ಹೈದರಾಬಾದ್ : ಕೋವಿಡ್ ಪ್ರಕರಣಗಳ ತೀವ್ರತೆ ಹಾಗೂ ಸೋಂಕಿತರನ್ನು ಪತ್ತೆ ಹಚ್ಚಲು ತೆಲಂಗಾಣ ಸರ್ಕಾರ ಇಂದಿನಿಂದ ಮನೆ-ಮನೆ ಜ್ವರ ಸಮೀಕ್ಷೆಗೆ ಮುಂದಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೌರಾಡಳಿತ, ನಗರಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇಂದಿನಿಂದ ಸಮೀಕ್ಷೆ ಪ್ರಾರಂಭವಾಗಿದೆ. ಕೋವಿಡ್ ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚುವುದೇ ಇದರ ಮುಖ್ಯ ಗುರಿಯಾಗಿದೆ.
ಜ್ವರ ಸಮೀಕ್ಷೆಯ ಸಹಾಯದಿಂದ ವೈದ್ಯಕೀಯ ಸಿಬ್ಬಂದಿ ಔಷಧಿ ಕಿಟ್‌ಗಳನ್ನು ಪೂರೈಸುತ್ತಾರೆ. ಕೋವಿಡ್‌ನಿಂದ ಬಳಲುತ್ತಿರುವವರನ್ನು ತಕ್ಷಣವೇ ಪ್ರತ್ಯೇಕಿಸುತ್ತಾರೆ. ಇದು ಒಮಿಕ್ರಾನ್ ರೂಪಾಂತರ ಹರಡುವಿಕೆಯ ಸರಪಳಿ ಮುರಿಯಲು ನೆರವಾಗಲಿದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಕೆಸಿಆರ್ ಅವರ ನಿರ್ದೇಶನದಂತೆ ಇಂದಿನಿಂದ ರಾಜ್ಯಾದ್ಯಂತ ಜ್ವರ ಸಮೀಕ್ಷೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಟಿ ಹರೀಶ್ ರಾವ್ ತಿಳಿಸಿದ್ದಾರೆ.
ಸೌಮ್ಯ ರೋಗಲಕ್ಷಣಗಳು ಅಥವಾ ಇತರ ಕಾರಣಗಳಿಗಾಗಿ ಕೋವಿಡ್ ಪರೀಕ್ಷೆಗೆ ಒಳಗಾಗದ ಜನಸಂಖ್ಯೆಯ ದೊಡ್ಡ ಭಾಗವೇ ಇದೆ. ಜ್ವರ ಸಮೀಕ್ಷೆಯು ಅಂತಹ ವ್ಯಕ್ತಿಗಳ ಮನೆ ಬಾಗಿಲಿಗೆ ಕೋವಿಡ್ ಆರೋಗ್ಯ ಸೇವೆಗಳನ್ನು ಒದಗಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