ಮುಂಬೈ: ಥಾಣೆಯಲ್ಲಿ ಆನೆಯ ದಂತಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ಆರೋಪಿಗಳಿಂದ 2.5 ಕೋಟಿ ರೂಪಾಯಿ ಮೌಲ್ಯದ ಆನೆ ದಂತ ಜಪ್ತಿ ಮಾಡಲಾಗಿದೆ.
ಈ ಹಿಂದೆಯೂ ಕೂಡ ಆರೋಪಿಗಳು ಕಳ್ಳಸಾಗಣೆ ಆರೋಪದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಕಲ್ವಾ ಅರಣ್ಯದಿಂದ ಆನೆ ದಂತ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಬಲೆ ಬೀಸಿ ಇಬ್ಬರು ಕಳ್ಳಸಾಗಣೆದಾರರನ್ನು ಬಂಧಿಸಿದರು. ಕೆತ್ತಿ ಅದಕ್ಕೆ ರೂಪು ನೀಡಿದ ಆನೆ ದಂತಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೆಲೆ ಸಿಗುವುದರಿಂದ ದಂತ ಕಳ್ಳಸಾಗಣೆ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ.
ಓದಿ: ಜಮ್ಮುವಿನಲ್ಲಿ ಪೊಲೀಸ್ ತುಪಾಕಿ ಕಸಿದು ದಾಳಿ ಮಾಡಿದ ಉಗ್ರನ ಹತ್ಯೆ