ETV Bharat / bharat

ತಾಯಿಯ ದುಷ್ಕೃತ್ಯಕ್ಕೆ ಮಗುವನ್ನು ಶಿಕ್ಷಿಸುವುದು ಸರಿಯಲ್ಲ : ತೆಲಂಗಾಣ ಹೈಕೋರ್ಟ್ - ಪಿಡಿ ಕಾಯ್ದೆ

ರಂಗಾರೆಡ್ಡಿ ಜಿಲ್ಲೆಯ ಮಲ್ಕಜ್​ಗಿರಿಯಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಆರೋಪದಡಿ ಪಿಡಿ ಕಾಯ್ದೆಯಡಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದರು. ಆ ಸಮಯದಲ್ಲಿ ಆಕೆ ಗರ್ಭಿಣಿಯಾಗಿದ್ದರು. ಗರ್ಭಿಣಿಯನ್ನು ಅರೆಸ್ಟ್​​ ಮಾಡಿರುವುದನ್ನು ಪ್ರಶ್ನಿಸಿ ನಲಗೊಂಡ ಮಹಿಳೆಯೊಬ್ಬರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು..

ತೆಲಂಗಾಣ ಹೈಕೋರ್ಟ್
ತೆಲಂಗಾಣ ಹೈಕೋರ್ಟ್
author img

By

Published : Jul 13, 2021, 12:09 PM IST

ಹೈದರಾಬಾದ್(ತೆಲಂಗಾಣ) : ತಾಯಿಯ ದುಷ್ಕೃತ್ಯಕ್ಕೆ ಮಗುವನ್ನು ಶಿಕ್ಷಿಸುವುದು ಸರಿಯೇ ಎಂದು ತೆಲಂಗಾಣ ಹೈಕೋರ್ಟ್ ಪೊಲೀಸರಿಗೆ ಪ್ರಶ್ನಿಸಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ರಾಜಶೇಖರ್ ರೆಡ್ಡಿ ಮತ್ತು ಶಮೀಮ್ ಅಖ್ತರ್ ಅವರಿದ್ದ ನ್ಯಾಯಪೀಠ, ತಾಯಿ ಮಾಡಿದ ತಪ್ಪಿಗೆ ಮಗುವನ್ನು ಶಿಕ್ಷಿಸುವುದು ಎಷ್ಟರ ಮಟ್ಟಿಗೆ ಸರಿ ಎಂದಿದೆ. ತಾಯಿಯ ತಪ್ಪು ಮಾಡಿದ್ರೆ ಮಗುವಿಗೆ ಶಿಕ್ಷೆ ನೀಡುವುದು ಸೂಕ್ತ ಕ್ರಮವಲ್ಲ ಎಂದು ಪೊಲೀಸರಿಗೆ ಸೂಚಿಸಿದೆ.

ರಂಗಾರೆಡ್ಡಿ ಜಿಲ್ಲೆಯ ಮಲ್ಕಜ್​ಗಿರಿಯಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಆರೋಪದಡಿ ಪಿಡಿ ಕಾಯ್ದೆಯಡಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದರು. ಆ ಸಮಯದಲ್ಲಿ ಆಕೆ ಗರ್ಭಿಣಿಯಾಗಿದ್ದರು. ಗರ್ಭಿಣಿಯನ್ನು ಅರೆಸ್ಟ್​​ ಮಾಡಿರುವುದನ್ನು ಪ್ರಶ್ನಿಸಿ ನಲಗೊಂಡ ಮಹಿಳೆಯೊಬ್ಬರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ಕೈಗೆತ್ತಿಕೊಂಡು ವಿಚಾರಣೆ ನಡೆಸಿದ ನ್ಯಾಯಪೀಠ, ತಾಯಿ ಮಾಡಿದ ತಪ್ಪಿಗೆ ಹುಟ್ಟಲಿರುವ ಮಗುವಿಗೆ ಶಿಕ್ಷೆ ನೀಡುವುದು ಸೂಕ್ತವಲ್ಲ. ಗರ್ಭಿಣಿಯರಿಗೆ ಈ ಸಮಯದಲ್ಲಿ ಒತ್ತಡಗಳಿರಬಾರದು ಎಂದು ತಿಳಿಸಿರುವ ಕೋರ್ಟ್​, ಈ ಪ್ರಕರಣದಲ್ಲಿ ಪಿಡಿ ಕಾಯ್ದೆಗಳನ್ನು ವಜಾಗೊಳಿಸಿ ತೀರ್ಪು ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.