ETV Bharat / bharat

ಸರಸರನೇ ಕಂಬ ಹತ್ತುವ ಯುವತಿ.. ಜೂನಿಯರ್​ ಲೈನ್​ಮೆನ್​ ಹುದ್ದೆ ಗಿಟ್ಟಿಸಿಕೊಂಡ ತೆಲಂಗಾಣದ ಸಿರಿಶಾ

author img

By

Published : May 19, 2022, 3:49 PM IST

Updated : May 19, 2022, 4:08 PM IST

ವಿದ್ಯುತ್​ ದುರಸ್ತಿ ಕಾರ್ಯ ಮಾಡುವ ಲೈನ್​ಮೆನ್​ ಕೆಲಸಕ್ಕೆ ಮಹಿಳೆಯರು ಫಿಟ್​ ಅಲ್ಲ ಎಂಬುದನ್ನು ಸುಳ್ಳು ಮಾಡಿದ್ದಾರೆ ತೆಲಂಗಾಣದ ಯುವತಿ ಸಿರಿಶಾ. ತೆಲಂಗಾಣ ವಿದ್ಯುತ್​​ ಇಲಾಖೆ ನಡೆಸಿದ ಜೆಎಲ್​ಎಂ ಹುದ್ದೆ ಆಯ್ಕೆಯಲ್ಲಿ ಉತ್ತೀರ್ಣರಾಗಿ ಜಾಬ್​ ಗಿಟ್ಟಿಸಿಕೊಂಡಿದ್ದಾರೆ.

telangana-girl-
ತೆಲಂಗಾಣದ ಸಿರಿಶಾ

ಹೈದರಾಬಾದ್​(ತೆಲಂಗಾಣ) : ರಿಸ್ಕ್​ ಜಾಬ್​ ಆದ ಲೈನ್​ಮನ್​ ಕೆಲಸಕ್ಕೆ ಪುರುಷರೇ ಹಿಂದೇಟು ಹಾಕಬೇಕಾದರೆ, ತೆಲಂಗಾಣದ ಯುವತಿಯೊಬ್ಬಳು ಸರಸರನೇ ಕಂಬ ಹತ್ತಿ ವಿದ್ಯುತ್​ ಸಂಪರ್ಕ ದುರಸ್ತಿ ಮಾಡುವುದನ್ನು ಕಲಿತು ಜೂನಿಯರ್​ ಲೈನ್​ಮೆನ್​ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಅವರು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿಯೇ ಮೊದಲ ಲೈನ್​ ವುಮೆನ್​ ಎನಿಸಿಕೊಂಡಿದ್ದಾರೆ.

ಜೂನಿಯರ್​ ಲೈನ್​ಮೆನ್​ ಹುದ್ದೆ ಗಿಟ್ಟಿಸಿಕೊಂಡ ತೆಲಂಗಾಣದ ಸಿರಿಶಾ

ಸಿದ್ದಿಪೇಟೆ ಜಿಲ್ಲೆಯ ಗಣೇಶಪಲ್ಲಿ ಗ್ರಾಮದ ಸಿರಿಶಾ ತೆಲಂಗಾಣ ರಾಜ್ಯ ಸದರ್ನ್ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್ (ಟಿಎಸ್‌ಎಸ್‌ಪಿಡಿಸಿಎಲ್) ನಡೆಸಿದ ಲೈನ್‌ಮನ್​ಗಳ ಆಯ್ಕೆಯಲ್ಲಿ ಜೂನಿಯರ್​ ಲೈನ್​ಮೆನ್​ ಹುದ್ದೆ ಪಡೆದುಕೊಂಡವರು. ಆಯ್ಕೆಯ ವೇಳೆ ಸಿರಿಶಾ ಅವರು ಕಂಬವನ್ನು ಸುಲಲಿತವಾಗಿ ಹತ್ತಿ, ಇಳಿಯುವುದನ್ನು ಕಲಿತಿದ್ದು, ಹುದ್ದೆಗೆ ಆಯ್ಕೆ ಮಾಡಲಾಗಿದೆ. ಇಂಧನ ಸಚಿವ ಜಗದೀಶ್ ರೆಡ್ಡಿ ಅವರು ಮೊದಲ ಲೈನ್​ ವುಮೆನ್​ ಸಿರಿಶಾಗೆ ನೇಮಕಾತಿ ಪತ್ರ ವಿತರಿಸಿದರು.

ಟಿಎಸ್‌ಎಸ್‌ಪಿಡಿಸಿಎಲ್‌ನಲ್ಲಿ ಮೊದಲ ಮಹಿಳಾ ಲೈನ್‌ಮೆನ್ ಆಗಿರುವುದು ಸಂತಸ ತಂದಿದೆ. ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಮತ್ತು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಬಹುದು ಎಂಬುದು ಸಿರಿಶಾರ ಮಾತಾಗಿದೆ.

ಜೆಎಲ್​ಎಂ ಹುದ್ದೆಗೆ ಮಹಿಳೆಯಿಂದಲೂ ಹೆಚ್ಚಿನ ಅರ್ಜಿಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಆದ್ಯತಾನುಸಾರ ಆಯ್ಕೆ ಮಾಡಲು ಸೂಚಿಸಿದೆ. ಈ ಹಿಂದೆ ತೆಲಂಗಾಣದ ಟ್ರಾನ್ಸ್‌ಕೋ ವಿದ್ಯುತ್ ವಲಯವು ಇತಿಹಾಸದಲ್ಲಿಯೇ ಮೊದಲ ಬಾರಿಗೆ 200 ಲೈನ್‌ವುಮೆನ್‌ಗಳನ್ನು ನೇಮಿಸಿಕೊಂಡಿತ್ತು.

ಓದಿ: 34 ವರ್ಷಗಳ ಹಿಂದಿನ ಪ್ರಕರಣ: ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲು ಶಿಕ್ಷೆ

Last Updated : May 19, 2022, 4:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.