ETV Bharat / bharat

ಕುಲ್ಗಾಮ್‌: ಕಾಶ್ಮೀರಿ ಪಂಡಿತ ಶಿಕ್ಷಕಿಯನ್ನು ಗುಂಡಿಟ್ಟು ಹತ್ಯೆಗೈದ ಉಗ್ರರು! - ದಕ್ಷಿಣ ಕಾಶ್ಮೀರ

ಕಾಶ್ಮೀರಿ ಪಂಡಿತ ಶಿಕ್ಷಕಿಯನ್ನು ಉಗ್ರರು ಗುಂಡಿಟ್ಟು ಹತ್ಯೆಗೈದ ಅಮಾನವೀಯ ಘಟನೆ ಇಂದು ಬೆಳಗ್ಗೆ ಜಮ್ಮು ಕಾಶ್ಮೀರದ ಕುಲ್ಗಾಂನಲ್ಲಿ ನಡೆದಿದೆ.

Terrorists killed woman teacher
ಸಾಂದರ್ಭಿಕ ಚಿತ್ರ
author img

By

Published : May 31, 2022, 11:27 AM IST

Updated : May 31, 2022, 2:19 PM IST

ಕುಲ್ಗಾಮ್‌(ಜಮ್ಮು ಮತ್ತು ಕಾಶ್ಮೀರ): ಶಿಕ್ಷಕಿಯಾಗಿದ್ದ ಕಾಶ್ಮೀರಿ ಪಂಡಿತ ಮಹಿಳೆಯನ್ನು ಉಗ್ರರು ಗುಂಡು ಹಾರಿಸಿ ಭೀಕರವಾಗಿ ಹತ್ಯೆಗೈದ ಘಟನೆ ಕುಲ್ಗಾಂ ಪ್ರದೇಶದ ಗೋಪಾಲಪೊರಾದಲ್ಲಿ ಇಂದು ಬೆಳಗ್ಗೆ ನಡೆದಿದೆ. ದಕ್ಷಿಣ ಕಾಶ್ಮೀರ ಭಾಗದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಶಿಕ್ಷಕಿ ರಜನಿ ಬಾಲಾ ಗಂಭೀರವಾಗಿ ಗಾಯಗೊಂಡು ಸ್ವಲ್ಪ ಹೊತ್ತಿನಲ್ಲೇ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ. ಹತ್ಯೆಗೀಡಾದ ಮಹಿಳೆ ಜಮ್ಮು ವಿಭಾಗದ ಸಾಂಬಾದಲ್ಲಿ ಶಿಕ್ಷಕಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • J&K | Kashmiri Pandits hold protest in Srinagar against the killings by terrorists.

    Terrorists shot dead a woman teacher from Samba (Jammu division) at a High School in the Gopalpora area of Kulgam. pic.twitter.com/6AFDoicVif

    — ANI (@ANI) May 31, 2022 " class="align-text-top noRightClick twitterSection" data=" ">

'ಈ ಘಟನೆ ಬೆಳಗ್ಗೆ ಸುಮಾರು 10 ಗಂಟೆಗೆ ನಡೀತು. ಶಿಕ್ಷಕಿಯ ತಲೆಗೆ ಗುಂಡಿಟ್ಟು ಕೊಂದರು. ತಕ್ಷಣ ಮತ್ತೋರ್ವ ಶಿಕ್ಷಕಿ ಆಕೆಯ ನೆರವಿಗೆ ಧಾವಿಸಿ ಬಂದರು. ನಾನು ಪೊಲೀಸರಿಗೆ ವಿಷಯ ಮುಟ್ಟಿಸಿದೆ' ಎಂದು ಗೋಪಲಪೊರ ಗ್ರಾಮದ ಮುಖ್ಯಸ್ಥ ತಿಳಿಸಿದರು.

ಕೊಲೆಯಾದ ಶಿಕ್ಷಕಿಯ ಸಂಬಂಧಿಯೊಬ್ಬರು ಮಾತನಾಡಿ, 'ನಮಗೆ ನ್ಯಾಯ ಬೇಕು. ಇಂಥ ಟಾರ್ಗೆಟೆಡ್‌ ಕೊಲೆಗಳನ್ನು ತಡೆಯಲು ಸರ್ಕಾರ ಏನಾದರು ಮಾಡಲೇ ಬೇಕು. ವಲಸೆ ನೌಕರರಿಗೆ ಸೂಕ್ತ ಭದ್ರತೆ ಒದಗಿಸಬೇಕು' ಎಂದು ಒತ್ತಾಯಿಸಿದರು.

  • J&K | Army and Police deployed at High School, in Gopalpora area of Kulgam where a teacher from Jammu region was shot dead by terrorists. pic.twitter.com/ILAg9oB6qg

ಇನ್ನೋರ್ವ ಸಂಬಂಧಿಕರು ಪ್ರತಿಕ್ರಿಯಿಸಿ, 'ನಾನು ಏನು ಹೇಳಬೇಕೋ ತಿಳಿಯದು. ಆಕೆ ನನ್ನ ಸೊಸೆ. ಇಲ್ಲಿಗೆ ಎರಡು ತಿಂಗಳ ಹಿಂದಷ್ಟೇ ಬಂದಿದ್ದಳು. ಇಲ್ಲಿ ಯಾವುದೇ ತೊಂದರೆ ಇಲ್ಲ, ನನಗೆ ಯಾವುದೇ ಬೆದರಿಕೆಯೂ ಇಲ್ಲ ಎಂದು ಹೇಳುತ್ತಿದ್ದಳು. ಆದ್ರೆ ಇದ್ದಕ್ಕಿದ್ದಂತೆ ಇತ್ತೀಚೆಗೆ, ಕೆಲವು ದಿನಗಳಿಂದ ನನಗೆ ಸ್ವಲ್ಪ ಭಯವಾಗುತ್ತಿದೆ ಎನ್ನುತ್ತಿದ್ದಳು. ಇವತ್ತು ಅದು ನಿಜವಾಗಿಯೇ ಬಿಡ್ತು' ಎಂದು ಉಮ್ಮಳಿಸಿ ಬರುತ್ತಿದ್ದ ದು:ಖ ನುಂಗಿ ಮಾತನಾಡಿದರು.

ಘಟನೆ ನಡೆದ ಗೊಪಾಲಪೊರಾ ಹೈಸ್ಕೂಲ್‌ಗೆ ಸೇನೆ ಮತ್ತು ಪೊಲೀಸರು ಭದ್ರತೆ ಒದಗಿಸಿದ್ದಾರೆ. ಶಿಕ್ಷಕಿಯನ್ನು ಕೊಂದ ಹಂತಕರಿಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ: ಆವಂತಿಪೊರಾ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ

Last Updated : May 31, 2022, 2:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.