ಹೈದರಾಬಾದ್(ತೆಲಂಗಾಣ): ತೆಲಂಗಾಣದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಭಾರತೀಯ ಜನತಾ ಪಾರ್ಟಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಅದಕ್ಕಾಗಿ ಪಕ್ಷದ ಪ್ರಮುಖ ಮುಖಂಡರು ಈಗಾಗಲೇ ಮುತ್ತಿನ ನಗರಿಯಲ್ಲಿ ಬೀಡು ಬಿಟ್ಟಿದ್ದಾರೆ. ಇದೇ ವಿಷಯನ್ನಿಟ್ಟುಕೊಂಡು ತೆಲಂಗಾಣ ಸಚಿವ ಕೆ.ಟಿ. ರಾಮ್ರಾವ್ ಬಿಜೆಪಿಯ ಕಾಲೆಳೆದಿದ್ದಾರೆ.
ಕೆಟಿಆರ್ ಟ್ವೀಟ್ ಇಂತಿದೆ: ಸುಂದರ ನಗರ ಹೈದರಾಬಾದ್ಗೆ ಕಾರ್ಯಕಾರಿಣಿ ಸಭೆಗಾಗಿ ಆಗಮಿಸುತ್ತಿರುವ ವಾಟ್ಸಾಪ್ ವಿಶ್ವವಿದ್ಯಾಲಯಕ್ಕೆ ಸ್ವಾಗತ. ಎಲ್ಲ ಜುಮ್ಲಾ ಜೀವಿಗಳಲ್ಲಿ ನನ್ನದೊಂದು ವಿನಂತಿ. ಇಲ್ಲಿನ ದಮ್ ಬಿರಿಯಾನಿ ಮತ್ತು ಇರಾನಿ ಟೀ ರುಚಿ ಸವಿಯೋದನ್ನು ಮರೆಯದಿರಿ ಎಂದು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಕೆಲವೊಂದು ಫೋಟೋ ಹಂಚಿಕೊಂಡಿರುವ ಅವರು, ಅಲ್ಲಿಗೂ ಭೇಟಿ ನೀಡಿ ಎಂದಿದ್ದಾರೆ. ಪ್ರಮುಖವಾಗಿ ಕಾಳೇಶ್ವರಮ್ ಯೋಜನೆ, ಪೊಲೀಸ್ ಕಮಾಂಡ್ ಕಂಟ್ರೋಲ್ ಕಟ್ಟಡ ಸೇರಿದಂತೆ ಅನೇಕ ಸುಂದರ ಕಟ್ಟಡಗಳ ಫೋಟೋ ಶೇರ್ ಮಾಡಿ, ಈ ಮೂಲಕ ರಾಷ್ಟ್ರೀಯ ಪಕ್ಷ ಭಾರತೀಯ ಜನತಾ ಪಾರ್ಟಿ ಕಾಲೆಳೆದಿದ್ದಾರೆ.
-
Welcome the WhatsApp University for its executive council meeting to the beautiful city of Hyderabad
— KTR (@KTRTRS) July 1, 2022 " class="align-text-top noRightClick twitterSection" data="
To all the Jhumla Jeevis;
Don’t forget to enjoy our Dum Biryani & Irani Chai ☕️ #TelanganaThePowerhouse 👇 please visit, take notes & try to implement in your states pic.twitter.com/Ub0JRXSIUA
">Welcome the WhatsApp University for its executive council meeting to the beautiful city of Hyderabad
— KTR (@KTRTRS) July 1, 2022
To all the Jhumla Jeevis;
Don’t forget to enjoy our Dum Biryani & Irani Chai ☕️ #TelanganaThePowerhouse 👇 please visit, take notes & try to implement in your states pic.twitter.com/Ub0JRXSIUAWelcome the WhatsApp University for its executive council meeting to the beautiful city of Hyderabad
— KTR (@KTRTRS) July 1, 2022
To all the Jhumla Jeevis;
Don’t forget to enjoy our Dum Biryani & Irani Chai ☕️ #TelanganaThePowerhouse 👇 please visit, take notes & try to implement in your states pic.twitter.com/Ub0JRXSIUA
ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಕೆಟಿಆರ್, ತೆಲಂಗಾಣ ರಾಜ್ಯದಿಂದ ಪಾಠ ಕಲಿಯಿರಿ. ಇಲ್ಲಿನ ಅಭಿವೃದ್ಧಿ ಯೋಜನೆಗಳನ್ನ ಸರಿಯಾಗಿ ಅಧ್ಯಯನ ಮಾಡಿ, ನಿಮ್ಮಲ್ಲೂ ಅನುಷ್ಠಾನಕ್ಕೆ ತನ್ನಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ನಲ್ಲಿ ಬಿಜೆಪಿ ಕಾರ್ಯಕಾರಿಣಿ: ದಕ್ಷಿಣದತ್ತ ಕೇಸರಿ ಪಡೆ ಕಣ್ಣು
ಮುಂದಿನ ವಿಧಾನಸಭೆ ಚುನಾವಣೆಗೂ ಮುನ್ನ ತೆಲಂಗಾಣದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಇಂದು ಮತ್ತು ನಾಳೆ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ನಡೆಸಲು ನಿರ್ಧರಿಸಿದೆ. ಇದರಲ್ಲಿ ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ. ಬರೋಬ್ಬರಿ 18 ವರ್ಷಗಳ ನಂತರ ತೆಲಂಗಾಣದ ಹೈದರಾಬಾದ್ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಸುತ್ತಿದ್ದು, ಮಹತ್ವ ಪಡೆದುಕೊಂಡಿದೆ.