ಹೈದರಾಬಾದ್ (ತೆಲಂಗಾಣ): ಜೂನ್ 2, 2014 ರಂದು ಹೊಸದಾಗಿ ಅಸ್ತಿತ್ವಕ್ಕೆ ಬಂದ ತೆಲಂಗಾಣ ರಾಜ್ಯ ಇದೀಗ 9 ವರ್ಷಗಳನ್ನು ಪೂರೈಸಿದೆ. ರಾಜ್ಯ ಹತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ದಶಮಾನೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಮೂರು ವಾರಗಳ ಕಾಲ ವಿಶೇಷ ಆಚರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅದಕ್ಕೆ ತಕ್ಕಂತೆ ವ್ಯವಸ್ಥೆಗಳನ್ನು ಮಾಡಿದೆ. ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್ ಅವರು ಇಂದು ಸೆಕ್ರೆಟರಿಯೇಟ್‌ನಲ್ಲಿ ಈ ಆಚರಣೆಗಳನ್ನು ಉದ್ಘಾಟಿಸಲಿದ್ದಾರೆ.
ಕೆಸಿಆರ್ ಇಂದು ಬೆಳಗ್ಗೆ ಗನ್‌ಪಾರ್ಕ್‌ನಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸಿದ್ದು, ನಂತರ ಸೆಕ್ರೆಟರಿಯೇಟ್‌ನಲ್ಲಿ ಆಚರಣೆಗೆ ಚಾಲನೆ ನೀಡುವರು. ಈ ವೇಳೆ ರಾಷ್ಟ್ರಧ್ವಜ ಹಾರಿಸಿ ಪೊಲೀಸ್ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಆ ಬಳಿಕ ರಾಜ್ಯವನ್ನು ಉದ್ದೇಶಿಸಿ ದಶಮಾನೋತ್ಸವ ಸಂದೇಶ ನೀಡಲಿದ್ದಾರೆ. ಸೆಕ್ರೆಟರಿಯೇಟ್ ಉದ್ಘಾಟನೆಯ ನಂತರ ಮೊದಲ ಕಾರ್ಯಕ್ರಮ ಆಯೋಜಿಸಲು ವ್ಯವಸ್ಥೆ ಮಾಡಲಾಗಿದೆ. ಒಟ್ಟು 15,000 ಜನರು ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆಯಾಗಿದೆ.
-
#WATCH | Telangana CM K Chandrashekar Rao lays a wreath and pays tribute to the leaders of the Telangana movement, at the Martyrs' Memorial in Hyderabad, on the occasion of #TelanganaFormationDay pic.twitter.com/wC9t0sqhf3
— ANI (@ANI) June 2, 2023 " class="align-text-top noRightClick twitterSection" data="
">#WATCH | Telangana CM K Chandrashekar Rao lays a wreath and pays tribute to the leaders of the Telangana movement, at the Martyrs' Memorial in Hyderabad, on the occasion of #TelanganaFormationDay pic.twitter.com/wC9t0sqhf3
— ANI (@ANI) June 2, 2023#WATCH | Telangana CM K Chandrashekar Rao lays a wreath and pays tribute to the leaders of the Telangana movement, at the Martyrs' Memorial in Hyderabad, on the occasion of #TelanganaFormationDay pic.twitter.com/wC9t0sqhf3
— ANI (@ANI) June 2, 2023
ತೆಲಂಗಾಣ ರಾಜ್ಯ ಸಂಸ್ಥಾಪನಾ ಸಮಾರಂಭ 2023: ಸೆಕ್ರೆಟರಿಯೇಟ್ ಮತ್ತು GHMC ಅಡಿಯಲ್ಲಿನ ಇಲಾಖೆಗಳ ಮುಖ್ಯಸ್ಥರ ಕಚೇರಿಗಳ ನೌಕರರು ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರಿಗಾಗಿಯೇ 300 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಮಳೆ, ಬಿಸಿಲಿನಿಂದ ಯಾವುದೇ ತೊಂದರೆಯಾಗದಂತೆ ಟೆಂಟ್ ಹಾಕಲಾಗಿದೆ. ಉದ್ಘಾಟನಾ ಸಮಾರಂಭಕ್ಕೆ 1.80 ಕೋಟಿ ರೂ ಮಂಜೂರಾಗಿದೆ. ಎಲ್ಲ ಇಲಾಖಾ ಮುಖ್ಯಸ್ಥರು ಬೆಳಗ್ಗೆ ಏಳೂವರೆ ಗಂಟೆಗೆ ತಮ್ಮ ಕಚೇರಿಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಎಂಟು ಗಂಟೆಯೊಳಗೆ ಸೆಕ್ರೆಟರಿಯೇಟ್ ತಲುಪುವಂತೆ ಆದೇಶ ನೀಡಲಾಗಿದೆ.
