ETV Bharat / bharat

ದೇಶದಲ್ಲೇ ಫಸ್ಟ್​​: ತೆಲಂಗಾಣದಲ್ಲಿ ಮೊದಲ ಮೊಬೈಲ್‌ ಇ-ವೋಟಿಂಗ್‌ ಪ್ರಯೋಗ ಯಶಸ್ವಿ

author img

By

Published : Oct 21, 2021, 2:07 PM IST

Updated : Oct 21, 2021, 4:32 PM IST

ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದಿರುವ ಮೊಬೈಲ್‌ ಇ-ಮತದಾನ ಪ್ರಕ್ರಿಯೆ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಮನೆಯಿಂದಲೇ ಮತ ಚಲಾಯಿಸಿರುವ ಪ್ರಾಯೋಗಿಕ ಪೈಲಟ್‌ ಯೋಜನೆ ಇದಾಗಿದೆ.

Telangana's dry run of India.. s first mobile e voting a success
ದೇಶದಲ್ಲೇ ಮೊದಲು: ತೆಲಂಗಾಣದ ಖಮ್ಮಂನಲ್ಲಿ ಮೊದಲ ಮೊಬೈಲ್‌ ಇ-ವೋಟಿಂಗ್‌ ಪ್ರಯೋಗ ಯಶಸ್ವಿ

ಖಮ್ಮಂ(ತೆಲಂಗಾಣ): ಕೇಂದ್ರ ಚುನಾವಣಾ ಆಯೋಗವು ದೇಶದಲ್ಲೇ ಪ್ರಥಮ ಬಾರಿಗೆ ಮನೆಯಿಂದ ಮತದಾನದ ಹಕ್ಕು ಚಲಾಯಿಸುವ ಇ-ವೋಟಿಂಗ್ ಪೈಲಟ್ ಯೋಜನೆಯನ್ನು ಖಮ್ಮಂನಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಶೇ.55.6ರಷ್ಟು ಮತದಾನವಾಗಿದೆ.

ದೇಶದಲ್ಲೇ ಫಸ್ಟ್​​: ತೆಲಂಗಾಣದಲ್ಲಿ ಮೊದಲ ಮೊಬೈಲ್‌ ಇ-ವೋಟಿಂಗ್‌ ಪ್ರಯೋಗ ಯಶಸ್ವಿ

ಮತದಾರರು ಮೊಬೈಲ್ ಆ್ಯಪ್ ಮೂಲಕ ಮತ ಚಲಾಯಿಸಲು ಆಸಕ್ತಿ ತೋರಿದ್ದಾರೆ. ಆದರೆ ಮೊಬೈಲ್ ಅಪ್ಲಿಕೇಶನ್‌ನಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಕೆಲವರು ಮತದಾನದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.

ಮನೆಯಿಂದ ಮತದಾನದ ಹಕ್ಕನ್ನು ಚಲಾಯಿಸಲು ಪ್ರಾಯೋಗಿಕ ಪೈಲಟ್ ಯೋಜನೆಯನ್ನು ಚುನಾವಣಾ ಆಯೋಗವು ಖಮ್ಮಂ ಪಾಲಿಕೆಯಲ್ಲಿ ಆರಂಭಿಸಿತ್ತು. ಇ-ವೋಟಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇ-ಮತದಾನಕ್ಕಾಗಿ ನಗರದಲ್ಲಿ ಒಟ್ಟು 3,820 ಜನರು ನೋಂದಾಯಿಸಿಕೊಂಡಿದ್ದು, ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5ರ ವರೆಗೆ ಮೊಬೈಲ್‌ ಇ-ಮತದಾನ ನಡೆದಿದೆ. ಉತ್ಸಾಹದಿಂದ ನಡೆದ ಅತ್ಯಾಧುನಿಕ ಇ-ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 2,128 ಜನರು ತಮ್ಮ ಡಮ್ಮಿ ಮತದಾನವನ್ನು ಆ್ಯಪ್ ಮೂಲಕ ಚಲಾಯಿಸಿದರು.

ಇನ್ನೂ ಹೆಸರು ನೋಂದಾಯಿಸಿಕೊಂಡವರ ಪೈಕಿ 1,702 ಜನರು ಇ-ಮತದಾನದಿಂದ ದೂರ ಉಳಿದಿದ್ದಾರೆ. ಮೊದಲ ನಾಲ್ಕು ಗಂಟೆಗಳಲ್ಲಿ 1,000 ಮತದಾರರು ಇ-ವೋಟಿಂಗ್‌ ಮಾಡಿದ್ದಾರೆ. 1,680 ಮತಗಳು ಮಧ್ಯಾಹ್ನ 1 ಗಂಟೆಗೆ ವರೆಗೆ ಹಾಗೂ 1,940 ಮತಗಳು ಮಧ್ಯಾಹ್ನ 3ರ ವರೆಗೆ ಹಾಗೂ ಸಂಜೆ 5ರ ವೇಳೆಗೆ ಒಟ್ಟು 2,128 ಮತಗಳು ಚಲಾವಣೆಗೊಂಡಿವೆ.

ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿದರೆ ಇ-ವೋಟಿಂಗ್‌ ಯಶಸ್ವಿ

ಇ-ಮತದಾನದಲ್ಲಿ ಕೆಲವು ಸಣ್ಣ ಸಮಸ್ಯೆಗಳನ್ನು ಹೊರತುಪಡಿಸಿ ಎಲ್ಲವೂ ಸುಗಮವಾಗಿ ನಡೆದಿದೆ. ಕೇವಲ ಎರಡರಿಂದ ಮೂರು ನಿಮಿಷಗಳಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ವಿವರಗಳನ್ನು ತೆಲುಗು ಮತ್ತು ಹಿಂದಿಯಲ್ಲಿ ಮೊಬೈಲ್ ಆ್ಯಪ್‌ನಲ್ಲಿ ಅಳವಡಿಸಲಾಗಿದ್ದು, ಆಲ್ಫಾ, ಬೀಟಾ, ಗಾಮಾ ಮತ್ತು ಟಿಪ್ಪಣಿಗಳೊಂದಿಗೆ ನಾಲ್ಕು ಚಿಹ್ನೆಗಳನ್ನು ಇರಿಸಲಾಗಿದೆ. ಆಲ್ಫಾ, ಬೀಟಾ, ಗಾಮಾ, ನೋಟಾ ತೆಲುಗು ಮತ್ತು ಹಿಂದಿಯಲ್ಲಿ. ಬ್ಯಾಲೆಟ್ ಐಡಿ ನೀಡಲಾಗಿದೆ. ಡಮ್ಮಿ ಮತವನ್ನು ನೋಂದಾಯಿಸಿದ ನಂತರ ಅಪ್ಲಿಕೇಶನ್ ಅನ್ನು ರೆಕಾರ್ಡ್ ಮಾಡಲಾಗಿದೆ.

ಇ-ಮತದಾನಕ್ಕೆ ಮತದಾರರ ಸಂತಸ

ಅನೇಕರು ಇ-ಮತದಾನಕ್ಕೆ ಆಸಕ್ತಿ ತೋರಿದರೂ ತಾಂತ್ರಿಕ ಸಮಸ್ಯೆಗಳು ಅಥವಾ ಅವರ ಮೊಬೈಲ್ ಫೋನ್‌ಗಳ ಸಮಸ್ಯೆಗಳಿಂದಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಸಾಧ್ಯವಾಗಲಿಲ್ಲ. ಇ-ವೋಟ್ ಮಾಡಲು ಕೆಲವು ಪ್ರಯತ್ನಗಳ ಹೊರತಾಗಿಯೂ ತಾಂತ್ರಿಕ ಸಮಸ್ಯೆಗಳಿಂದಾಗಿ ಆ್ಯಪ್‌ ಓಪನ್‌ ಆಗಲಿಲ್ಲ. ಆ್ಯಪ್‌ ಅನ್ನು ಪುನಃಲೋಡ್ ಮಾಡಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮಾದರಿ ಇ-ಮತದಾನದಲ್ಲಿ ಭಾಗವಹಿಸಿದವರು ಹಾಗೂ ಜಿಲ್ಲೆಯ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಜನರಲ್ಲಿ ಜಾಗೃತಿ ಮೂಡಿಸಬೇಕು

ಚುನಾವಣಾ ಆಯೋಗವು ಮನೆಯಿಂದ ಮತದಾನದ ಹಕ್ಕನ್ನು ಚಲಾಯಿಸಲು ಅನುಮತಿಸಿದ ಮೊದಲ ಪ್ರಯತ್ನದಲ್ಲಿ ಉತ್ತಮ ಫಲಿತಾಂಶ ಸಿಕ್ಕಿದೆ. ನಿಗದಿತ ಗುರಿಯನ್ನು ಸಾಧಿಸಲಾಗಿದೆ. ಜನರಲ್ಲಿ ಅರಿವಿನ ಕೊರತೆಯಿಂದಾಗಿ ನಿರೀಕ್ಷಿತ ಫಲಿತಾಂಶಗಳು ಬಂದಿಲ್ಲ. ನೋಂದಣಿ ಸಮಯದಲ್ಲಿ ಗುರಿಗಳನ್ನು ಹೊಂದಿಸುವ ಜಾಗೃತಿ ಕಾರ್ಯಕ್ರಮಗಳು, ಇ-ಮತ ನೋಂದಣಿಯನ್ನು ಕೈಗೊಂಡಿದ್ದರೆ ಇನ್ನಷ್ಟು ಪ್ರಯೋಜನಕಾರಿಯಾಗುತ್ತಿತ್ತು. ಇ-ವೋಟ್‌ನಲ್ಲಿ ನೋಂದಾಯಿತ ಫಲಿತಾಂಶಗಳು, ತಾಂತ್ರಿಕ ಸಮಸ್ಯೆಗಳು ಹಾಗೂ ಇತರೆ ತೊಂದರೆಗಳನ್ನು ನಿವಾರಿಸಬೇಕಾಗಿದೆ.

Last Updated : Oct 21, 2021, 4:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.