ETV Bharat / bharat

ಭಯೋತ್ಪಾದಕರಿಗೆ ಧನ ಸಹಾಯ: ಕಾಶ್ಮೀರದ ಹಲವೆಡೆ ಎನ್​ಐಎ ದಾಳಿ

ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣಗಳ ತನಿಖೆಯ ಭಾಗವಾಗಿ ಎನ್​ಐಎ ಜಮ್ಮು ಮತ್ತು ಕಾಶ್ಮೀರದ ಹಲವಾರು ಕಡೆಗಳಲ್ಲಿ ದಾಳಿ ನಡೆಸುತ್ತಿದೆ.

Terror funding case NIA raids multiple locations in JK

author img

By

Published : May 15, 2023, 3:58 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಭಯೋತ್ಪಾದಕರಿಗೆ ಹಣಕಾಸು ಸಹಾಯ ಮಾಡಿದ ಪ್ರಕರಣಗಳ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ದಕ್ಷಿಣ ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯಾನ್‌ನ ಅನೇಕ ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ. ತಮ್ಮ ಪಾಕಿಸ್ತಾನಿ ಕಮಾಂಡರ್‌ಗಳು ಅಥವಾ ಹ್ಯಾಂಡ್ಲರ್‌ಗಳ ಆದೇಶದ ಮೇರೆಗೆ ವಿವಿಧ ನಕಲಿ ಹೆಸರುಗಳ ಮೇಲೆ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ಒದಗಿಸಿದ ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಪ್ರಕರಣದ ತನಿಖೆ ಇದಾಗಿದೆ.

ವಾಸ್ತವ ಜಗತ್ತಿನಲ್ಲಿ ಮತ್ತು ಸೈಬರ್‌ಸ್ಪೇಸ್‌ನಲ್ಲಿ ಸಂಚು ರೂಪಿಸಿದ ಪ್ರಕರಣಗಳಲ್ಲಿ ಬುಡ್ಗಾಮ್, ಶೋಪಿಯಾನ್, ಪುಲ್ವಾಮಾ, ಶ್ರೀನಗರ ಮತ್ತು ಅನಂತನಾಗ್‌ನ 13 ಸ್ಥಳಗಳಲ್ಲಿ ಎನ್​ಐಎ ಹುಡುಕಾಟ ನಡೆಸುತ್ತಿದೆ. ಸ್ಟಿಕ್ಕಿ ಬಾಂಬ್​ಗಳು ಮತ್ತು ಸಣ್ಣ ಶಸ್ತ್ರಾಸ್ತ್ರಗಳೊಂದಿಗೆ ಹಿಂಸಾತ್ಮಕ ಭಯೋತ್ಪಾದಕ ದಾಳಿಗಳನ್ನು ನಡೆಸುವ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸಂಚನ್ನು ವಿಫಲಗೊಳಿಸಲು ಎನ್​ಐಎ ತೀವ್ರ ತನಿಖೆ ಕೈಗೊಂಡಿದೆ.

ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿರುವ ಶಂಕೆಯ ಮೇರೆಗೆ ಮೇ 11 ರಂದು ತನಿಖಾ ಸಂಸ್ಥೆಯು ಕಾನ್ಸಿಪೋರಾದ ಅಬ್ದುಲ್ ಖಾಲಿಕ್ ರೇಗೂ, ಸೈಯದ್ ಕರೀಂನಲ್ಲಿರುವ ಜಾವಿದ್ ಅಹ್ಮದ್ ಧೋಬಿ ಮತ್ತು ಬಾರಾಮುಲ್ಲಾ ಜಿಲ್ಲೆಯ ಸಾಂಗ್ರಿ ಕಾಲೋನಿಯಲ್ಲಿರುವ ಶೋಯಬ್ ಅಹ್ಮದ್ ಚೂರ್ ಇವರುಗಳ ಮೆನೆಗಳ ಮೇಲೆ ದಾಳಿ ನಡೆಸಿತ್ತು.

