ETV Bharat / bharat

ತೆಲಂಗಾಣ ಚುನಾವಣೆ; 4,798 ಅಭ್ಯರ್ಥಿಗಳಿಂದ ನಾಮಪತ್ರ, ಪಕ್ಷೇತರರೇ ಅಧಿಕ - 119 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು

ತೆಲಂಗಾಣ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕೊನೆಗೊಂಡಿದೆ.

Telangana polls: 4,798 candidates file nominations

author img

By ETV Bharat Karnataka Team

Published : Nov 12, 2023, 4:22 PM IST

ಹೈದರಾಬಾದ್ : ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ನಡೆಯಲಿರುವ ಚುನಾವಣೆಗೆ 4,798 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 119 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶುಕ್ರವಾರ 4,798 ಅಭ್ಯರ್ಥಿಗಳ ಪೈಕಿ ಸುಮಾರು ಅರ್ಧದಷ್ಟು ಜನ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ನವೆಂಬರ್ 3 ರಿಂದ ಇಲ್ಲಿಯವರೆಗೆ ಒಟ್ಟು 5,716 ಸೆಟ್ ನಾಮಪತ್ರಗಳನ್ನು ಚುನಾವಣಾ ಅಧಿಕಾರಿಗಳು ಸ್ವೀಕರಿಸಿದ್ದಾರೆ. ಇದರಲ್ಲಿ ಬಹುತೇಕ ಅಭ್ಯರ್ಥಿಗಳು ಪಕ್ಷೇತರರಾಗಿದ್ದಾರೆ. ಮುಖ್ಯ ಚುನಾವಣಾಧಿಕಾರಿ ವಿಕಾಸ್ ರಾಜ್ ಅವರ ಪ್ರಕಾರ, ಕೊನೆಯ ದಿನ 2,324 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಆ ದಿನ ಒಟ್ಟು 2,768 ಸೆಟ್ ನಾಮಪತ್ರಗಳು ಸಲ್ಲಿಕೆಯಾಗಿವೆ. ನವೆಂಬರ್ 13 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನವೆಂಬರ್ 15 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ಮುಖ್ಯಮಂತ್ರಿ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್​ಎಸ್​) ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ಅವರು ಸತತ ಮೂರನೇ ಬಾರಿಗೆ ಮರು ಆಯ್ಕೆ ಬಯಸಿ ಗಜ್ವೆಲ್ ನಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಗರಿಷ್ಠ 145 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕೆಸಿಆರ್ ಅವರ ತವರು ಜಿಲ್ಲೆ ಸಿದ್ದಿಪೇಟೆಯಲ್ಲಿರುವ ಗಜ್ವೆಲ್​ನಲ್ಲಿ ಬಿಜೆಪಿ ತನ್ನ ಶಾಸಕ ಮತ್ತು ಮಾಜಿ ಸಚಿವ ಈಟಾಲಾ ರಾಜೇಂದರ್ ಅವರನ್ನು ಕಣಕ್ಕಿಳಿಸಿದೆ. ಈಟಾಲಾ ರಾಜೇಂದರ್ ಅವರನ್ನು 2021ರಲ್ಲಿ ಕೆಸಿಆರ್ ತಮ್ಮ ಕ್ಯಾಬಿನೆಟ್​ನಿಂದ ಕೈಬಿಟ್ಟಿದ್ದರು. ನಂತರ 2021 ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದ ಈಟಾಲಾ ಈಗ ಹುಜುರಾಬಾದ್​ನಿಂದ ಸ್ಪರ್ಧಿಸುತ್ತಿದ್ದಾರೆ.

ಈ ಬಾರಿ ಕೆಸಿಆರ್ ಕಾಮರೆಡ್ಡಿ ಕ್ಷೇತ್ರದಿಂದ ಕೂಡ ಸ್ಪರ್ಧಿಸುತ್ತಿದ್ದು, ಇಲ್ಲಿ 92 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಎ. ರೇವಂತ್ ರೆಡ್ಡಿ ಮುಖ್ಯಮಂತ್ರಿಗೆ ಇಲ್ಲಿ ಎದುರಾಳಿಯಾಗಿದ್ದಾರೆ. ರೇವಂತ್ ರೆಡ್ಡಿ ತಮ್ಮ ತವರು ಕ್ಷೇತ್ರ ಕೊಡಂಗಲ್ ನಿಂದ ಕೂಡ ಕಣಕ್ಕೆ ಇಳಿದಿದ್ದಾರೆ. ಕಾರ್ಮಿಕ ಸಚಿವ ಮಲ್ಲಾ ರೆಡ್ಡಿ ಅವರು ಬಿಆರ್​ಎಸ್ ಅಭ್ಯರ್ಥಿಯಾಗಿ ಮತ್ತೆ ಮೇಡಚಾಲ್​ನಲ್ಲಿ ಸ್ಪರ್ಧಿಸುತ್ತಿದ್ದು, ಇಲ್ಲಿ ಒಟ್ಟು 116 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮೆಹಬೂಬ್ ನಗರ ಜಿಲ್ಲೆಯ ನಾರಾಯಣಪೇಟ್ ಕ್ಷೇತ್ರದಲ್ಲಿ ಕೇವಲ 13 ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.

ಖಮ್ಮಮ್ ಮತ್ತು ನಾರಾಯಣಪೇಟ್ ಜಿಲ್ಲೆಗಳ ವೈರಾ (ಎಸ್ಟಿ) ಮತ್ತು ಮಕ್ತಲ್ ಕ್ಷೇತ್ರಗಳಿಂದ ತಲಾ 19 ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸ್ಪರ್ಧಿಸುತ್ತಿರುವ ಎರಡು ಕ್ಷೇತ್ರಗಳಲ್ಲಿ ಒಂದಾದ ಕಾಮರೆಡ್ಡಿಯಲ್ಲಿ ಕೊನೆಯ ದಿನ 37 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಬಿಆರ್​ಎಸ್​ ಎಲ್ಲಾ 119 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದರೆ, ಕಾಂಗ್ರೆಸ್ ತನ್ನ ಮಿತ್ರ ಪಕ್ಷ ಸಿಪಿಐಗೆ ಒಂದು ಸ್ಥಾನವನ್ನು ಬಿಟ್ಟುಕೊಟ್ಟಿದೆ. ಬಿಜೆಪಿ 111 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಉಳಿದ ಸ್ಥಾನಗಳನ್ನು ತನ್ನ ಮಿತ್ರ ಪಕ್ಷ ಜನಸೇನಾ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಎಂಐಎಂ ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಮತ್ತು ಉಳಿದ ಸ್ಥಾನಗಳಲ್ಲಿ ಬಿಆರ್​ಎಸ್​ ಅನ್ನು ಬೆಂಬಲಿಸುತ್ತಿದೆ.

ಇದನ್ನೂ ಓದಿ : ಈ ಬಾರಿ ಭಾರತ ಗೆಲ್ಲದಿದ್ರೆ ಇನ್ನು ಮೂರು ವಿಶ್ವಕಪ್​ಗಳವರೆಗೆ ಸಾಧ್ಯವಿಲ್ಲ; ರವಿಶಾಸ್ತ್ರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.