ಹೈದರಾಬಾದ್: ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್, ಚಿನ್ನದ ಹುಡುಗಿ ನಿಖತ್ ಜರೀನ್ ಹೈದರಾಬಾದ್‌ಗೆ ಆಗಮಿಸಿದ್ದು, ತೆಲಂಗಾಣ ಕ್ರೀಡಾ ಸಚಿವರು ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದರು. ನಿಖತ್ ಜತೆಗೆ ಜರ್ಮನಿಯಲ್ಲಿ ನಡೆದ ವಿಶ್ವ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿರುವ ಸಿಕಂದರಾಬಾದ್ನ ಇಶಾ ಸಿಂಗ್, ಫುಟ್ ಬಾಲ್ ಆಟಗಾರ್ತಿ ಸೌಮ್ಯ ಕೂಡ ಹೈದರಾಬಾದ್ ಗೆ ಆಗಮಿಸಿದರು.
ಮೂರು ತೆಲಂಗಾಣ ಚಾಂಪಿಯನ್‌ಗಳನ್ನು ಕ್ರೀಡಾ ಸಚಿವ ಶ್ರೀನಿವಾಸ್ ಗೌಡ್, ರಸ್ತೆ ಸಚಿವ ವೇಮುಲ ಪ್ರಶಾಂತ್ ರೆಡ್ಡಿ, ತೆಲಂಗಾಣ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಅಲ್ಲಿಪುರಂ ವೆಂಕಟೇಶ್ವರ್ ರೆಡ್ಡಿ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಹಲವಾರು ಕ್ರೀಡಾಪಟುಗಳು ಮತ್ತು ಅಭಿಮಾನಿಗಳು ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ನೆರೆದಿದ್ದರು.
ತೆಲಂಗಾಣ ಸರ್ಕಾರದ ನೆರವಿನಿಂದ ನಾನು ಈ ಪದಕ ಗೆಲ್ಲಲು ಸಾಧ್ಯವಾಯಿತು. ನನ್ನ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು. ಸಚಿವ ಶ್ರೀನಿವಾಸ್ ಗೌಡ್, ಪ್ರಶಾಂತ್ ರೆಡ್ಡಿ, ಮತ್ತು ತೆಲಂಗಾಣ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ವಿಂಕಟೇಶ್ವರ್ ರೆಡ್ಡಿ ಮೊದಲಿನಿಂದಲೂ ನನಗೆ ಬೆಂಬಲ ನೀಡಿದರು, ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು, ಎಂಎಲ್‌ಸಿ ಕವಿತಾ ಅವರು ನನ್ನನ್ನು ತುಂಬಾ ಪ್ರೋತ್ಸಾಹಿಸಿದ್ದಾರೆ ಮತ್ತು ಅವರಿಂದಲೇ ನಾನು ನನ್ನ ಕ್ರೀಡಾ ಜೀವನದಲ್ಲಿ ಈ ಹಂತಕ್ಕೆ ಬಂದಿದ್ದೇನೆ. ಭವಿಷ್ಯದಲ್ಲಿ ತೆಲಂಗಾಣ ಮತ್ತು ದೇಶಕ್ಕೆ ಕೀರ್ತಿ ತರಲು ಯತ್ನಿಸುತ್ತೇನೆ ಎಂದು ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತೆ ನಿಖತ್ ಜರೀನ್ ಹೇಳಿದರು.
ನಿಖತ್ ಜರೀನ್ ಗುಣಗಾನ ಮಾಡಿದ ಸಚಿವ: ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ನಿಖತ್ ವಿಶ್ವಚಾಂಪಿಯನ್ ಆಗಿದ್ದಾರೆ. ತೆಲಂಗಾಣದ ಇಬ್ಬರು ಚಿನ್ನದ ಹುಡುಗಿಯರಾದ ನಿಖತ್ ಮತ್ತು ಇಶಾ ಸಿಂಗ್ ಅವರನ್ನು ನಾವು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ. ಅಂತಹ ಪ್ರತಿಭಾವಂತ ಕ್ರೀಡಾಪಟುಗಳು ಅನೇಕರಿದ್ದಾರೆ. ತೆಲಂಗಾಣದಲ್ಲಿ ನಾವು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಆಟದ ಮೈದಾನಗಳನ್ನು ಸ್ಥಾಪಿಸುತ್ತಿದ್ದೇವೆ.
ಆಟಗಾರರಿಗೆ ಮೀಸಲಾತಿ ನೀಡಲಾಗಿದೆ, ಭವಿಷ್ಯದಲ್ಲಿ ನಾವು ಅತ್ಯುತ್ತಮ ಆಟಗಾರರನ್ನು ಸಿದ್ಧಪಡಿಸುತ್ತೇವೆ ಮತ್ತು ತೆಲಂಗಾಣದಿಂದ ಅವರನ್ನು ವಿಶ್ವ ಕ್ರೀಡೆಗಳಿಗೆ ಕಳುಹಿಸುತ್ತೇವೆ ಎಂದು ತೆಲಂಗಾಣ ಕ್ರೀಡಾ ಸಚಿವ ಶ್ರೀನಿವಾಸ್ ಗೌಡ್ ಹೇಳಿದರು. ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಇತ್ತೀಚೆಗೆ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಿಖತ್ ಜರೀನ್ 52 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈ ಪದಕ ಗೆದ್ದ ತೆಲುಗು ರಾಜ್ಯದ ಮೊದಲ ಬಾಕ್ಸರ್ ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಕೇಸರಿನಲ್ಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ: ಐಎಎಸ್ ಅಧಿಕಾರಿ ನಡೆಗೆ ಮೆಚ್ಚುಗೆ