ಐವರು ಯೋಧರನ್ನು ಬಲಿತೆಗೆದುಕೊಂಡ ಪೂಂಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಕೆಲ ವಾರಗಳ ನಂತರ ಎನ್‌ಐಎ ಈ ಕ್ರಮ ಕೈಗೊಂಡಿದೆ. ಪೂಂಚ್​ ದಾಳಿಯ ಕೆಲ ದಿನಗಳ ನಂತರ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ನಡೆಸಿದ ಬಾಂಬ್ ದಾಳಿಯಲ್ಲಿ ಐವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು. ಅಲ್ಲದೇ ಸುಧಾರಿತ ಸ್ಫೋಟಕ ಸಾಧನ (ಐಇಡಿ) ದಿಂದ ಉಂಟಾದ ಸ್ಫೋಟದಲ್ಲಿ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. ಈ ಹಿಂದೆ, ನ್ಯಾಯಾಲಯದ ಆದೇಶದ ಮೇರೆಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಮೂವರು ಆರೋಪಿಗಳಿಗೆ ಸೇರಿದ ಆಸ್ತಿಗಳನ್ನು ಎನ್‌ಐಎ ಮುಟ್ಟುಗೋಲು ಹಾಕಿಕೊಂಡಿತ್ತು.

ದಿ ರೆಸಿಸ್ಟೆನ್ಸ್ ಫ್ರಂಟ್ (TRF), ಯುನೈಟೆಡ್ ಲಿಬರೇಶನ್ ಫ್ರಂಟ್ ಜಮ್ಮು & ಕಾಶ್ಮೀರ (UL J&K), ಮುಜಾಹಿದೀನ್ ಗಜ್ವತ್-ಉಲ್-ಹಿಂದ್ (MGH) ಜಮ್ಮು, ಕಾಶ್ಮೀರ ಸ್ವಾತಂತ್ರ್ಯ ಹೋರಾಟಗಾರರು (JKFF), ಕಾಶ್ಮೀರ ಟೈಗರ್ಸ್ ಮತ್ತು PAAF ಸೇರಿದಂತೆ ಇನ್ನೂ ಹಲವಾರು ಹೊಸ ಭಯೋತ್ಪಾದಕ ಸಂಘಟನೆಗಳನ್ನು ಹತ್ತಿಕ್ಕಲು ಎನ್​ಐಎ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿಗಳನ್ನು ನಡೆಸುತ್ತಿದೆ. ಆಗಸ್ಟ್ 5, 2019 ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಈ ಭಯೋತ್ಪಾದಕ ಗುಂಪುಗಳು ಸಕ್ರಿಯವಾಗಿವೆ.

ಭಯೋತ್ಪಾದಕ ಸಂಘಟನೆಗಳಿಗೆ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಮಾತ್ರವಲ್ಲದೆ ಇತರ ವಿಷಯಗಳಿಗೆ ಕೂಡ ಗಮನಾರ್ಹ ಪ್ರಮಾಣದ ಹಣದ ಅಗತ್ಯವಿರುತ್ತದೆ. ಸಂಘಟನೆಯ ಕಾರ್ಯನಿರ್ವಹಣೆಯನ್ನು ನಿರ್ವಹಿಸಲು, ಅದರ ಮೂಲ ತಾಂತ್ರಿಕ ಅವಶ್ಯಕತೆಗಳನ್ನು ಪೂರೈಸಲು ಮತ್ತು ತಮ್ಮ ಸಿದ್ಧಾಂತಗಳನ್ನು ಹರಡಲು ಖರ್ಚಿಗೆ ಹಣ ಬೇಕಾಗುತ್ತದೆ. ಇದಕ್ಕಾಗಿ ಅವು ಬೇರೆ ಕಡೆಯಿಂದ ನಿಧಿ ಸಂಗ್ರಹಿಸುತ್ತವೆ.

ಇದನ್ನೂ ಓದಿ : ಭಾರತದಲ್ಲಿ ಸಗಟು ಹಣದುಬ್ಬರ ಮೈನಸ್​ 0.92ಕ್ಕೆ ಇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.