ETV Bharat / bharat

ತೆಲಂಗಾಣದಲ್ಲಿ 'gorilla glass' ಉತ್ಪಾದನಾ ಘಟಕ ಸ್ಥಾಪನೆ: ಇದು ದೇಶದಲ್ಲಿಯೇ ಮೊದಲು - ಗೊರಿಲ್ಲಾ ಗ್ಲಾಸ್ ಉತ್ಪಾದನಾ ಘಟಕ

ಭಾರತದ ಮೊದಲ ಗೊರಿಲ್ಲಾ ಗ್ಲಾಸ್ ಉತ್ಪಾದನಾ ಘಟಕ ತೆಲಂಗಾಣದಲ್ಲಿ ಸ್ಥಾಪನೆಯಾಗಲಿದೆ.

gorilla glass
ಗೊರಿಲ್ಲಾ ಗ್ಲಾಸ್(ಪ್ರಾತಿನಿಧಿಕ ಚಿತ್ರ )
author img

By ETV Bharat Karnataka Team

Published : Sep 2, 2023, 8:57 AM IST

ಹೈದರಾಬಾದ್(ತೆಲಂಗಾಣ): ಅಮೆರಿಕದ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿ ಕಾರ್ನಿಂಗ್ ಇಂಕ್ ತನ್ನ 'ಗೊರಿಲ್ಲಾ ಗ್ಲಾಸ್' ಉತ್ಪಾದನಾ ಘಟಕವನ್ನು ಸ್ಥಾಪಿಸಲು ತೆಲಂಗಾಣ ರಾಜ್ಯವನ್ನು ಆಯ್ಕೆ ಮಾಡಿದೆ. ಇದು ಭಾರತದಲ್ಲಿ ಮೊದಲ ಹೂಡಿಕೆಯಾಗಿದೆ ಎಂದು ರಾಜ್ಯ ಸರ್ಕಾರ ಶುಕ್ರವಾರ ತಿಳಿಸಿದೆ. ಪ್ರಸ್ತಾವಿತ ಉತ್ಪಾದನಾ ಸೌಲಭ್ಯವು ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಮಾರುಕಟ್ಟೆ ನಾಯಕರಿಗೆ ಕವರ್ ಗ್ಲಾಸ್ ಅನ್ನು ತಯಾರಿಸುತ್ತದೆ.

800ಕ್ಕೂ ಹೆಚ್ಚು ಜನರಿಗೆ ಉದ್ಯೋಗ: ಪಾಲುದಾರರೊಂದಿಗೆ ಕಾರ್ನಿಂಗ್ 934 ಕೋಟಿ ರೂ.ಗಳ ಹೂಡಿಕೆಯನ್ನು ಪ್ರಸ್ತಾಪಿಸಿದೆ. ಇದು ಕಾರ್ಯತಂತ್ರದ ಹೂಡಿಕೆಯಾಗಲಿದೆ. ಜತೆಗೆ ತೆಲಂಗಾಣ ಮತ್ತು ಭಾರತದಲ್ಲಿ ಸ್ಮಾರ್ಟ್‌ಫೋನ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 'ತೆಲಂಗಾಣದಲ್ಲಿ ಪ್ರಸ್ತಾವಿತ ಸೌಲಭ್ಯವು 800ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ' ಎಂದು ತೆಲಂಗಾಣ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಕೈಗಾರಿಕಾ ಸಚಿವ ಕೆ.ಟಿ. ರಾಮರಾವ್ ತಿಳಿಸಿದ್ದಾರೆ.

ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ರಾಮರಾವ್ ಅವರು ಹಿರಿಯ ಉಪಾಧ್ಯಕ್ಷರಾದ ಜಾನ್ ಬೇಯ್ನ್, ಗ್ಲೋಬಲ್ ಆಪರೇಷನ್ಸ್ ಎಕ್ಸಿಕ್ಯೂಟಿವ್ ರವಿಕುಮಾರ್ ಮತ್ತು ಕಾರ್ನಿಂಗ್ ಇಂಕ್‌ನಿಂದ ಸರ್ಕಾರಿ ವ್ಯವಹಾರಗಳ ನಿರ್ದೇಶಕಿ ಸಾರಾ ಕಾರ್ಟ್‌ಮೆಲ್ ಅವರನ್ನು ನ್ಯೂಯಾರ್ಕ್‌ನಲ್ಲಿ ಭೇಟಿಯಾದರು. ಕಳೆದ 9 ವರ್ಷಗಳಲ್ಲಿ ರಾಜ್ಯವು ಕೈಗೊಂಡ ಉಪಕ್ರಮಗಳ ಪರಿಣಾಮವಾಗಿ ತೆಲಂಗಾಣ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ಹೊಸ ಪೀಳಿಗೆಯ ಗೇಮಿಂಗ್ Metaverse; 600 ಮಿಲಿಯನ್ ದಾಟಲಿದೆ ಬಳಕೆದಾರರ ಸಂಖ್ಯೆ

"ಹಲವಾರು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕಂಪನಿಗಳು ಹೈದರಾಬಾದ್ ಅನ್ನು ತಮ್ಮ ಗಮ್ಯಸ್ಥಾನವಾಗಿ ಆಯ್ಕೆ ಮಾಡಿಕೊಳ್ಳುತ್ತಿವೆ. ಫಾಕ್ಸ್‌ಕಾನ್ ಈ ವರ್ಷದ ಆರಂಭದಲ್ಲಿ ರಾಜ್ಯದಲ್ಲಿ ಗಮನಾರ್ಹ ಹೂಡಿಕೆ ಮಾಡಿದೆ. ಈಗ ತೆಲಂಗಾಣದಲ್ಲಿ ಕಾರ್ನಿಂಗ್‌ನ ಹೂಡಿಕೆಯು ತೆಲಂಗಾಣ ಮತ್ತು ಭಾರತದಲ್ಲಿ ಸ್ಮಾರ್ಟ್‌ಫೋನ್ ತಯಾರಿಕೆಯ ಹೊಸ ಯುಗವನ್ನು ಮುನ್ನಡೆಸುತ್ತದೆ" ಎಂದು ಅವರು ಹೇಳಿದರು.

ಕಾರ್ನಿಂಗ್ ಇಂಕ್ ಬಗ್ಗೆ ಒಂದಿಷ್ಟು: ನ್ಯೂಯಾರ್ಕ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಾರ್ನಿಂಗ್ ಇಂಕ್, ಗಾಜಿನ ವಿಜ್ಞಾನ, ಸೆರಾಮಿಕ್ಸ್ ವಿಜ್ಞಾನ ಮತ್ತು ಆಪ್ಟಿಕಲ್ ಫಿಸಿಕ್ಸ್‌ನಲ್ಲಿ ಪರಿಣತಿಯನ್ನು ಹೊಂದಿರುವ ಫಾರ್ಚೂನ್ 500 ಮೆಟೀರಿಯಲ್ ಸೈನ್ಸ್ ಕಂಪನಿಯಾಗಿದೆ. 172 ವರ್ಷಗಳ ಇತಿಹಾಸದೊಂದಿಗೆ, ಕಾರ್ನಿಂಗ್ ನಾವೀನ್ಯತೆಗಳಲ್ಲಿ ಮುಂಚೂಣಿಯಲ್ಲಿದೆ ಮತ್ತು ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಪೋರ್ಟಬಲ್ ಸಾಧನಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಬಲವರ್ಧಿತ ಗಾಜಿನ ಗೊರಿಲ್ಲಾ ಗ್ಲಾಸ್‌ನ ಸಂಶೋಧಕನಾಗಿದೆ. ಇದು ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಪೋರ್ಟಬಲ್ ಸಾಧನಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಬಲವರ್ಧಿತ ಗಾಜು.

ಇದನ್ನೂ ಓದಿ: ಕೈಗೆಟುಕುವ ದರದ Lava 'Yuva-2' ಬಿಡುಗಡೆ; ಬೆಲೆ 6,999ರಿಂದ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.