ETV Bharat / bharat

ಮಂಡ್ಯ ಕುಟುಂಬಕ್ಕೆ ನೆರವಾಗುವಂತೆ ಡಿಕೆಶಿ ಮನವಿ.. ಅರ್ಧಗಂಟೆಯಲ್ಲಿ ಸ್ಪಂದಿಸಿದ ತೆಲಂಗಾಣ ಸಚಿವ

ಕೇವಲ ಅರ್ಧ ಗಂಟೆಯಲ್ಲಿ ಸ್ಪಂದಿಸಿರುವ ತೆಲಂಗಾಣ ಟಿಆರ್​ಎಸ್​​​ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಸಚಿವ ಕಲ್ವಕುಂಟ್ಲ ತಾರಕ ರಾಮರಾವ್ (ಕೆಟಿಆರ್), ಶಿವಕುಮಾರ್ ಅವರೇ, ನಾವು ಆ ಕುಟುಂಬದ ಕಾಳಜಿ ವಹಿಸುತ್ತೇವೆ..

ಮಂಡ್ಯ ಕುಟುಂಬಕ್ಕೆ ನೆರವಾಗುವಂತೆ ಡಿಕೆಶಿ ಮನವಿ

author img

By

Published : May 30, 2021, 8:59 PM IST

Updated : May 30, 2021, 9:30 PM IST

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನವಿಗೆ ತೆಲಂಗಾಣ ಸರ್ಕಾರ ತ್ವರಿತವಾಗಿ ಸ್ಪಂದಿಸಿದೆ. ಸಂಕಷ್ಟದಲ್ಲಿರುವ ಮಂಡ್ಯದ ಕುಟುಂಬವೊಂದರ ರಕ್ಷಣೆ ಮಾಡುವಂತೆ ಟ್ವೀಟ್ ಮೂಲಕ ಡಿಕೆಶಿ ಮನವಿ ಮಾಡಿದ್ದರು. ಈ ಕುರಿತು ತ್ವರಿತವಾಗಿ ಸ್ಪಂದಿಸಿರುವ ಕೆಸಿಆರ್ ಸರ್ಕಾರ ಈ ವಿಚಾರದಲ್ಲಿ ಆತಂಕ ಬೇಡ ಎಂದು ಭರವಸೆ ನೀಡಿದೆ.

  • I request Telanagana CM KCR Garu to kindly help the family of Shashikala Manjunath from Mandya, whose husband died at Medicover hospital. She informs me the hospital isn’t releasing his body as she has been able to pay only 2 lakh out of the 7.5 lakh bill. @TelanganaCMO @KTRTRS

    — DK Shivakumar (@DKShivakumar) May 30, 2021 " class="align-text-top noRightClick twitterSection" data=" ">

ಮಂಡ್ಯ ಮೂಲಕ ಶಶಿಕಲಾ ಮಂಜುನಾಥ್ ಅವರ ಕುಟುಂಬ ಆಸ್ಪತ್ರೆಯ ಬಿಲ್​ ತುಂಬಲಾಗದೇ ಸಂಕಷ್ಟದಲ್ಲಿತ್ತು. ಹೈಟೆಕ್​ ಸಿಟಿಯಲ್ಲಿರುವ ಮೆಡಿಕೋವರ್ ಆಸ್ಪತ್ರೆಯಲ್ಲಿ ಶಶಿಕಲಾ ಅವರ ಪತಿ ಮಂಜುನಾಥ್​ ಇಂದು ನಿಧನರಾಗಿದ್ದಾರೆ. ಪತಿಯ ಚಿಕಿತ್ಸೆಗಾಗಿ ಶಶಿಕಲಾ ಅವರು ಸಾಕಷ್ಟು ಹಣ ವ್ಯಯಿಸಿದ್ದರೂ ಸಹ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.

ಅಂತಿಮವಾಗಿ 7.5 ಲಕ್ಷ ರೂ. ಬಿಲ್ ಆಗಿದ್ದು, ಇದರಲ್ಲಿ 2 ಲಕ್ಷ ರೂಪಾಯಿಯನ್ನು ಮಾತ್ರ ಶಶಿಕಲಾ ಭರಿಸಿದ್ದಾರೆ. ಆದರೆ, ತೆಲಂಗಾಣ ಸರ್ಕಾರದ ಸೂಚನೆ ಮೇರೆಗೆ ಮೃತದೇಹವನ್ನು ಆಸ್ಪತ್ರೆ ಆಡಳಿತ ಮಂಡಳಿ ಬಿಟ್ಟುಕೊಟ್ಟಿದೆ. ಕೆಪಿಸಿಸಿ ಅಧ್ಯಕ್ಷರ ಮನವಿಗೆ ಸ್ಪಂದಿಸಿರುವ ಸಿಎಂ ಕೆಸಿಆರ್​ ಅವರ ಪುತ್ರ, ಸಚಿವ ಕೆ ಟಿ ಆರ್​ ಅವರು ಶಶಿಕಲಾ ಕುಟುಂಬದ ಸಂಕಷ್ಟಕ್ಕೆ ಶೀಘ್ರವಾಗಿ ಸ್ಪಂದಿಸಿದ್ದಾರೆ.

ಸ್ಪಂದಿಸಿದ ಸರ್ಕಾರ

ಕೇವಲ ಅರ್ಧ ಗಂಟೆಯಲ್ಲಿ ಸ್ಪಂದಿಸಿರುವ ತೆಲಂಗಾಣ ಸಚಿವ ಟಿಆರ್​ಎಸ್​​​ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಸಚಿವ ಕಲ್ವಕುಂಟ್ಲ ತಾರಕ ರಾಮರಾವ್ (ಕೆಟಿಆರ್), ಶಿವಕುಮಾರ್ ಅವರೇ, ನಾವು ಆ ಕುಟುಂಬದ ಕಾಳಜಿ ವಹಿಸುತ್ತೇವೆ.

ದಯವಿಟ್ಟು ಅವರ ಸಂಪರ್ಕ ವಿವರ ನೀಡಿ. ತಮ್ಮ ಕಚೇರಿ ಅಧಿಕಾರಿಗಳು ಕೂಡಲೇ ಆಸ್ಪತ್ರೆ ಮೂಲವನ್ನು ಸಂಪರ್ಕಿಸಿ ಮಾಹಿತಿ ಪಡೆಯಲಿದ್ದಾರೆ ಎಂದು ಭರವಸೆ ನೀಡಿದ್ದರು. ಅದರಂತೆ ನಡೆದುಕೊಂಡಿದ್ದಾರೆ.

ತೆಲಂಗಾಣ ಸರ್ಕಾರ ಹಾಗೂ ಸಚಿವ ಕೆಟಿಆರ್​ ಅವರಿಂದ ಶೀಘ್ರ ಸ್ಪಂದನೆ ಮತ್ತು ಮಂಡ್ಯದ ಕುಟುಂಬಕ್ಕೆ ನೆರವಾಗಿದ್ದಕ್ಕೆ ಡಿಕೆಶಿ ಅವರು ಧನ್ಯವಾದ ತಿಳಿಸಿದ್ದಾರೆ.

Last Updated : May 30, 2021, 9:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.