ಅಮರಾವತಿ (ಆಂಧ್ರಪ್ರದೇಶ): ಲಸಿಕೆ ನೀಡುವುದಾಗಿ ತೆಲುಗು ನಿರ್ಮಾಪಕರೊಬ್ಬರಿಗೆ 1 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ನಿರ್ಮಾಪಕರಿಗೆ ಕರೆ ಮಾಡಿದ್ದ ವಂಚಕ, ನಾನು ಆರೋಗ್ಯ ಇಲಾಖೆಯ ನೌಕರನಾಗಿದ್ದು, 2.50 ಲಕ್ಷ ಮೌಲ್ಯದ ಲಸಿಕೆ ನೀಡುವುದಾಗಿ ತಿಳಿಸಿದ್ದ.
ಇದನ್ನು ನಂಬಿದ್ದ ನಿರ್ಮಾಪಕರು ಆತನಿಂದ ಲಸಿಕೆ ಪಡೆದು ಜನರಿಗೆ ವಿತರಿಸಲು ನಿರ್ಧರಿಸಿದ್ದರು. ಬಳಿಕ ಮುಂಗಡವಾಗಿ 1 ಲಕ್ಷ ರೂಪಾಯಿ ಪಡೆದ ವಂಚಕ ನಂತರ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಹೀಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ಮಾಪಕರು ವಂಚನೆ ಪ್ರಕರಣ ದಾಖಲಿಸಿದ್ದರು. ಆದರೆ ಈ ಪ್ರಕರಣದ ತನಿಖೆಗೂ ಮುನ್ನವೇ ವಂಚಕ ಬೇರೊಂದು ಪ್ರಕರಣದಲ್ಲಿ ಜೈಲು ಸೇರಿದ್ದು, ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ‘ನಿರ್ದಿಷ್ಟ ಜನರ ಏಕಸ್ವಾಮ್ಯ' ಮುರಿದು ಹಾಕಿದ OTT ಫ್ಲಾಟ್ ಫಾರ್ಮ್ಗಳು'