its present govt in the State could not do much. No matter who they bring now they will not come back to power in 2022: Former Uttarakhand CM and Congress leader Harish Rawat pic.twitter.com/xk1T0ye93w
— ANI (@ANI) March 9, 2021
ರಾವತ್ ರಾಜೀನಾಮೆ ನೀಡುತ್ತಿದ್ದಂತೆ ವಾಗ್ದಾಳಿ ನಡೆಸಿರುವ ಉತ್ತರಾಖಂಡ್ ಮಾಜಿ ಸಿಎಂ, ಕಾಂಗ್ರೆಸ್ ಮುಖಂಡ ಹರೀಶ್ ರಾವತ್, ಕೇಂದ್ರ ನಾಯಕತ್ವ ಕೂಡ ಉತ್ತರಾಖಂಡ ಬಿಜೆಪಿಯಲ್ಲಿ ಹೆಚ್ಚಿನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಈಗ ಅವರು ಯಾರನ್ನೇ ಕರೆತಂದರೂ 2022ರಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ.