ಥಾಣೆ (ಮಹಾರಾಷ್ಟ್ರ): ತನ್ನ ಪತಿ ಬೋಳು ತಲೆಯನ್ನು ವಿಗ್ನಿಂದ ಮುಚ್ಚಿ ಮೋಸ ಮಾಡಿದ್ದಾರೆ ಎಂದು 27 ವರ್ಷದ ಚಾರ್ಟೆಡ್ ಅಕೌಂಟೆಂಟ್ ಒಬ್ಬರು ದೂರು ದಾಖಲಿಸಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ ಥಾಣೆ ಗ್ರಾಮೀಣ ಪ್ರದೇಶ ನಯಾ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 406 ಮತ್ತು 500ರ ಅಡಿಯಲ್ಲಿ ಆಕೆಯ ಪತಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಕೈಲಾಶ್ ಬಾರ್ವೆ ತಿಳಿಸಿದ್ದಾರೆ.
ಗಂಡ ವಿಗ್ ಧರಿಸಿ ಬೋಳು ತಲೆಯನ್ನು ಮುಚ್ಚಿದ್ದರು. ಈ ಮೂಲಕ ನನಗೆ ಮೋಸ ಮಾಡಿದ್ದಾರೆ. ಆತ ಬೋಳು ತಲೆಯವ ಎಂದು ಗೊತ್ತಿದ್ದರೆ ನಾನು ಮದುವೆ ಆಗುತ್ತಿರಲಿಲ್ಲ. ಮದುವೆಯಾದ ಒಂದು ದಿನದ ನಂತರ ನನಗೆ ಗಂಡನ ಬೋಳು ತಲೆಯ ವಿಷಯ ಗೊತ್ತಾಯಿತು. ಈ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದಾಗ, ಅವರು ಅದೊಂದು ದೊಡ್ಡ ವಿಷಯವಲ್ಲ ಎಂದು ಹೇಳಿದರು ಎಂದು ಮಹಿಳೆ ತನ್ನ ದೂರಿನಲ್ಲಿ ಹೇಳಿದ್ದಾಳೆ.
ಪ್ರಕರಣ ಸಂಬಂಧ ಮಹಿಳೆಯ ಗಂಡ ಥಾಣೆ ನ್ಯಾಯಾಲಯದಲ್ಲಿ ಪ್ರತಿ ಅರ್ಜಿ ಸಲ್ಲಿಸಿದ್ದಾನೆ. ಪೊಲೀಸರ ಮುಂದೆ ಶರಣಾಗುವಂತೆ ಆತನಿಗೆ ನ್ಯಾಯಾಲಯ ಸೂಚಿಸಿದೆ.