ETV Bharat / bharat

ದಿಶಾ ಅತ್ಯಾಚಾರ ಪ್ರಕರಣದ ಆರೋಪಿಗಳ ಎನ್​ಕೌಂಟರ್ ​; ಇಂದು ಪುರಾವೆ ಸಲ್ಲಿಸಲಿರುವ ತೆಲಂಗಾಣ ಸರ್ಕಾರ - ತೆಲಂಗಾಣ ದಿಶಾ ಕೇಸ್​​

ದಿಶಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅತ್ಯಾಚಾರಿಗಳ ಎನ್‌ಕೌಂಟರ್​ಗೆ ಸಂಬಂಧಿಸಿದಂತೆ, ತೆಲಂಗಾಣ ಸರ್ಕಾರ ಇಂದು ಸುಪ್ರೀಂಕೋರ್ಟ್ ನೇಮಿತ ಸಮಿತಿಯ ಮುಂದೆ ಪುರಾವೆಗಳನ್ನು ಹಾಜರುಪಡಿಸಲಿದೆ..

Telangana Govt to present evidence in Disha encounter case to SC appointed panel
ದಿಶಾ ಅತ್ಯಾಚಾರ ಪ್ರಕರಣದ ಆರೋಪಿಗಳ ಎನ್​ಕೌಂಟರ್​; ಇಂದು ಪುರಾವೆ ಸಲ್ಲಿಸಲಿರುವ ತೆಲಂಗಾಣ ಸರ್ಕಾರ
author img

By

Published : Aug 21, 2021, 3:53 PM IST

ನವದೆಹಲಿ : ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳ ಎನ್​ಕೌಂಟರ್​​ಗೆ ಸಂಬಂಧಿಸಿದಂತೆ, ತೆಲಂಗಾಣ ಸರ್ಕಾರ ಇಂದು ಸುಪ್ರೀಂಕೋರ್ಟ್ ನೇಮಿತ ಸಮಿತಿಯ ಮುಂದೆ ಪುರಾವೆಗಳನ್ನು ಹಾಜರುಪಡಿಸಲಿದೆ.

ಈ ಹಿಂದೆ ದಿಶಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅತ್ಯಾಚಾರಿಗಳ ಎನ್‌ಕೌಂಟರ್​ಗೆ ಸಂಬಂಧಿಸಿದಂತೆ ತನ್ನ ಸಾಕ್ಷ್ಯವನ್ನು ಸಲ್ಲಿಸುವಂತೆ ತೆಲಂಗಾಣ ಸರ್ಕಾರಕ್ಕೆ ತಿಳಿಸಿ, ನ್ಯಾಯಮೂರ್ತಿ ವಿ ಎಸ್ ಸಿರ್ಪುಕರ್​ ನೇತೃತ್ವದ ಸಮಿತಿಯನ್ನು ಸುಪ್ರೀಂಕೋರ್ಟ್ ನೇಮಿಸಿತ್ತು.

ಹಿನ್ನೆಲೆ : 2019ರ ನವೆಂಬರ್​​ನಲ್ಲಿ ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಭಾರಿ ಸುದ್ದಿ ಮಾಡಿತ್ತು. ಈ ಕೇಸ್​​ ಜನರಲ್ಲಿ ಭಯದ ಜತೆಗೆ ಆಕ್ರೋಶ ಹುಟ್ಟಿಸಿತ್ತು. ಪ್ರಕರಣದ ಆರೋಪಿಗಳನ್ನು ಡಿ.6ರಂದು ಪೊಲೀಸರು ಎನ್​ಕೌಂಟರ್​ ಮಾಡಿದ್ದರು.​ ಎನ್​ಕೌಂಟರ್ ಮಾಡಿದ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಈ ಎನ್​ಕೌಂಟರ್​ ಕಾನೂನು ಬಾಹಿರ ಎಂದೂ ಹೇಳಲಾಗಿತ್ತು. ಎನ್​ಕೌಂಟರ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕ್ಷಿಯನ್ನು ಇಂದು ಸಂಜೆಯೊಳಗೆ ಸಲ್ಲಿಸುವಂತೆ ತೆಲಂಗಾಣ ಸರ್ಕಾರಕ್ಕೆ, ಸುಪ್ರೀಂಕೋರ್ಟ್​ ನೇಮಕ ಮಾಡಿರುವ ನ್ಯಾಯಮೂರ್ತಿ ಸಿರ್ಪುಕರ್​ ಆಯೋಗ ಸೂಚನೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.