100 ರೂಪಾಯಿಗೆ ಪರಸ್ಪರ ಕತ್ತು ಕೊಯ್ದುಕೊಂಡ ಬ್ಲೇಡ್ಬ್ಯಾಚ್! - ವಿಜಯವಾಡದಲ್ಲಿ ನೂರು ರೂಪಾಯಿಗೆ ಕೊಲೆ
ಆಂಧ್ರದ ವಿಜಯವಾಡ ಜಿಲ್ಲೆಯಲ್ಲಿ ಬ್ಲೇಡ್ ಬ್ಯಾಚೊಂದು ಪರಸ್ಪರ ಹಲ್ಲೆ ನಡೆಸಿಕೊಂಡಿದ್ದು, ಓರ್ವ ಸಾವನ್ನಪ್ಪಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯವಾಡ(ಆಂಧ್ರಪ್ರದೇಶ): ಕೇವಲ ನೂರು ರೂಪಾಯಿ ವಿಚಾರಕ್ಕೆ ನಾಲ್ಕು ಮಂದಿಯ ಬ್ಲೇಡ್ ಬ್ಯಾಚ್ನ ಗುಂಪೊಂದು ಪರಸ್ಪರ ಹಲ್ಲೆ ನಡೆಸಿ, ಓರ್ವ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ವಿಜಯವಾಡ ಜಿಲ್ಲೆಯ ಅಜಿತ್ ಸಿಂಗ್ ನಗರದಲ್ಲಿ ಘಟನೆ ನಡೆದಿದ್ದು, ನಾಗರಾಜು ಅಲಿಯಾಸ್ ಪಾಂಡು ಮೃತ ವ್ಯಕ್ತಿಯಾಗಿದ್ದಾನೆ. ಹುಸೇನ್, ರಫಿ ಮತ್ತು ಕಿಶೋರ್ ಬಾಬು ಗಂಭೀರವಾಗಿ ಗಾಯಗೊಂಡಿದ್ದು, ವಿಜಯವಾಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಕರುನಾಡಿಗೆ ಮತ್ತೆ ನಿರ್ಬಂಧದ ಬರೆ: ವಿದ್ಯಾಗಮ, ಸ್ವಿಮ್ಮಿಂಗ್ ಪೂಲ್, ಜಿಮ್ ಬಂದ್; ಹೊಸ ನಿಯಮಗಳು ನಿಮಗೆ ತಿಳಿದಿರಲಿ..
ಗುರುವಾರ ಅಜಿತ್ ಸಿಂಗ್ ನಗರದ ವಂಬೆ ಕಾಲೋನಿಯಲ್ಲಿ ದುರ್ಗಾ ಬಾರ್ ಬಳಿ ರಾತ್ರಿ ಘಟನೆ ಸಂಭವಿಸಿದ್ದು, ಆರೋಪಿಗಳೆಲ್ಲರೂ ಗಾಂಜಾ ಸೇವನೆ ಮಾಡಿದ್ದರು ಎಂದು ತಿಳಿದುಬಂದಿದೆ.
ಘಟನೆಯಿಂದಾಗಿ ಸ್ಥಳೀಯರು ಬೆಚ್ಚಿ ಬಿದ್ದಿದ್ದು, ಸ್ಥಳಕ್ಕೆ ಎಸಿಪಿ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಮೀಪದ ಅಂಗಡಿ ಮಾಲೀಕರನ್ನು ಪ್ರಶ್ನಿಸಿ ಮಾಹಿತಿ ಸಂಗ್ರಹಿಸಲಾಗಿದೆ.