ETV Bharat / bharat

ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗೆ ಶೇ 10, ಮಹಿಳೆಯರಿಗೆ ಶೇ.33.3 ರಷ್ಟು ಮೀಸಲಾತಿ: ತೆಲಂಗಾಣ ಸರ್ಕಾರ - ತೆಲಂಗಾಣ ಸರ್ಕಾರದ ಕ್ಯಾಬಿನೆಟ್​ ಸಭೆ

ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಜನರ ಅಭಿವೃದ್ಧಿಗೆ ಅನುಕೂಲವಾಗುವಂತೆ ಶೇ.10ರಷ್ಟು ಮೀಸಲಾತಿಯನ್ನು ತೆಲಂಗಾಣ ಸರ್ಕಾರ ಜಾರಿಗೆ ತಂದಿದೆ. ಇದೇ ವೇಳೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಹಿಳೆಯರಿಗೆ ಶೇ 33.3ರಷ್ಟು ಮೀಸಲಾತಿ ಜಾರಿಗೊಳಿಸಿ ಆದೇಶ ಹೊರಡಿಸಿದೆ.

Telangana
ತೆಲಂಗಾಣ ಸರ್ಕಾರ
author img

By

Published : Aug 25, 2021, 11:25 AM IST

Updated : Aug 25, 2021, 11:56 AM IST

ಹೈದರಾಬಾದ್: ತೆಲಂಗಾಣ ಸರ್ಕಾರವು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಜನರ ಅಭಿವೃದ್ಧಿಗೆ ಅನುಕೂಲವಾಗುವಂತಹ ಯೋಜನೆ ಜಾರಿಗೊಳಿಸಿದೆ. ಸರ್ಕಾರಿ ಉದ್ಯೋಗ ಹಾಗು ಶಿಕ್ಷಣದಲ್ಲಿ ಮಹಿಳೆಯರಿಗೆ ಶೇ 33.3ರಷ್ಟು ಮೀಸಲಾತಿ ಹಾಗು ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಶೇ.10ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿದೆ. ಈ ಯೋಜನೆ ಎಂಟು ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಜನರಿಗೆ ನೆರವಾಗಲಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಘೋಷಿಸಿದೆ. ತಹಶೀಲ್ದಾರ್ (ಎಂಆರ್‌ಒ) ನೀಡಿದ ಆದಾಯ ಪ್ರಮಾಣಪತ್ರವನ್ನು ಆಧರಿಸಿ ಇಡಬ್ಲ್ಯೂಎಸ್ ಕೋಟಾ ಇರುತ್ತದೆ. ಸುಳ್ಳು ದಾಖಲೆಗಳು ಕಂಡುಬಂದಲ್ಲಿ ಅಂತಹ ಅರ್ಜಿಗಳನ್ನು ವಜಾಗೊಳಿಸಲಾಗುತ್ತದೆ. ಜೊತೆಗೆ ಕಾನೂನು ಕ್ರಮಗಳನ್ನು ಸಹ ತಕ್ಷಣವೇ ತೆಗೆದುಕೊಳ್ಳಲಾಗುವುದು ಎಂದು ಮಾರ್ಗಸೂಚಿಯಲ್ಲಿ ಎಚ್ಚರಿಸಲಾಗಿದೆ.

ಮಹಿಳೆಯರಿಗೆ ಶೇ.33.3ರಷ್ಟು ಮೀಸಲಾತಿ:

ರಾಜ್ಯ ಸರ್ಕಾರಿ ಹುದ್ದೆಗಳು ಮತ್ತು ಸೇವೆಗಳಲ್ಲಿ ಮಹಿಳೆಯರಿಗೆ ಶೇ .33.3 ಮೀಸಲಿರಿಸಿ ಆದೇಶ ಹೊರಡಿಸಿದೆ. ಇಡಬ್ಲ್ಯೂಎಸ್ ವರ್ಗಕ್ಕೆ ಮೀಸಲಾಗಿರುವ ಹುದ್ದೆಗಳು ಮತ್ತು ಸೇವೆಗಳಲ್ಲಿನ ಮೀಸಲಾತಿಯನ್ನು ಆರಂಭಿಕ ನೇಮಕಾತಿಗಳಲ್ಲಿ ಮಹಿಳೆಯರಿಗೆ ಹಂಚಿಕೆ ಮಾಡಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಹೇಳಿದ್ದಾರೆ.

Last Updated : Aug 25, 2021, 11:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.