ಸೆಕ್ರೆಟರಿಯೇಟ್‌ನ ಮುಖ್ಯ ದ್ವಾರದ ಮುಂಭಾಗದಲ್ಲಿ ಸಮಾರಂಭದ ವ್ಯವಸ್ಥೆ ಮಾಡಲಾಗಿದ್ದು, ಕೆಸಿಆರ್ ಪಶ್ಚಿಮ ದ್ವಾರದಿಂದ ಸೆಕ್ರೆಟರಿಯೇಟ್‌ಗೆ ಆಗಮಿಸಲಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಸಚಿವರು ಹಾಗೂ ಗಣ್ಯರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂಭ್ರಮಾಚರಣೆಗೆ ಚಾಲನೆ ನೀಡಲಿದ್ದಾರೆ. ಸಾರ್ವಜನಿಕ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ಸಂಭ್ರಮಾಚರಣೆಯಲ್ಲಿ ಭಾಗವಹಿಸುತ್ತಾರೆ. ರಾಜ್ಯದ ಎಲ್ಲ ಸರ್ಕಾರಿ ಸಂಸ್ಥೆಗಳು ಮತ್ತು ಕಚೇರಿಗಳಲ್ಲಿ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ.
ತೆಲಂಗಾಣ ದಶಮಾನೋತ್ಸವದ ವೇಳಾಪಟ್ಟಿ: ಆಚರಣೆಯ ಸಂದರ್ಭದಲ್ಲಿ ರಾಜಧಾನಿಯೊಂದಿಗೆ ಎಲ್ಲ ಜಿಲ್ಲೆಗಳಲ್ಲಿನ ಕಚೇರಿಗಳು, ಐತಿಹಾಸಿಕ ಕಟ್ಟಡಗಳು, ಮುಖ್ಯ ಚೌಕಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಇದೇ 22 ರವರೆಗೆ 21 ದಿನಗಳ ಕಾಲ ರಾಜ್ಯಾದ್ಯಂತ ದಶಮಾನೋತ್ಸವ ನಡೆಯಲಿದೆ. ಪ್ರತಿ ಕ್ಷೇತ್ರಕ್ಕೆ ಪ್ರತಿ ದಿನವನ್ನು ನಿಗದಿಪಡಿಸಿ ಆ ಕ್ಷೇತ್ರಗಳಲ್ಲಿ ಒಂಬತ್ತು ವರ್ಷಗಳ ಪ್ರಗತಿಯನ್ನು ವಿವರಿಸಲಾಗುವುದು. ಸಮಾಜದ ಎಲ್ಲ ವರ್ಗದ ಜನರು, ಸರ್ಕಾರದ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳ ಫಲಾನುಭವಿಗಳನ್ನು ಆಚರಿಸಲಾಗುತ್ತದೆ.
ಮೂರು ವಾರಗಳ ಕಾಲ ಕೆರೆ, ವಸತಿ ನಿಲಯಗಳು, ಅಂಗನವಾಡಿಗಳು, ಮಹಿಳಾ ಕಚೇರಿಗಳು, ಗುರುಕುಲಗಳು, ಶಿಕ್ಷಣ ಸಂಸ್ಥೆಗಳು, ಆಯಾ ಇಲಾಖೆಗಳ ಕಚೇರಿಗಳಲ್ಲಿ ಉತ್ಸವಗಳು ಮತ್ತು ಸಭೆಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿ, ಓಟ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಕೊನೆಯ ದಿನವಾದ 22ರಂದು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದಶಮಾನೋತ್ಸವಕ್ಕೆ 105 ಕೋಟಿ ರೂ ಬಿಡುಗಡೆ: ರಾಜ್ಯಾದ್ಯಂತ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಂಸ್ಮರಣಾ ನಿರ್ಣಯಗಳನ್ನು ಹಮ್ಮಿಕೊಳ್ಳಲಾಗಿದೆ. ಹೈದರಾಬಾದ್‌ನ ಟ್ಯಾಂಕ್‌ಬಂಡ್‌ನಲ್ಲಿ ಹುತಾತ್ಮ ಯೋಧರ ಗೌರವಾರ್ಥ ಕಲಾವಿದರೊಂದಿಗೆ ಬೃಹತ್ ಜಾಥಾ ಆಯೋಜಿಸಲಾಗಿದೆ. ಮೂರು ವಾರಗಳ ಕಾಲ ರಾಜ್ಯಾದ್ಯಂತ ನಡೆಯಲಿರುವ ಆಚರಣೆಗೆ ರಾಜ್ಯ ಸರ್ಕಾರ 105 ಕೋಟಿ ರೂ. ಬಿಡುಗಡೆ ಮಾಡಿದೆ. ಜಿಲ್ಲೆಯ ವಿಸ್ತೀರ್ಣ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಆಯಾ ಜಿಲ್ಲೆಗಳಿಗೆ ಈ ಹಣ ಹಂಚಿಕೆ ಮಾಡಲಾಗುತ್ತದೆ.
ಇದನ್ನೂ ಓದಿ: ಇಂದು ಜಾರಿಯಾಗಲಿವೆಯಾ ಪಂಚ ಗ್ಯಾರಂಟಿ ?: ಸಚಿವ ಸಂಪುಟ ಸಭೆಯತ್ತ ರಾಜ್ಯದ ಜನರ ಚಿತ್ತ