ತೆಲಂಗಾಣ: ರಾಜ್ಯದ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಆಚರಣೆಗಳು ನಡೆಯುತ್ತಿವೆ. ಮುಂಜಾನೆಯಿಂದ ದೇವಸ್ಥಾನಕ್ಕೆ ತೆರಳುತ್ತಿರುವ ಭಕ್ತರು ವೈಕುಂಠ ದ್ವಾರದ ದರ್ಶನ ಪಡೆದು ಪುನೀತರಾದರು.
ಭದ್ರಾದ್ರಿ: ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯ ಭದ್ರಾಚಲಂನ ಸೀತಾರಾಮ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ವಿಶೇಷ ಪೂಜೆ ನಡೆಯಿತು. ಭಕ್ತರು ಶ್ರೀರಾಮನ ದರ್ಶನ ಪಡೆದರು.
ಯಾದಾದ್ರಿ: ಯಾದಾದ್ರಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ವಿಶೇಷ ಆಚರಣೆಗಳು ನೆರವೇರಿದವು. ಬೆಳಗ್ಗೆ 6.43 ರಿಂದ 9.30 ರವರೆಗೆ ಲಕ್ಷ್ಮಿ ನರಸಿಂಹ ಸ್ವಾಮಿ ವೈಕುಂಠ ದ್ವಾರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಧರ್ಮಪುರಿ: ಧರ್ಮಪುರಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಮುಂಜಾನೆಯಿಂದಲೇ ಭಾರಿ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದರು. ಕಲ್ಯಾಣ ಇಲಾಖೆ ಸಚಿವ ಕೊಪ್ಪುಲ ಈಶ್ವರ್ ಅವರು ವಿಶೇಷ ಪೂಜೆ ಮತ್ತು ಲಕ್ಷ್ಮಿ ನರಸಿಂಹ ಸ್ವಾಮಿಯ ವೈಕುಂಠ ದ್ವಾರ ದರ್ಶನ ಮಾಡಿದರು.
ಕೇಂದ್ರ ಸಚಿವ ಕಿಶನ್ ರೆಡ್ಡಿ: ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರು ಹೈದರಾಬಾದ್‌ನ ಹಿಮಾಯತ್‌ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಕುಟುಂಬದೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸಚಿವ ತಲ್ಸಾನಿ ಶ್ರೀನಿವಾಸ್ ಯಾದವ್: ರಾಜ್ಯ ಪಶು ಸಚಿವ ತಲ್ಸಾನಿ ಶ್ರೀನಿವಾಸ್ ಯಾದವ್ ಅವರು ಹೈದರಾಬಾದ್‌ನ ಮೊಂಡಾ ಮಾರುಕಟ್ಟೆಯಲ್ಲಿರುವ ಪೆರುಮಾಳ್ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಸಚಿವ ಎಟಲಾ ರಾಜೇಂದರ್: ತೆಲಂಗಾಣದ ಹಣಕಾಸು ಸಚಿವ ಎಟಲಾ ರಾಜೇಂದರ್ ಅವರು ಎಲ್ಲಂತಕುಂಟದಲ್ಲಿ ಸೀತಾ ರಾಮಚಂದ್ರ ಸ್ವಾಮಿ ದೇವಸ್ಥಾನದಲ್ಲಿ ಮತ್ತು ಕರೀಂನಗರ ಜಿಲ್ಲೆಯ ಜಮ್ಮಿಕುಂಟದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ವಿಶೇಷ ಪೂಜೆ ಸಲ್ಲಿಸಿದರು.